ಪುಷ್ಪ ಚಿತ್ರದ ನಂತರ ಅಲ್ಲು ಅರ್ಜುನ್ ಸದ್ಯ ಪುಷ್ಪ 2 ಚಿತ್ರದಲ್ಲಿ ನಟಿಸುತ್ತಿರುವುದು ಎಲ್ಲರಿಗೂ ಗೊತ್ತಿದೆ. ಭಾರೀ ನಿರೀಕ್ಷೆಗಳ ನಡುವೆ ಮೂಡಿಬರುತ್ತಿರುವ ಈ ಚಿತ್ರ ಸದ್ಯ ಶೂಟಿಂಗ್ ಹಂತದಲ್ಲಿದೆ. ಸುಕುಮಾರ್ ಬಹಳ ಮಹತ್ವಾಕಾಂಕ್ಷೆಯಿಂದ ಸಿನಿಮಾ ಮಾಡುತ್ತಿದ್ದಾರೆ. ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಪುಷ್ಪಾ ದಿ ರೂಲ್ ಎಂಬ ಶೀರ್ಷಿಕೆಯ ಚಿತ್ರದ ಚಿತ್ರೀಕರಣ ವೇಗ ಪಡೆದುಕೊಂಡಿದೆ.