Allu Arjun: 7 ಕೋಟಿ ವ್ಯಾನಿಟಿ ವ್ಯಾನ್ನಲ್ಲಿ ರೆಡಿಯಾಗ್ತಾರೆ 'ಪುಷ್ಪರಾಜ್'! ಯಾವ ಫೈವ್ ಸ್ಟಾರ್ ಹೋಟೆಲ್ಗೂ ಕಡಿಮೆ ಇಲ್ಲ
Allu Arjun Luxurious swanky Vanity Van: ಪುಷ್ಪ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ನಟ ಅಲ್ಲು ಅರ್ಜುನ್, ಪುಷ್ಪ 2 ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದಾರೆ. ಚಿತ್ರೀಕರಣಕ್ಕೆ ಹಲವೆಡೆ ಓಡಾಡುವ ಅಲ್ಲು ಅರ್ಜುನ್ 7 ಕೋಟಿ ವ್ಯಾನಿಟಿ ವ್ಯಾನ್ನಲ್ಲಿ ತನ್ನ ಸಿನಿಮಾಗೆ ರೆಡಿಯಾಗ್ತಾರೆ.
'ಪುಷ್ಪ' ಸ್ಟಾರ್ ಅಲ್ಲು ಅರ್ಜುನ್ 7 ಕೋಟಿ ಮೌಲ್ಯದ ವ್ಯಾನಿಟಿ ವ್ಯಾನ್ ಹೊಂದಿದ್ದಾರೆ. ಬನ್ನಿ ಹೋದಲೆಲ್ಲಾ ಕಪ್ಪು ಬಣ್ಣದ ವ್ಯಾನಿಟ್ ವ್ಯಾನ್ ಎಲ್ಲರ ಗಮನ ಸೆಳೆಯುತ್ತದೆ. ಈ ಅದ್ಧೂರಿ ವ್ಯಾನ್ನಲ್ಲಿ ಏನೆಲ್ಲಾ ಸೌಲಭ್ಯಗಳಿದೆ ಗೊತ್ತಾ?
2/ 10
ಐಷಾರಾಮಿ ಜೀವನ ನಡೆಸುತ್ತಿರುವ ಟಾಲಿವುಡ್ ನಟರಲ್ಲಿ ಅಲ್ಲು ಅರ್ಜುನ್ ಕೂಡ ಒಬ್ಬರಾಗಿದ್ದಾರೆ. ಇವ್ರು ಬಾಲಿವುಡ್ ಸ್ಟಾರ್ಗಳಿಗಿಂತ ಕಡಿಮೆಯಿಲ್ಲ. ಅಲ್ಲು ಅರ್ಜುನ್ ಅವರ ವ್ಯಾನಿಟಿ ವ್ಯಾನ್ ಫೈವ್ ಸ್ಟಾರ್ ಹೋಟೆಲ್ ರೂಮ್ ರೀತಿ ಇದೆ.
3/ 10
ಅಲ್ಲು ಅರ್ಜುನ್ ತಮ್ಮ ಬ್ಲ್ಯಾಕ್ ವ್ಯಾನಿಟಿ ವ್ಯಾನ್ ನನ್ನು 2019ರಲ್ಲಿ ಖರೀದಿಸಿದ್ದಾರೆ. ಇದನ್ನು 'ಫಾಲ್ಕನ್' ಎಂದು ಕರೆಯುತ್ತಾರೆ. ಈ ವ್ಯಾನ್ .ಅಲ್ಲು ಅರ್ಜುನ್ ಹೆಸರಿನ 'AA' ಲೋಗೋವನ್ನು ಸಹ ಹೊಂದಿದೆ. ಹೊರಗಿನಿಂದ ಎಷ್ಟು ಸುಂದರವಾಗಿ ಕಾಣುತ್ತದೆಯೇ ಹಾಗೇ ಒಳಗೆ ಕೂಡ ಅಷ್ಟೇ ಅದ್ಧೂರಿಯಾಗಿದೆ.
4/ 10
ಅಲ್ಲು ಅರ್ಜುನ್ ಐಷಾರಾಮಿ ವ್ಯಾನಿಟಿ ವ್ಯಾನ್ ಪ್ರವೇಶಿಸುತ್ತಿದ್ದಂತೆ ಉಬರ್-ಕೂಲ್ ಇನ್ ಡೋರ್ ಕಾಣಬಹುದು. ಹೊರಗೆ ಬ್ಲ್ಯಾಕ್ ಕಲರ್ ಇದ್ರೆ ಒಳಾಂಗಣ ಫುಲ್ ಬಿಳಿ ಬಣ್ಣದಿಂದ ಮಾಡಿದ್ದಾರೆ.
5/ 10
ಸ್ವತಃ ಅಲ್ಲು ಅರ್ಜುನ್ ಅವರೇ ತಮ್ಮ ಐಷಾರಾಮಿ ವ್ಯಾನಿಟಿ ವ್ಯಾನಿನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಚಿತ್ರೀಕರಣ ಮುಗಿಸಿ ಅಲ್ಲು ಅರ್ಜುನ್ ಈ ವ್ಯಾನ್ನಲ್ಲೇ ವಿಶ್ರಾಂತಿ ಪಡೆಯುತ್ತಾರೆ.
6/ 10
ವ್ಯಾನಿಟಿ ವ್ಯಾನ್ ನಲ್ಲಿ ಲೆದರ್ ಸೀಟ್ಗಳು, ದೊಡ್ಡ ಮಿರರ್ಗಳು ಹಾಗೂ ಮೂನ್ ಲೈಟಿಂಗ್ ಗಳನ್ನು ಕಾಣಬಹುದಾಗಿದೆ. ಇದು ಮತ್ತಷ್ಟು ಐಷಾರಾಮಿ ಲುಕ್ ನೀಡುತ್ತದೆ.
7/ 10
3.5 ಕೋಟಿ ವೆಚ್ಚದ ಐಷಾರಾಮಿ ಬಸ್ ಖರೀದಿಸಿದ ನಟ ಅಲ್ಲು ಅರ್ಜುನ್. 3.5 ಕೋಟಿ ಖರ್ಚು ಮಾಡಿ ಅಗತ್ಯ ಸೌಕರ್ಯಗಳನ್ನು ವ್ಯಾನ್ ನಲ್ಲಿಯೇ ನಿರ್ಮಿಕೊಂಡಿದ್ದಾರೆ.
8/ 10
ನಟ ಅಲ್ಲು ಅರ್ಜುನ್ ತಮ್ಮ ಐಷಾರಾಮಿ ವ್ಯಾನಿಟಿ ವ್ಯಾನ್ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಾನು ಆಗಾಗ್ಗೆ ನನ್ನ ಜೀವನದಲ್ಲಿ ದೊಡ್ಡದನ್ನು ಖರೀದಿಸಲು ಬಯಸುತ್ತೇನೆ .ಇದು ಯಾವಾಗಲೂ ನನ್ನ ಮನಸ್ಸಿನಲ್ಲಿರೋ ಆಲೋಚನೆ ಎಂದು ಬರೆದಿದ್ದಾರೆ.
9/ 10
ಪುಷ್ಪಾ ಚಿತ್ರದ ಮೂಲ ದೇಶ-ವಿದೇಶಗಳಲ್ಲಿ ಅಲ್ಲು ಅರ್ಜುನ್ ಫೇಮಸ್ ಆಗಿದ್ದಾರೆ. ಪುಷ್ಪ ಸಿನಿಮಾದಲ್ಲಿ ಬನ್ನಿಗೆ ರಶ್ಮಿಕಾ ಮಂದಣ್ಣ ಜೋಡಿಯಾಗಿದ್ರು. ಈ ಸಿನಿಮಾದಲ್ಲಿ ಬನ್ನಿ ಶ್ರೀಗಂಧದ ಸ್ಮಗ್ಲರ್ ಪಾತ್ರದಲ್ಲಿ ನಟಿಸಿದ್ದರು.
10/ 10
ಪುಷ್ಪ 2ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸದ್ಯ ಚಿತ್ರದ ಚಿತ್ರೀಕರಣ ಕೂಡ ಭರದಿಂದ ಸಾಗಿದೆ.