ಅಲ್ಲು ಅರ್ಜುನ್ ಕೆಲವು ಚಿತ್ರಗಳಲ್ಲಿ ತಮ್ಮ ನಟನೆ, ಡ್ಯಾನ್ಸ್, ಫೈಟ್ಗಳಿಂದ ಟಾಲಿವುಡ್ ನಲ್ಲಿ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಮಾತ್ರವಲ್ಲ, ಕೇರಳ ಚಿತ್ರರಂಗದಲ್ಲೂ ಬನ್ನಿ ತಮ್ಮ ಸ್ಟೈಲಿಶ್ ನಟನೆಯಿಂದ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ತೆಲುಗಿನಲ್ಲಿ ಸಿಕ್ಸ್ ಪ್ಯಾಕ್ ಮೂಲಕ ಯುವಕರನ್ನು ರಂಜಿಸಿದ ಸ್ಟೈಲಿಶ್ ಸ್ಟಾರ್. 'ಪುಷ್ಪ' ಚಿತ್ರದ ಮೂಲಕ ಐಕಾನ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. (ಟ್ವಿಟರ್/ಫೋಟೋ)
ಅಲ್ಲು ರಾಮಲಿಂಗಯ್ಯನವರ ಮೊಮ್ಮಗನಾಗಿ ಮತ್ತು ನಿರ್ಮಾಪಕ ಅಲ್ಲು ಅರವಿಂದ್ ಅವರ ಮಗನಾಗಿ ಅಲ್ಲು ಅರ್ಜುನ್ ಟಾಲಿವುಡ್ಗೆ ಎಂಟ್ರಿ ಕೊಟ್ಟರು. ಅಲ್ಲು ಅರ್ಜುನ್, ಏಪ್ರಿಲ್ 8, 1983 ರಂದು ಮದ್ರಾಸ್ನಲ್ಲಿ ಅಲ್ಲು ಅರವಿಂದ್ ಮತ್ತು ನಿರ್ಮಲಾ ಅವರ ಎರಡನೇ ಮಗನಾಗಿ ಜನಿಸಿದರು. ಬಾಲ್ಯದಲ್ಲಿ ಕೋದಂಡರಾಮಿ ರೆಡ್ಡಿ ನಿರ್ದೇಶಿಸಿದ್ದ ಹಾಗೂ ಚಿರಂಜೀವಿ ನಟಿಸಿದ್ದ ‘ವಿಜೇತ’ ಚಿತ್ರದಲ್ಲಿ ಬಾಲನಟನಾಗಿ ಮಿಂಚಿದ್ದರು. (ಟ್ವಿಟರ್/ಫೋಟೋ)
ಆ ನಂತರ ಚಿರಂಜೀವಿ ಅಭಿನಯದ ‘ಡ್ಯಾಡಿ’ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ನಂತರ ನಿರ್ದೇಶಕ ಕೆ. ರಾಘವೇಂದ್ರ ರಾವ್ ನಿರ್ದೇಶನದ ಗಂಗೋತ್ರಿ ಚಿತ್ರದ ಮೂಲಕ ನಾಯಕನಾಗಿ ಎಂಟ್ರಿ ಕೊಟ್ಟರು. ಇದೀಗ ಟಾಲಿವುಡ್ನಲ್ಲಿ ಹೀರೋ ಆಗಿ 20 ವರ್ಷ ಪೂರೈಸಿದ್ದಾರೆ. ಅವರು ತಮ್ಮ 20 ವರ್ಷಗಳ ವೃತ್ತಿಜೀವನದಲ್ಲಿ 20 ಚಿತ್ರಗಳನ್ನು ಮಾಡಿದ್ದಾರೆ. ವರ್ಷಕ್ಕೆ ಒಂದು ಸಿನಿಮಾ ಮಾಡುತ್ತಿದ್ದಾರೆ.