ನಟಿ ಸಮಂತಾ ಅಭಿನಯದ ಶಾಕುಂತಲಂ ಚಿತ್ರದ ಮೂಲಕ ಅಲ್ಲು ಅರ್ಜುನ್ ಪುತ್ರಿ ಅರ್ಹಾ ಸಿನಿಮಾ ರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ತಂದೆ ಅಲ್ಲು ಅರ್ಜುನ್ ಸಹ ಮಗಳ ಮೊದಲ ಚಿತ್ರದ ಬಗ್ಗೆ ಬಹಳ ನಿರೀಕ್ಷೆ ಹೊಂದಿದ್ದಾರೆ.
ಶಾಕುಂತಲಂ ಚಿತ್ರದ ಯುವ ರಾಜಕುಮಾರ ಭರತನ ಪಾತ್ರದಲ್ಲಿ ಅಲ್ಲು ಅರ್ಜುನ್ ಪುತ್ರಿ ಅರ್ಹಾ ನಟಿಸಿದ್ದಾರೆ. ಇದೀಗ ಡಬ್ಬಿಂಗ್ ನಲ್ಲಿ ಬ್ಯುಸಿ ಆಗಿರುವ ಮಗಳಿಗೆ ಅಲ್ಲು ಅರ್ಜುನ್ ಪ್ರೋತ್ಸಾಹ ನೀಡಿದ್ದಾರೆ.
2/ 8
ಮಗಳ ಡಬ್ಬಿಂಗ್ ಫೋಟೋಗಳನ್ನು ಹಂಚಿಕೊಂಡ ಅಲ್ಲು ಅರ್ಜುನ್, ಈ ಮೂಲಕ ಮಗಳಿಗೆ ಸಪೋರ್ಟ್ ನೀಡಿದ್ದಾರೆ.
3/ 8
ಅಲ್ಲು ಅರ್ಜುನ್ ಪುತ್ರಿ ಅರ್ಹಾ ಮೊದಲ ಬಾರಿಗೆ ನಟಿ ಸಮಂತಾ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಅರ್ಹಾ ಪದಾರ್ಪಣೆಯ ನಂತರ ಅವರ ಮನೆಯಲ್ಲೂ ಸಂತಸದ ವಾತಾವರಣವಿದೆ. ಅಂದಹಾಗೆ ಅರ್ಹಾ ತಂದೆ ಅಲ್ಲು ಅರ್ಜುನ್ರ ಪ್ರೀತಿಯ ಮಗಳು.
4/ 8
ಅರ್ಹಾ ಅವರ ಫೋಟೋಗಳು ಮತ್ತು ವೀಡಿಯೊಗಳನ್ನು ಆಗಾಗ್ಗೆ ಅವರ ತಂದೆ ಮತ್ತು ತಾಯಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ಹೀಗಾಗಿ ಅರ್ಹಾಗೆ ದೊಡ್ಡ ಅಭಿಮಾನಿ ಬಳಗವೇ ಇದೆ.
5/ 8
ಅರ್ಹಾ ಅವರ ಪ್ರತಿಯೊಂದು ಶೈಲಿಯು ಅಭಿಮಾನಿಗಳ ಹೃದಯವನ್ನು ಮುಟ್ಟುತ್ತದೆ. ಅವರ ಚೊಚ್ಚಲ ಸಿನಿಮಾಕ್ಕಾಗಿ ಅಭಿಮಾನಿಗಳು ಮತ್ತು ಕುಟುಂಬದವರು ತುಂಬಾ ಉತ್ಸುಕರಾಗಿದ್ದಾರೆ. ಸ್ವತಃ ಅಲ್ಲು ಅರ್ಜುನ್ ಕೂಡ ತುಂಬಾ ಎಕ್ಸೈಟ್ ಆಗಿದ್ದಾರೆ.
6/ 8
ಅರ್ಹಾ ಅವರು 21 ನವೆಂಬರ್ 2016 ರಂದು ಜನಿಸಿದರು. ಇದರ ಪ್ರಕಾರ ಆಕೆಗೆ 6 ವರ್ಷ. ಇವರಿಗೆ ಒಬ್ಬ ಅಣ್ಣ ಕೂಡ ಇದ್ದಾರೆ, ಅವರ ಹೆಸರು ಅಲ್ಲು ಅಯಾನ್.
7/ 8
ಅಲ್ಲು ಅರ್ಜುನ್ ಕುಟುಂಬಸ್ಥರೆಲ್ಲರೂ ಸಿನಿಮಾದಲ್ಲಿ ನಟನೆ, ನಿರ್ಮಾಣ ಮಾಡುತ್ತ ಸಿನಿ ರಂಗದಲ್ಲಿ ಬ್ಯುಸಿಯಿದ್ದಾರೆ. ಈ ನಡುವೆ ಅರ್ಜುನ್ ಪತ್ನಿ ಸ್ನೇಹಾ ಅವರು ಸಿನಿಮಾ ರಂಗದಿಂದ ದೂರ ಉಳಿದಿದ್ದಾರೆ. ಆದರೆ ಅರ್ಜುನ್ ಮುದ್ದಿನ ಪುತ್ರಿ ಅರ್ಹಾ ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.
8/ 8
ಅರ್ಹಾ'ಶಕುಂತಲಂ' ಸಿನಿಮಾದಲ್ಲಿ 10 ದಿನಗಳ ಕಾಲ ಶೂಟಿಂಗ್ನಲ್ಲಿ ಭಾಗಿಯಾಗಿದ್ದಾಳೆ. ಸಿನಿಮಾ ಕಥೆ ಕೇಳಿ ಅರ್ಹಾ ಚಿತ್ರರಂಗಕ್ಕೆ ಕಾಲಿಡಲು 'ಶಕುಂತಲಂ' ಸಿನಿಮಾ ಸರಿಯಾಗಿದೆ ಎಂದು ಅಲ್ಲು ಕುಟುಂಬ ನಿರ್ಧಾರಕ್ಕೆ ಬಂದಿತ್ತು.