RRR-Alia Bhatt: ಗೋಲ್ಡನ್ ಗ್ಲೋಬ್ ಅವಾರ್ಡ್ ಗೆದ್ದ ಖುಷಿಯಲ್ಲಿ RRR ಟೀಮ್! ಅದ್ಧೂರಿ ಪಾರ್ಟಿ ಕೊಡ್ತಿದ್ದಾರೆ ನಟಿ ಆಲಿಯಾ ಭಟ್!
ಖ್ಯಾತ ಚಲನಚಿತ್ರ ನಿರ್ದೇಶಕ ಎಸ್ಎಸ್ ರಾಜಮೌಳಿ ಸಿನಿಮಾ RRR ದೇಶ-ವಿದೇಶಗಳಲ್ಲಿ ಭರ್ಜರಿ ಸದ್ದು ಮಾಡಿತ್ತು. ಚಿತ್ರದ ನಾಟು ನಾಟು ಹಾಡಿಗೆ ಗ್ಲೋಬಲ್ ಗ್ಲೋಬ್ಸ್ ಅವಾರ್ಡ್ಸ್ ಸಿಕ್ಕಿದ್ದು, ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ಆಲಿಯಾ ಭಟ್ ಸಂತಸ ಹಂಚಿಕೊಂಡಿದ್ದಾರೆ.
ನಟಿ ಆಲಿಯಾ ಭಟ್ ಇದೀಗ RRR ಟೀಮ್ ಗಾಗಿ ಅದ್ಧೂರಿ ಪಾರ್ಟಿ ಆಯೋಜಿಸಿದ್ದಾರೆ. ರಾಮ್ ಚರಣ್ ಮತ್ತು ಎನ್ಟಿಆರ್ ಜೂನಿಯರ್ ಮತ್ತು ಎಸ್ಎಸ್ ರಾಜಮೌಳಿ ಸೇರಿದಂತೆ ಇಡೀ ಸಿನಿಮಾ ಟೀಮ್ಗೆ ಆಲಿಯಾ ಭಟ್ ಪಾರ್ಟಿ ನೀಡ್ತಿದ್ದಾರೆ.
2/ 8
ರಾಮ್ ಚರಣ್, ಜೂನಿಯರ್ ಎನ್ಟಿಆರ್ ಅಭಿನಯದ RRR ಸಿನಿಮಾದಲ್ಲಿ ಆಲಿಯಾ ಭಟ್ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ರು. ಸಣ್ಣ ಪಾತ್ರವಾದ್ರು ಅಚ್ಚುಕಟ್ಟಾಗಿ ನಿರ್ವಹಿಸಿದ್ದ ಆಲಿಯಾ ಅಭಿನಯಕ್ಕೆ ವಿಮರ್ಶಕರಿಂದ ಸಾಕಷ್ಟು ಪ್ರಶಂಸೆ ಕೇಳಿಬಂದಿತ್ತು.
3/ 8
ಬಾಲಿವುಡ್ ನಲ್ಲಿ ಬಹುಬೇಡಿಕೆ ನಟಿ ಆಲಿಯಾ, ಸೌತ್ ಸ್ಟಾರ್ಸ್ ಗಳ ಜೊತೆ ಕೂಡ ಉತ್ತಮ ಬಾಂದವ್ಯ ಹೊಂದಿದ್ದಾರೆ.
4/ 8
ಬ್ರಹ್ಮಸ್ತ್ರಾ ಸಿನಿಮಾ ಪ್ರಮೋಷನ್ ವೇಳೆ ಕೂಡ ಸೌತ್ ನಟ-ನಟಿಯರನ್ನು ಭೇಟಿ ಮಾಡಿದ್ರು. ದಕ್ಷಿಣ ಭಾರತದಲ್ಲಿ ಬ್ರಹ್ಮಸ್ತ್ರ ಸಿನಿಮಾ ವಿತರಣೆ ಹೊಣೆಯನ್ನು ಎಸ್ ಎಸ್ ರಾಮಮೌಳಿ ಹೊತ್ತು ಕೊಂಡಿದ್ರು.
5/ 8
ಆಲಿಯಾ ಭಟ್ , ಎಸ್ಎಸ್ ರಾಜಮೌಳಿ ಅವರೊಂದಿಗೆ ಮತ್ತೊಂದು ಸಿನಿಮಾ ಕೂಡ ಮಾಡ್ತಿದ್ದಾರೆ. ಸೌತ್ ಸೂಪರ್ಸ್ಟಾರ್ ಮಹೇಶ್ ಬಾಬುಗೆ ಜೋಡಿಯಾಗಿ ಆಲಿಯಾ ಭಟ್ ಅಭಿನಯಿಸಲಿದ್ದಾರೆ.
6/ 8
ಒರಿಜಿನಲ್ ಸ್ಕೋರ್ ವಿಭಾಗಕ್ಕೆ ನಾಟು ನಾಟು ಹಾಡು ಆಯ್ಕೆಯಾಗಿದೆ. ಇದು ಅಭಿಮಾನಿಗಳಿಗೆ ಸಂತೋಷದ ವಿಚಾರವಾಗಿದ್ದು ಈ ಬಾರಿ ಭಾರತೀಯ ಸಿನಿಮಾ ಮತ್ತೆ ಆಸ್ಕರ್ ಗೆಲ್ಲುವ ಭರವಸೆ ವ್ಯಕ್ತಪಡಿಸಿದ್ದಾರೆ.
7/ 8
'ಆರ್ಆರ್ಆರ್' ತಂಡ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಮಾರಂಭದಲ್ಲಿ RRR ಟೀಮ್ ಭಾಗಿಯಾಗಿತ್ತು. ಅಮೆರಿಕದ ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್ಸ್ನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ರಾಮೌಳಿ, ರಾಮ್ ಚರಣ್, ಜ್ಯೂ.ಎನ್ಟಿಆರ್ ಹಾಗೂ ಇನ್ನಿತರರು ಭಾಗವಹಿಸಿದ್ದರು.
8/ 8
ಸಾಂದರ್ಭಿಕ ಚಿತ್ರ ಈ ಚಿತ್ರ ಎರಡು ವಿಭಾಗಗಳಲ್ಲಿ ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿತ್ತು.