Allu Arjun-Pushpa 2: ದೇವಿ ಅವತಾರದಲ್ಲಿ ಗನ್ ಹಿಡಿದು ಬಂದ 'ಪುಷ್ಪ'! ಹಿಂದೆಂದೂ ಕಾಣದ ಗೆಟಪ್‌ನಲ್ಲಿ ಅಲ್ಲು ಅರ್ಜುನ್

ಪುಷ್ಪ ಸಿನಿಮಾ ಮೂಲಕ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಪುಷ್ಪ-2 ಸಿನಿಮಾಗಾಗಿ ಅಲ್ಲು ಅರ್ಜುನ್ ಸಂಪೂರ್ಣ ಮೇಕ್ ಓವರ್ ಮಾಡಿಕೊಂಡಿದ್ದಾರೆ. ಇದೀಗ ಪುಷ್ಪರಾಜ್​ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

First published:

  • 19

    Allu Arjun-Pushpa 2: ದೇವಿ ಅವತಾರದಲ್ಲಿ ಗನ್ ಹಿಡಿದು ಬಂದ 'ಪುಷ್ಪ'! ಹಿಂದೆಂದೂ ಕಾಣದ ಗೆಟಪ್‌ನಲ್ಲಿ ಅಲ್ಲು ಅರ್ಜುನ್

    ಪುಷ್ಪ 2 ಸಿನಿಮಾಗಾಗಿ ಬನ್ನಿ ಅಭಿಮಾನಿಗಳು ಕಾಯ್ತಿದ್ದಾರೆ. ಸಿನಿಮಾ ತಂಡ ಅಲ್ಲು ಅರ್ಜುನ್ ಹುಟ್ಟು ಹಬ್ಬದ ಹಿನ್ನೆಲೆ ಫ್ಯಾನ್ಸ್​ಗೆ ಗಿಫ್ಟ್ ನೀಡಿದ್ದಾರೆ. ನಾಳೆ (ಏ.08) ಐಕಾನ್ ಸ್ಟಾರ್ ಜನ್ಮದಿನ ಇಂದೇ ಸಿನಿಮಾ ತಂಡ ಟೀಸರ್ ರಿಲೀಸ್ ಮಾಡಿದೆ. ಅಲ್ಲು ಅರ್ಜುನ್ ಪುಷ್ಪ ಸಿನಿಮಾದಲ್ಲಿ ದೇವಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

    MORE
    GALLERIES

  • 29

    Allu Arjun-Pushpa 2: ದೇವಿ ಅವತಾರದಲ್ಲಿ ಗನ್ ಹಿಡಿದು ಬಂದ 'ಪುಷ್ಪ'! ಹಿಂದೆಂದೂ ಕಾಣದ ಗೆಟಪ್‌ನಲ್ಲಿ ಅಲ್ಲು ಅರ್ಜುನ್

    ವಿಶೇಷವಾಗಿ ಚಿತ್ತೂರು ಮತ್ತು ನೆಲ್ಲೂರು ಜಿಲ್ಲೆಗಳಲ್ಲಿ ಗಂಗಮ್ಮನ ಜಾತ್ರೆಯ ಸಂದರ್ಭದಲ್ಲಿ ಅನೇಕ ಪುರುಷರು ಈ ವೇಷದಲ್ಲಿ ಕಾಣಿಸಿಕೊಂಡು ದೇವಿಯ ಕೃಪೆಗೆ ಪಾತ್ರರಾಗುತ್ತಾರೆ. ಇದೀಗ ಅಲ್ಲು ಅರ್ಜುನ್ ದೇವಿಯ ಅವತಾರದಲ್ಲಿರುವ ಫೋಟೋವನ್ನು ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. (ಟ್ವಿಟರ್/ಫೋಟೋ)

    MORE
    GALLERIES

  • 39

    Allu Arjun-Pushpa 2: ದೇವಿ ಅವತಾರದಲ್ಲಿ ಗನ್ ಹಿಡಿದು ಬಂದ 'ಪುಷ್ಪ'! ಹಿಂದೆಂದೂ ಕಾಣದ ಗೆಟಪ್‌ನಲ್ಲಿ ಅಲ್ಲು ಅರ್ಜುನ್

    ಗಂಗಮ್ಮ ಜಾತ್ರೆಯಲ್ಲಿ ಹಾಕುವ ಕಾಸ್ಟ್ಯೂಮ್ ಜೊತೆಗೆ ಕೈಯಲ್ಲಿ ಗನ್ ಹಿಡಿದ್ದಾರೆ. ಖಳನಾಯಕರನ್ನು ಮುಗಿಸಲು ಅಲ್ಲು ಅರ್ಜುನ್ ಪುಷ್ಪ 2 ಸಿನಿಮಾದಲ್ಲಿ ಈ ಕಾಸ್ಟ್ಯೂಮ್ ಹಾಕಿದ್ದಾರಂತೆ. ಹೊಸ ಲುಕ್​ನೊಂದಿಗೆ ಪುಷ್ಪ ಈ ಚಿತ್ರದ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. (ಟ್ವಿಟರ್/ಫೋಟೋ)

    MORE
    GALLERIES

  • 49

    Allu Arjun-Pushpa 2: ದೇವಿ ಅವತಾರದಲ್ಲಿ ಗನ್ ಹಿಡಿದು ಬಂದ 'ಪುಷ್ಪ'! ಹಿಂದೆಂದೂ ಕಾಣದ ಗೆಟಪ್‌ನಲ್ಲಿ ಅಲ್ಲು ಅರ್ಜುನ್

    ಪುಷ್ಪರಾಜ್ ಪಾತ್ರವನ್ನು ನಿರ್ದೇಶಕ ಸುಕುಮಾರ್ ಅವರು ಅದ್ಭುತವಾಗಿ ವಿನ್ಯಾಸಗೊಳಿಸಿದ್ದಾರೆ. ಪ್ರಪಂಚದಾದ್ಯಂತ ಗಮನ ಸೆಳೆದಿದ್ದಾರೆ. ಈ ಚಿತ್ರವನ್ನು ನವೀನ್ ಎರ್ನೇನಿ ಮತ್ತು ರವಿಶಂಕರ್ ಯಲಮಂಚಿಲಿ ಅವರು ಮೈತ್ರಿ ಮೂವೀಸ್ ಅಸೋಸಿಯೇಟ್​ನಲ್ಲಿ, ಸುಕುಮಾರ್ ರೈಟಿಂಗ್ಸ್ ಬ್ಯಾನರ್​​ನಲ್ಲಿ ನಿರ್ಮಿಸುತ್ತಿದ್ದಾರೆ.

    MORE
    GALLERIES

  • 59

    Allu Arjun-Pushpa 2: ದೇವಿ ಅವತಾರದಲ್ಲಿ ಗನ್ ಹಿಡಿದು ಬಂದ 'ಪುಷ್ಪ'! ಹಿಂದೆಂದೂ ಕಾಣದ ಗೆಟಪ್‌ನಲ್ಲಿ ಅಲ್ಲು ಅರ್ಜುನ್

    ಪುಷ್ಪ ದಿ ರೂಲ್ ಸಿನಿಮಾದಲ್ಲಿ ಪುಷ್ಪರಾಜ್ ಪಾತ್ರದಲ್ಲಿ ಅಲ್ಲು ಅರ್ಜುನ್ ಮತ್ತಷ್ಟು ಮಿಂಚಲಿದ್ದಾರೆ. ತೆಲುಗು ಮತ್ತು ಮಲಯಾಳಂ ಪ್ರೇಕ್ಷಕರಿಗೆ ಮಾತ್ರ ಪರಿಚಿತರಾಗಿದ್ದ ಅಲ್ಲು ಅರ್ಜುನ್, ಪುಷ್ಪ ಚಿತ್ರದ ಮೂಲಕ ವಿಶ್ವದಾದ್ಯಂತ ಎಲ್ಲಾ ಪ್ರೇಕ್ಷಕರನ್ನು ತಲುಪಿದರು.

    MORE
    GALLERIES

  • 69

    Allu Arjun-Pushpa 2: ದೇವಿ ಅವತಾರದಲ್ಲಿ ಗನ್ ಹಿಡಿದು ಬಂದ 'ಪುಷ್ಪ'! ಹಿಂದೆಂದೂ ಕಾಣದ ಗೆಟಪ್‌ನಲ್ಲಿ ಅಲ್ಲು ಅರ್ಜುನ್

    ಪುಷ್ಪ ಪಾರ್ಟ್ ಒನ್ ಸಿನಿಮಾ ಸೂಪರ್ ಹಿಟ್ ಆಗಿತ್ತು. ಅಭಿಮಾನಿಗಳು ಮಾತ್ರವಲ್ಲ ಕ್ರಿಕೆಟಿಗರು, ರಾಜಕಾರಣಿಗಳು, ಪುಷ್ಪರಾಜ್ ಡೈಲಾಗ್ ಅನ್ನು ತಮ್ಮದೇ ಶೈಲಿಯಲ್ಲಿ ಹೇಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದರು.

    MORE
    GALLERIES

  • 79

    Allu Arjun-Pushpa 2: ದೇವಿ ಅವತಾರದಲ್ಲಿ ಗನ್ ಹಿಡಿದು ಬಂದ 'ಪುಷ್ಪ'! ಹಿಂದೆಂದೂ ಕಾಣದ ಗೆಟಪ್‌ನಲ್ಲಿ ಅಲ್ಲು ಅರ್ಜುನ್

    ಇದೀಗ ಪುಷ್ಪ: ದಿ ರೂಲ್ ಸಿನಿಮಾ ಅದ್ಧೂರಿಯಾಗಿ ತಯಾರಾಗುತ್ತಿದೆ. ನಾಳೆ (08-04-2023) ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬದ ಹಿನ್ನೆಲೆ, ಚಿತ್ರತಂಡವು  "ಪುಷ್ಪ: ದಿ ರೂಲ್" ಚಿತ್ರದ "ಹಂಟ್ ಫಾರ್ ಪುಷ್ಪ" ಎಂಬ ಪರಿಕಲ್ಪನೆಯ ವಿಡಿಯೋವನ್ನು ಬಿಡುಗಡೆ ಮಾಡಿದೆ.

    MORE
    GALLERIES

  • 89

    Allu Arjun-Pushpa 2: ದೇವಿ ಅವತಾರದಲ್ಲಿ ಗನ್ ಹಿಡಿದು ಬಂದ 'ಪುಷ್ಪ'! ಹಿಂದೆಂದೂ ಕಾಣದ ಗೆಟಪ್‌ನಲ್ಲಿ ಅಲ್ಲು ಅರ್ಜುನ್

    ವಿಡಿಯೋದಲ್ಲಿ ಅಲ್ಲು ಅರ್ಜುನ್ ಡೈಲಾಗ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಕಾಡಿನಲ್ಲಿ ಪ್ರಾಣಿಗಳು ಎರಡು ಹೆಜ್ಜೆ ಹಿಂದಕ್ಕೆ ಹೋದರೆ ಹುಲಿ ಬಂದಿದೆ ಎಂದರ್ಥ, ಅದೇ ಹುಲಿ ಎರಡು ಹೆಜ್ಜೆ ಹಿಂದೆ ಇಟ್ಟರೆ ಪುಷ್ಪ ಬಂದಿದ್ದಾನೆ ಎಂದರ್ಥ ಎಂಬ ಡೈಲಾಗ್​ನೊಂದಿಗೆ ಪುಷ್ಪ ಪಾತ್ರ ಅಭಿಮಾನಿಗಳಲ್ಲಿ ಮತ್ತಷ್ಟು ಕಿಕ್ ನೀಡಿದೆ.

    MORE
    GALLERIES

  • 99

    Allu Arjun-Pushpa 2: ದೇವಿ ಅವತಾರದಲ್ಲಿ ಗನ್ ಹಿಡಿದು ಬಂದ 'ಪುಷ್ಪ'! ಹಿಂದೆಂದೂ ಕಾಣದ ಗೆಟಪ್‌ನಲ್ಲಿ ಅಲ್ಲು ಅರ್ಜುನ್

    3 ನಿಮಿಷ ಮತ್ತು 17 ಸೆಕೆಂಡ್​ಗಳ "ಹಂಟ್ ಫಾರ್ ಪುಷ್ಪ" ಕಾನ್ಸೆಪ್ಟ್ ವಿಡಿಯೋ ಅಭಿಮಾನಿಗಳಿಗೆ ಇಷ್ಟವಾಗಿದೆ. ಚಿತ್ರದ ಬಗ್ಗೆ ನಿರೀಕ್ಷೆಗಳನ್ನು ಹೆಚ್ಚಿಸಿದ್ದು,  'ಪುಷ್ಪ 2'  ಚಿತ್ರದಲ್ಲಿ ರೋಚಕ ಫೈಟ್ ಕೂಡ ಇರಲಿದಯಂತೆ.

    MORE
    GALLERIES