Darlings ಚಿತ್ರೀಕರಣಕ್ಕೆ ತೆರೆ: ಚಿತ್ರತಂಡದ ಜೊತೆ ಪಾರ್ಟಿ ಮಾಡಿದ Alia Bhatt

ಆಲಿಯಾ ಭಟ್​ (Alia Bhatt) ಇದೇ ಮೊದಲ ಬಾರಿಗೆ ಸಿನಿಮಾ ನಿರ್ಮಾಪಕಿಯಾಗುವುದರ ಜೊತೆಗೆ ಆ ಚಿತ್ರದಲ್ಲಿ ನಟಿಸಿದ್ದಾರೆ. ಹೌದು, ಶಾರುಖ್ ಖಾನ್​ (Shah Rukh Khan) ಮಾಲೀಕತ್ವದ ರೆಡ್​ ಚಿಲ್ಲೀಸ್​ ಎಂಟರ್​ಟೈನ್ಮೆಂಟ್​ ಜೊತೆಗೆ ಆಲಿಯಾ ಸಹ ಡಾರ್ಲಿಂಗ್ಸ್ (Darlings)​ ಸಿನಿಮಾಗೆ ಹಣ ಹೂಡಿದ್ದಾರೆ. ಡಾರ್ಲಿಂಗ್ಸ್​ ಸಿನಿಮಾದ ಮೂಲಕ ನಿರ್ಮಾಣದ ಕ್ಷೇತ್ರಕ್ಕೆ ಆಲಿಯಾ ಭಟ್​ ಕಾಲಿಟ್ಟಿದ್ದಾರೆ. ಬರಹಗಾರ್ತಿ ಜಸ್ಮೀತ್​ ಕೆ ರೀನ್ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಇದು ಇವರ ಮೊದಲ ನಿರ್ದೇಶನದ ಚಿತ್ರವಾಗಿದೆ. ಡಾರ್ಲಿಂಗ್ಸ್​ ಸಿನಿಮಾದ ಚಿತ್ರೀಕರಣಕ್ಕೆ ತೆರೆ ಬಿದ್ದಿದ್ದು, ಜೋರಾಗಿ ಪಾರ್ಟಿ ಸಹ ಮಾಡಿದೆ ಈ ಚಿತ್ರತಂಡ. (ಚಿತ್ರಗಳು ಕೃಪೆ: ತರನ್ ಆದರ್ಶ್​ ಇನ್​ಸ್ಟಾಗ್ರಾಂ ಖಾತೆ)

First published: