ಇನ್ನೊಂದೆಡೆ ಪುಷ್ಪ 2 ಸಿನಿಮಾದಲ್ಲಿ ಮತ್ತೊಂದು ಪ್ರಮುಖ ಪಾತ್ರ ಇರಲಿದೆಯಂತೆ. ಆ ಪಾತ್ರದಲ್ಲಿ ನಾಯಕಿ ಕ್ಯಾಥರಿನ್ ತೆರೆಸಾ ನಟಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಈ ಸಿನಿಮಾದಲ್ಲಿ ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೊಂದು ಪ್ರಮುಖ ಪಾತ್ರದಲ್ಲಿ ಫಹಾದ್ ಫಾಜಿಲ್ ಪಾತ್ರವನ್ನು ಮನೋಜ್ ಬಾಜಪೇಯಿ ನಿರ್ವಹಿಸಲಿದ್ದಾರೆ ಎಂದು ವರದಿಯಾಗಿದೆ. ಸಿನಿಮಾದಲ್ಲಿ ಅವರು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.