Allu Arjun Daughter Allu Arha: ಮೊದಲ ಸಿನಿಮಾ ಸಂಭ್ರಮದಲ್ಲಿ ಅಲ್ಲು ಅರ್ಜುನ್ ಪುತ್ರಿ! ಅರ್ಹಾ ಕ್ಯೂಟ್ ಫೋಟೋಗಳು ಇಲ್ಲಿವೆ
ತೆಲುಗು ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಕೇವಲ 3 ವರ್ಷ ವಯಸ್ಸಿನಲ್ಲಿ ನಟನೆ ಶುರುಮಾಡಿದ್ದರು. 1985ರಲ್ಲಿ ಬಾಲ ಕಲಾವಿದನಾಗಿ ಚಿರಂಜೀವಿ ಜೊತೆ ಆ್ಯಕ್ಟ್ ಮಾಡಿದ್ದರು. ಇದೀಗ ಅವರ ಮುದ್ದು ಮಗಳು ಅರ್ಹಾ ಕೂಡ ಅಪ್ಪನ ಹಾದಿಯಲ್ಲೇ ನಡೆಯಲಾರಂಭಿಸಿದ್ದಾಳೆ!
ಅಲ್ಲು ಅರ್ಜುನ್ ಪುತ್ರಿ ಅರ್ಹಾ ಮೊದಲ ಬಾರಿಗೆ ನಟಿ ಸಮಂತಾ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ‘ಶಾಕುಂತಲಂ’ ಚಿತ್ರದ ಮೂಲಕ ಇಬ್ಬರೂ ಮೊದಲ ಬಾರಿಗೆ ತೆರೆ ಹಂಚಿಕೊಳ್ಳಲಿದ್ದಾರೆ. ಅರ್ಹಾಗೆ ಕೇವಲ 6 ವರ್ಷ.
2/ 8
ಅರ್ಹಾ ಪದಾರ್ಪಣೆಯ ನಂತರ ಅವರ ಮನೆಯಲ್ಲೂ ಸಂತಸದ ವಾತಾವರಣವಿದೆ. ಅಂದಹಾಗೆ ಅರ್ಹಾ ತಂದೆ ಅಲ್ಲು ಅರ್ಜುನ್ರ ಪ್ರೀತಿಯ ಮಗಳು.
3/ 8
ಅರ್ಹ ಅಲ್ಲು ಅರ್ಜುನ್ ಜನಪ್ರಿಯ ಸ್ಟಾರ್ಕಿಡ್ಗಳಲ್ಲಿ ಒಬ್ಬರು. ತಾನು ಬೆಳೆದು ಓದು ಮುಗಿಸಿದಾಗ ನಟನಾ ಲೋಕಕ್ಕೆ ಕಾಲಿಡುತ್ತೇನೆ ಎಂದು ಅಲ್ಲು ಅರ್ಜುನ್ ಸಂದರ್ಶನವೊಂದರಲ್ಲಿ ಹೇಳಿದ್ದರು. ಆದರೆ, ಕೇವಲ 6ನೇ ವಯಸ್ಸಿನಲ್ಲಿ ಈ ದೊಡ್ಡ ಸಾಧನೆ ಮಾಡಿದ್ದಾರೆ.
4/ 8
ಅರ್ಹಾ ಅವರ ಫೋಟೋಗಳು ಮತ್ತು ವೀಡಿಯೊಗಳನ್ನು ಆಗಾಗ್ಗೆ ಅವರ ತಂದೆ ಮತ್ತು ತಾಯಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ಹೀಗಾಗಿ ಅರ್ಹಾಗೆ ದೊಡ್ಡ ಅಭಿಮಾನಿ ಬಳಗವೇ ಇದೆ.
5/ 8
ಅರ್ಹಾ ಅವರ ಪ್ರತಿಯೊಂದು ಶೈಲಿಯು ಅಭಿಮಾನಿಗಳ ಹೃದಯವನ್ನು ಮುಟ್ಟುತ್ತದೆ. ಅವರ ಚೊಚ್ಚಲ ಸಿನಿಮಾಕ್ಕಾಗಿ ಅಭಿಮಾನಿಗಳು ಮತ್ತು ಕುಟುಂಬದವರು ತುಂಬಾ ಉತ್ಸುಕರಾಗಿದ್ದಾರೆ. ಸ್ವತಃ ಅಲ್ಲು ಅರ್ಜುನ್ ಕೂಡ ತುಂಬಾ ಎಕ್ಸೈಟ್ ಆಗಿದ್ದಾರೆ.
6/ 8
ಅರ್ಹಾ ಅವರು 21 ನವೆಂಬರ್ 2016 ರಂದು ಜನಿಸಿದರು. ಇದರ ಪ್ರಕಾರ ಆಕೆಗೆ 6 ವರ್ಷ. ಇವರಿಗೆ ಒಬ್ಬ ಅಣ್ಣ ಕೂಡ ಇದ್ದಾರೆ, ಅವರ ಹೆಸರು ಅಲ್ಲು ಅಯಾನ್.
7/ 8
ಅಲ್ಲು ಅರ್ಜುನ್ ಕುಟುಂಬಸ್ಥರೆಲ್ಲರೂ ಸಿನಿಮಾದಲ್ಲಿ ನಟನೆ, ನಿರ್ಮಾಣ ಮಾಡುತ್ತ ಸಿನಿ ರಂಗದಲ್ಲಿ ಬ್ಯುಸಿಯಿದ್ದಾರೆ. ಈ ನಡುವೆ ಅರ್ಜುನ್ ಪತ್ನಿ ಸ್ನೇಹಾ ಅವರು ಸಿನಿಮಾ ರಂಗದಿಂದ ದೂರ ಉಳಿದಿದ್ದಾರೆ. ಆದರೆ ಅರ್ಜುನ್ ಮುದ್ದಿನ ಪುತ್ರಿ ಅರ್ಹಾ ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.
8/ 8
ಅರ್ಹಾ'ಶಕುಂತಲಂ' ಸಿನಿಮಾದಲ್ಲಿ 10 ದಿನಗಳ ಕಾಲ ಶೂಟಿಂಗ್ನಲ್ಲಿ ಭಾಗಿಯಾಗಿದ್ದಾಳೆ. ಸಿನಿಮಾ ಕಥೆ ಕೇಳಿ ಅರ್ಹಾ ಚಿತ್ರರಂಗಕ್ಕೆ ಕಾಲಿಡಲು 'ಶಕುಂತಲಂ' ಸಿನಿಮಾ ಸರಿಯಾಗಿದೆ ಎಂದು ಅಲ್ಲು ಕುಟುಂಬ ನಿರ್ಧಾರಕ್ಕೆ ಬಂದಿತ್ತು.