Alia Bhatt: ನನ್ನ ಗಂಡನಿಗೆ ನಾನು ಜೋರಾಗಿ ಮಾತಾಡಿದ್ರೆ ಇಷ್ಟವಾಗಲ್ಲ, ರಣಬೀರ್ ಸನ್ಯಾಸಿ ಸ್ವಭಾವಿ ಎಂದಿದ್ಯಾಕೆ ಆಲಿಯಾ?

ನಟಿ ಆಲಿಯಾ ಭಟ್, ನಟ ರಣಬೀರ್ ಕಪೂರ್ ಜೋಡಿ ಬಾಲಿವುಡ್​ನ ಬ್ಯೂಟಿಫುಲ್ ಜೋಡಿಗಳಲ್ಲಿ ಒಂದಾಗಿದೆ. ಈ ಜೋಡಿ ಮದುವೆಯಾಗಿ ವರ್ಷ ಕಳೆದಿದೆ. ಮಗಳು ರಾಹಾ ಆಲಿಯಾ ಭಟ್ ಮಡಿಲಲ್ಲಿ ಆಡುತ್ತಿದ್ದಾಳೆ. ಇದೀಗ ನಟಿ ಆಲಿಯಾ ತನ್ನ ಪತಿಯ ಬಗ್ಗೆ ಯಾರಿಗೂ ತಿಳಿಯದ ವಿಷಯ ಹೇಳಿದ್ದಾರೆ.

First published:

  • 17

    Alia Bhatt: ನನ್ನ ಗಂಡನಿಗೆ ನಾನು ಜೋರಾಗಿ ಮಾತಾಡಿದ್ರೆ ಇಷ್ಟವಾಗಲ್ಲ, ರಣಬೀರ್ ಸನ್ಯಾಸಿ ಸ್ವಭಾವಿ ಎಂದಿದ್ಯಾಕೆ ಆಲಿಯಾ?

    ಸಂದರ್ಶನವೊಂದರಲ್ಲಿ ಮಾತಾಡಿದ ನಟಿ ಆಲಿಯಾ ಭಟ್, ಕಾಮ, ಅಸೂಯೆ, ಹೆಮ್ಮೆ, ಕೋಪ, ಸೋಮಾರಿತನ, ದುರಾಶೆ ಮತ್ತು ಭೋಗದ ಬಗ್ಗೆ ಮಾತಾಡಿದ್ದಾರೆ. ವರ್ತನೆಗಳು ಮತ್ತು ದುರ್ಗುಣಗಳ ಬಗ್ಗೆ ಮಾತನಾಡುವಾಗ ತನ್ನ ವ್ಯಕ್ತಿತ್ವದ ಬಗ್ಗೆ ಕೂಡ ಹೇಳಿಕೊಂಡಿದ್ದಾರೆ.

    MORE
    GALLERIES

  • 27

    Alia Bhatt: ನನ್ನ ಗಂಡನಿಗೆ ನಾನು ಜೋರಾಗಿ ಮಾತಾಡಿದ್ರೆ ಇಷ್ಟವಾಗಲ್ಲ, ರಣಬೀರ್ ಸನ್ಯಾಸಿ ಸ್ವಭಾವಿ ಎಂದಿದ್ಯಾಕೆ ಆಲಿಯಾ?

    ಮನೆಯ ಊಟವನ್ನು ನಾನು ಇಷ್ಟಪಡುವುದಾಗಿ ಆಲಿಯಾ ಭಟ್ ಹೇಳಿದ್ದಾರೆ. ದಾಲ್-ಚಾವಲ್, ಬೆಂಡಿ ಕಿ ಸಬ್ಜಿ, ತಡ್ಕಾ ದಹಿ, ಉಪ್ಪಿನಕಾಯಿ ಮತ್ತು ಸಿಹಿತಿಂಡಿಯಲ್ಲಿ ಮಿಲ್ಕ್ ಕೇಕ್ ಅಂದ್ರೆ ನನಗಿಷ್ಟ ಎಂದು ನಟಿ ಆಲಿಯಾ ಹೇಳಿದ್ದಾರೆ. ಜೊತೆಗೆ ತನ್ನ ಕೋಪ ಮತ್ತು ಹತಾಶೆಯ ಬಗ್ಗೆಯೂ ಮಾತನಾಡಿದ್ರು.

    MORE
    GALLERIES

  • 37

    Alia Bhatt: ನನ್ನ ಗಂಡನಿಗೆ ನಾನು ಜೋರಾಗಿ ಮಾತಾಡಿದ್ರೆ ಇಷ್ಟವಾಗಲ್ಲ, ರಣಬೀರ್ ಸನ್ಯಾಸಿ ಸ್ವಭಾವಿ ಎಂದಿದ್ಯಾಕೆ ಆಲಿಯಾ?

    ವೈಸ್ ಇಂಡಿಯಾದೊಂದಿಗೆ ಮಾತನಾಡುತ್ತಾ ಆಲಿಯಾ ತನಗೆ ಯಾವ ಕಾರಣಕ್ಕೆ ಕೋಪ ಬರುತ್ತೆ ಎಂದು ಹೇಳಿದ್ದಾರೆ. ಯಾವುದೇ ವಿಚಾರದಲ್ಲಾದ್ರೂ ಸ್ಪರ್ಧಿಸಲು ಸಾಧ್ಯವಾಗದಿರುವುದು ನನಗೆ ಬೇಗನೆ ಕೋಪವನ್ನುಂಟುಮಾಡುತ್ತದೆ. ನನ್ನ ಕೋಪವನ್ನು ನಿಯಂತ್ರಿಸಲು ನಾನು ತುಂಬಾ ಪ್ರಯತ್ನಿಸಬೇಕು ಎಂದ್ರು.

    MORE
    GALLERIES

  • 47

    Alia Bhatt: ನನ್ನ ಗಂಡನಿಗೆ ನಾನು ಜೋರಾಗಿ ಮಾತಾಡಿದ್ರೆ ಇಷ್ಟವಾಗಲ್ಲ, ರಣಬೀರ್ ಸನ್ಯಾಸಿ ಸ್ವಭಾವಿ ಎಂದಿದ್ಯಾಕೆ ಆಲಿಯಾ?

    ನಾನು ಧ್ವನಿ ಏರಿಸಿ ಜೋರಾಗಿ ಮಾತಾಡಿದ್ರೆ ನನ್ನ ಪತಿ ರಣಬೀರ್​ಗೆ ಇಷ್ಟವಾಗೋದಿಲ್ಲ. ಜೋರಾಗಿ ಮಾತಾಡೋದು ಸಮಸ್ಯೆಗೆ ಪರಿಹಾರವಲ್ಲ ಎಂಬುವುದು ರಣಬೀರ್ ನಿಲುವಾಗಿದೆ. ಅತೃಪ್ತರಾದಾಗಲು ಶಾಂತವಾಗಿರಬೇಕೆಂದು ಅವರು ಬಯಸುತ್ತಾರೆ. ರಣಬೀರ್​ಗೆ ಸನ್ಯಾಸಿಯಂತಹ ಮನಸ್ಸು ಇದೆ ಎಂದು ಆಲಿಯಾ ಹೇಳಿದ್ದಾರೆ.

    MORE
    GALLERIES

  • 57

    Alia Bhatt: ನನ್ನ ಗಂಡನಿಗೆ ನಾನು ಜೋರಾಗಿ ಮಾತಾಡಿದ್ರೆ ಇಷ್ಟವಾಗಲ್ಲ, ರಣಬೀರ್ ಸನ್ಯಾಸಿ ಸ್ವಭಾವಿ ಎಂದಿದ್ಯಾಕೆ ಆಲಿಯಾ?

    ರಣಬೀರ್ ಶಾಂತ ಸ್ವಭಾವದ ಬಗ್ಗೆ ನಾನೇ ಅಸೂಯೆ ಪಟ್ಟಿದ್ದೇನೆ ಎಂದು ಆಲಿಯಾ ಹೇಳಿದ್ದಾರೆ. ಹೆಮ್ಮೆ, ಸೋಮಾರಿತನ, ದುರಾಸೆ ಇತ್ಯಾದಿಗಳ ಬಗ್ಗೆ ಕೂಡ ಆಲಿಯಾ ಮಾತಾಡಿದ್ದಾರೆ. ಹೆಮ್ಮೆಯ ಬಗ್ಗೆ ಮಾತನಾಡುತ್ತಾ, ಆಲಿಯಾ ತನ್ನ ಕಳೆದ ವರ್ಷದ ಬಾಕ್ಸ್ ಆಫೀಸ್ ಹಿಟ್ ಆದ ಗಂಗೂಭಾಯಿ ಕಾಠಿಯಾವಾಡಿ ಬಗ್ಗೆ ಮಾತಾಡಿದ್ರು.

    MORE
    GALLERIES

  • 67

    Alia Bhatt: ನನ್ನ ಗಂಡನಿಗೆ ನಾನು ಜೋರಾಗಿ ಮಾತಾಡಿದ್ರೆ ಇಷ್ಟವಾಗಲ್ಲ, ರಣಬೀರ್ ಸನ್ಯಾಸಿ ಸ್ವಭಾವಿ ಎಂದಿದ್ಯಾಕೆ ಆಲಿಯಾ?

    ಗಂಗೂಭಾಯಿ ಕಾಠಿಯಾವಾಡಿ ಯಶಸ್ಸು ನನ್ನ ಹೆಮ್ಮೆಯ ಕ್ಷಣವಾಗಿದೆ. ಡ್ರೀಮ್ ಡೈರೆಕ್ಟರ್ ಸಂಜಯ್ ಲೀಲಾ ಬನ್ಸಾಲಿ ಅವರೊಂದಿಗೆ ಇದು ನನ್ನ ಮೊದಲ ಚಿತ್ರ. ನಾವಿಬ್ಬರೂ  ಈ ಸಿನಿಮಾ ಒಟ್ಟಿಗೆ ಮಾಡಿದ್ದು ನನಗೆ ಖುಷಿಯಾಗಿದೆ ಎಂದು ಆಲಿಯಾ ಹೇಳಿದ್ದಾರೆ.

    MORE
    GALLERIES

  • 77

    Alia Bhatt: ನನ್ನ ಗಂಡನಿಗೆ ನಾನು ಜೋರಾಗಿ ಮಾತಾಡಿದ್ರೆ ಇಷ್ಟವಾಗಲ್ಲ, ರಣಬೀರ್ ಸನ್ಯಾಸಿ ಸ್ವಭಾವಿ ಎಂದಿದ್ಯಾಕೆ ಆಲಿಯಾ?

    ಆಲಿಯಾ ಕೊನೆಯ ಬಾರಿಗೆ ಬ್ರಹ್ಮಾಸ್ತ್ರದಲ್ಲಿ ಕಾಣಿಸಿಕೊಂಡಿದ್ದರು. ನಟಿ ಸದ್ಯಕ್ಕೆ ಕರಣ್ ಜೋಹರ್ ನಿರ್ದೇಶನದ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಬಿಡುಗಡೆಗೆ ಕಾಯುತ್ತಿದ್ದಾರೆ. ಬ್ರಹ್ಮಾಸ್ತ್ರ ಬಿಡುಗಡೆಯಾದ ನಂತರ, ಆಲಿಯಾಗೆ ಮಗಳು ರಾಹಾ ಕಪೂರ್ ಜನಿಸಿದರು.

    MORE
    GALLERIES