Pushpa 2: ಮತ್ತಷ್ಟು ಏರಿಕೆಯಾಗಿದೆ ಪುಷ್ಪ ಸಿನಿಮಾ ಬಜೆಟ್! ಒಟ್ಟು ಮೊತ್ತ ಎಷ್ಟು ಗೊತ್ತಾ?
ಪುಷ್ಪ ಸಿನಿಮಾ ಸೀಕ್ವೆಲ್ಗಾಗಿ ಅಭಿಮಾನಿಗಳು ಭಾರೀ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ. ಆದರೆ ಈ ಚಿತ್ರದ ಬಗ್ಗೆ ಇತ್ತೀಚಿನ ಅಪ್ಡೇಟ್ ಸದ್ದು ಮಾಡುತ್ತಿದೆ. ಪುಷ್ಪ 2 ಬಜೆಟ್ ಹೆಚ್ಚಾಗಿದೆಯಂತೆ. ಅದ್ಧೂರಿ ಬಜೆಟ್ನಲ್ಲಿ ಸುಕುಮಾರ್ ಪುಷ್ಪ 2 ಚಿತ್ರ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.
ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ: ದಿ ರೂಲ್ ಟಾಲಿವುಡ್ನ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ಪುಷ್ಪ ದಿ ರೈಸ್ ಪ್ಯಾನ್ ಇಂಡಿಯಾ ಹಿಟ್ ಸೀಕ್ವೆಲ್ಗಾಗಿ ಕಾತರದಿಂದ ಕಾಯುತ್ತಿದ್ದಾರೆ ಅಭಿಮಾನಿಗಳು.
2/ 7
'ಪುಷ್ಪ ದಿ ರೈಸ್' ಚಿತ್ರ ಸೃಷ್ಟಿಸಿದ ಸಂಚಲನದ ಹಿನ್ನೆಲೆಯಲ್ಲಿ ನಿರ್ದೇಶಕ ಸುಕುಮಾರ್ ಅವರು 'ಪುಷ್ಪ ದಿ ರೂಲ್' ಚಿತ್ರಕ್ಕಾಗಿ ಹೆಚ್ಚಿನ ತಯಾರಿ ಮಾಡಲಿದ್ದಾರೆ.
3/ 7
ಪುಷ್ಪ 2 ಚಿತ್ರಕ್ಕಾಗಿ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಈ ಸಿನಿಮಾ ಸೆಟ್ಟೇರಿದೆ. ಈ ಸಿನಿಮಾ 2023ರ ಬೇಸಿಗೆಯಲ್ಲಿ ಬಿಡುಗಡೆಯಾಗಲಿದೆಯಂತೆ.
4/ 7
ಪುಷ್ಪಾ ಈಗಾಗಲೇ ಹೇಳಿದಂತೆ ಬಿಗ್ ಬಜೆಟ್ ಸಿನಿಮಾ. ಸ್ಟಾರ್ ನಟರು, ಗೆಸ್ಟ್ ರೋಲ್ ಎಂದು ಬಹಳಷ್ಟು ಬಜೆಟ್ನಲ್ಲಿ ಸ್ಟಾರ್ ಬಳಗ ಕೂಡಾ ಈ ಸಿನಿಮಾದಲ್ಲಿರಲಿದೆ.
5/ 7
ಪುಷ್ಪ ಮೊದಲ ಭಾಗಕ್ಕೆ ಅಲ್ಲು ಅರ್ಜುನ್ ರು.45 ಕೋಟಿ ತೆಗೆದುಕೊಂಡಿದ್ದಾರೆ. ಎರಡನೇ ಭಾಗಕ್ಕೆ 120 ಕೋಟಿ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಮೊದಲ ಭಾಗಕ್ಕೆ ನಿರ್ದೇಶಕ ಸುಕುಮಾರ್ ತೆಗೆದುಕೊಂಡಿದ್ದು 18 ಕೋಟಿ ರೂಪಾಯಿ. ಇದರೊಂದಿಗೆ ಎರಡನೇ ಭಾಗಕ್ಕೆ ರು.45 ಕೋಟಿ ತೆಗೆದುಕೊಳ್ಳಲಿದ್ದಾರಂತೆ ನಿರ್ದೇಶಕ.
6/ 7
ಈ ಸಿನಿಮಾದಲ್ಲಿ ಇತರ ನಟರು ಮತ್ತು ತಂತ್ರಜ್ಞರಿಗೆ ರೂ.75 ಕೋಟಿ ವರೆಗೆ ನೀಡಲಾಗುವುದು ಎನ್ನಲಾಘಿದೆ. ಚಿತ್ರದ ಒಟ್ಟು ಬಜೆಟ್ ರು.400 ಕೋಟಿಗೂ ಹೆಚ್ಚು ಎಂದು ಹೇಳಲಾಗುತ್ತಿದೆ. ಸದ್ಯ ಪುಷ್ಪ 2 ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ.
7/ 7
ಪುಷ್ಪ ಬಿಡುಗಡೆಯಾಗಿ ವರ್ಷ ಕಳೆದರೂ ಈ ಸಿನಿಮಾದ ಕ್ರೇಜ್ ಕಡಿಮೆಯಾಗಿಲ್ಲ. ಇತ್ತೀಚೆಗಷ್ಟೇ ರಷ್ಯಾದಲ್ಲಿ ಪುಷ್ಪ ಚಿತ್ರ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದಿತ್ತು.