ಅಲ್ಲು ಅರ್ಜುನ್ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರತಂಡ ಏಪ್ರಿಲ್ 8 ರಂದು ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದೆ. "ವೇರ್ ಈಸ್ ಪುಷ್ಪಾ" ವಿಡಿಯೋ ಗ್ಲಿಂಪ್ಸ್ಗೆ ಭಾರಿ ಪ್ರತಿಕ್ರಿಯೆ ಸಿಕ್ಕಿದೆ. ವೈಜಾಗ್ನಲ್ಲಿ ನಡೆಯುತ್ತಿದ್ದ ಈ ಸಿನಿಮಾದ ಶೂಟಿಂಗ್ ಇತ್ತೀಚೆಗಷ್ಟೇ ಹೈದರಾಬಾದ್ಗೆ ಶಿಫ್ಟ್ ಆಗಿದೆ. ಸದ್ಯ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರತಂಡ ಫೈಟಿಂಗ್ ಸೀನ್ ಚಿತ್ರೀಕರಣ ನಡೆಸುತ್ತಿದೆ. ಫೋಟೋ : ಟ್ವಿಟರ್
'ಪುಷ್ಪ 2' ನಲ್ಲಿ ರೋಚಕ ಫೈಟ್ ಸೀನ್ಗಳು ಇರಲಿದೆ. ಇಂಟರ್ವಲ್ ಬ್ಲಾಕ್ ಸೀಕ್ವೆನ್ಸ್ನಲ್ಲಿ, ಅಲ್ಲು ಅರ್ಜುನ್ ತನ್ನ ಸ್ನೇಹಿತನನ್ನು ಉಳಿಸಲು ಸಿಂಹದೊಂದಿಗೆ ಹೋರಾಡಲಿದ್ದಾರಂತೆ. ಈ ಸಿಂಹದ ಕಾದಾಟದ ದೃಶ್ಯವನ್ನು ಸುಕುಮಾರ್ ಒಂದು ರೇಂಜ್ ನಲ್ಲಿ ಡಿಸೈನ್ ಮಾಡಿದ್ದಾರೆ. ಮತ್ತೊಂದು ಸೀನ್ ಚಿತ್ರೀಕರಣಕ್ಕಾಗಿ ಚಿತ್ರತಂಡ ಥಾಯ್ಲೆಂಡ್ಗೆ ತೆರಳಲಿದೆಯಂತೆ. ಫೋಟೋ: ಟ್ವಿಟರ್