ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅವರು ಪುಷ್ಪಾ ಮೊದಲ ಭಾಗದೊಂದಿಗೆ ಪ್ಯಾನ್ ಇಂಡಿಯಾ ಕ್ರೇಜ್ ಅನ್ನು ಗಳಿಸಿದರು. ಸಿನಿಮಾ ಬಾಲಿವುಡ್ನಲ್ಲಿಯೂ ಜನಪ್ರಿಯವಾಯಿತು. ಅಲ್ಲು ಮಾಸ್ ಲುಕ್ ಜೊತೆಗೆ ರಶ್ಮಿಕಾ ಮಂದಣ್ಣ ಅವರ ಸ್ಕ್ರೀನ್ ಪ್ರೆಸೆನ್ಸ್ ಎಲ್ಲಾ ವರ್ಗದ ಪ್ರೇಕ್ಷಕರನ್ನು ಆಕರ್ಷಿಸಿತು. ಉತ್ತರದಲ್ಲಿ ರಶ್ಮಿಕಾ ಅವರ ಶ್ರೀವಲ್ಲಿ ಪಾತ್ರವು ಅವರ ಕ್ರೇಜ್ ಅನ್ನು ಇಮ್ಮಡಿಗೊಳಿಸಿತು.
ಇತ್ತೀಚೆಗಷ್ಟೇ ಈ ಚಿತ್ರದ ಆಡಿಯೋ ರೈಟ್ಸ್‌ನ ಅಪ್ಡೇಟ್ ಹೊರಬಿದ್ದಿದೆ. ಆಡಿಯೋ ರೈಟ್ಸ್ಗೆ ಭಾರೀ ಬೇಡಿಕೆ ಬಂದಿರುವುದರಿಂದ ಪುಷ್ಪಾ 2 ಸಿನಿಮಾದ ಸಾಂಗ್ಸ್ ರೂ. 65 ಕೋಟಿಗೆ ಮಾರಾಟವಾಗಿದೆ ಎನ್ನಲಾಗಿದೆ. ಭಾರತೀಯ ಚಿತ್ರರಂಗದಲ್ಲಿ ಇದೊಂದು ಅಭೂತಪೂರ್ವ ಇತಿಹಾಸ ಎಂದೇ ಹೇಳಬಹುದು. ಪುಷ್ಪ ರಾಜ್ ದಾಖಲೆಗಳ ಬೇಟೆ ಶುರುವಾಗಿದೆ ಎಂದು ಅಲ್ಲು ಅರ್ಜುನ್ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.