ಈ ಸಿನಿಮಾ ರಷ್ಯಾದಲ್ಲಿ ರಿಲೀಸ್ ಆಗಿ ಸಖತ್ ಸೌಂಡ್ ಮಾಡಿದೆ. ನಮ್ಮ ಭಾರತೀಯ ಕರೆನ್ಸಿಯಲ್ಲಿ 1.1 ಕೋಟಿಯಾಗುಷ್ಟು ಲಾಭ ಗಳಿಸಿದೆ. ಆದರೆ ಬಾಹುಬಲಿ 2 ಕೂಡ ಈ ರೇಂಜ್ ನಲ್ಲಿ ಸಾಧನೆ ಮಾಡಿಲ್ಲ ಅಂತಾರೆ ಸಿನಿಮಾ ಟ್ರೇಡ್ ಎಕ್ಸ್ಪರ್ಟ್ಸ್. ಇನ್ನು ಕೆಲವು ನೆಟ್ಟಿಗರು ಪುಷ್ಪಾ ಸಿನಿಮಾದ ಪ್ರಚಾರಕ್ಕೆ ಖರ್ಚು ಮಾಡಿದ ಮೊತ್ತ ಕೂಡಾ ಸಿಕ್ಕಿಲ್ಲ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಈ ಸಿನಿಮಾದ ಎರಡನೇ ಭಾಗ ಬರುತ್ತಿದ್ದು ಇತ್ತೀಚೆಗೆ ಪೂಜಾ ಕಾರ್ಯಕ್ರಮಗಳು ನಡೆದಿತ್ತು. ಮಾಹಿತಿ ಪ್ರಕಾರ ಜನವರಿ ಮೂರನೇ ವಾರದಿಂದ ಪುಷ್ಪ 2 ಚಿತ್ರೀಕರಣ ಆರಂಭವಾಗಲಿದೆ. ಇದಲ್ಲದೆ, ಅಲ್ಲು ಅರ್ಜುನ್ ಬ್ಯಾಂಕಾಕ್ನಲ್ಲಿ ಬೃಹತ್ ಸೆಟ್ಗಳಲ್ಲಿ ಕೆಲಸ ಮಾಡಲಿದ್ದಾರೆ ಎನ್ನಲಾಗಿದೆ. ಅಲ್ಲಿ ಸುಮಾರು 30 ದಿನಗಳ ಕಾಲ ಶೂಟಿಂಗ್ ನಡೆಯಲಿದೆ. ಈ ಮೂವತ್ತು ದಿನಗಳಲ್ಲಿ ಶೇ.40ರಷ್ಟು ಚಿತ್ರೀಕರಣ ಪೂರ್ಣಗೊಳ್ಳಲಿದೆ. ಬ್ಯಾಂಕಾಕ್ ನ ದಟ್ಟ ಅರಣ್ಯದಲ್ಲಿ ಶೂಟಿಂಗ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.
ಈ ಸಿನಿಮಾದ ಶೂಟಿಂಗ್ ಆರಂಭದಿಂದಲೂ ತಡವಾಗುತ್ತಿರುವುದರಿಂದ ಈ ಸಿನಿಮಾದಲ್ಲಿ ಭನ್ವರ್ ಸಿಂಗ್ ಶೇಖಾವತ್ ಪಾತ್ರದಲ್ಲಿ ನಟಿಸುತ್ತಿರುವ ಫಹಾದ್ ಫಾಸಿಲ್ ಅವರಿಗೆ ತಡವಾಗುತ್ತಿದೆ ಎನ್ನಲಾಗಿದೆ. ಈ ಚಿತ್ರಕ್ಕೆ ಮೀಸಲಿಟ್ಟ ಡೇಟ್ಸ್ ವೇಸ್ಟ್ ಆಗುತ್ತಿರುವ ಕಾರಣ ಹಾಗೂ ಇತರೆ ಸಿನಿಮಾ ಕಮಿಟ್ ಮೆಂಟ್ ಗಳಿಂದ ಅವರು ಈ ಚಿತ್ರದಿಂದ ಹೊರಬಿದ್ದಿದ್ದಾರೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.