Alia Bhatt: ತಾಯಿ ಆದಾಗ ಅದರ ಅನುಭವವೇ ಡಿಫ್ರೆಂಟ್​, ತಾಯ್ತನದ ಬಗ್ಗೆ ನಟಿ ಆಲಿಯಾ ಭಟ್ ಹೇಳಿದ್ದು ಹೀಗೆ!

ಪೋಷಕರಾದ ನಂತರ ಪುರುಷರು ಮತ್ತು ಮಹಿಳೆಯರಿಗೆ ಕೇಳುವ ಪ್ರಶ್ನೆಗಳು ಪರಸ್ಪರ ವಿಭಿನ್ನವಾಗಿರುತ್ತವೆ.

First published:

  • 18

    Alia Bhatt: ತಾಯಿ ಆದಾಗ ಅದರ ಅನುಭವವೇ ಡಿಫ್ರೆಂಟ್​, ತಾಯ್ತನದ ಬಗ್ಗೆ ನಟಿ ಆಲಿಯಾ ಭಟ್ ಹೇಳಿದ್ದು ಹೀಗೆ!

    ಇತ್ತೀಚೆಗೆ ಬಾಲಿವುಡ್ ಖ್ಯಾತ ನಟಿ ಅಲಿಯಾ ಭಟ್ ತಾಯಿಯಾಗಿದ್ದೂ ಮತ್ತು ತಮ್ಮ ತಾಯ್ತನದ ಆನಂದವನ್ನು ಸಂಭ್ರಮಿಸುತ್ತಿರುವುದು ಎಲ್ಲರಿಗೂ ತಿಳಿದಿದೆ. ಅವರು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ತಮ್ಮ ತಾಯ್ತನದ ಅನುಭವ, ತಾವು ಮಾಡುತ್ತಿರುವ ಚಲನಚಿತ್ರಗಳು ಮತ್ತು ಮುಂದಿನ ಯೋಜನೆಗಳು ಮುಂತಾದವುಗಳ ಕುರಿತು ಮಾತನಾಡಿದ್ದಾರೆ.

    MORE
    GALLERIES

  • 28

    Alia Bhatt: ತಾಯಿ ಆದಾಗ ಅದರ ಅನುಭವವೇ ಡಿಫ್ರೆಂಟ್​, ತಾಯ್ತನದ ಬಗ್ಗೆ ನಟಿ ಆಲಿಯಾ ಭಟ್ ಹೇಳಿದ್ದು ಹೀಗೆ!

    ಈ ಸಂದರ್ಶನದಲ್ಲಿ ಅವರು, ಪೋಷಕರಾದ ನಂತರ ಪುರುಷರು ಮತ್ತು ಮಹಿಳೆಯರಿಗೆ ಕೇಳುವ ಪ್ರಶ್ನೆಗಳು ಪರಸ್ಪರ ವಿಭಿನ್ನವಾಗಿರುತ್ತವೆ. ನನಗೆ ಕೇಳಲಾಗುವ ಪ್ರಶ್ನೆಗಳೇ ಬೇರೆ? ನನ್ನ ಪತಿ ರಣಬೀರ್ ಕಪೂರ್ ಗೆ ಕೇಳಲಾಗುವ ಪ್ರಶ್ನೆಗಳೇ ಬೇರೆ ಎಂದು ಬಜಾರ್ ಇಂಡಿಯಾದೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ. ನನಗೆ ಪತ್ರಕರ್ತರು ಮತ್ತು ಇತರರು ನೀವು ವೃತ್ತಿಜೀವನದ ಉತ್ತುಂಗದಲ್ಲಿ ಇದ್ದಾಗ ಮದುವೆಯಾಗಿ ಮಕ್ಕಳನ್ನು ಪಡೆದಿದ್ದು ಗಂಭೀರ ನಿರ್ಧಾರವಲ್ಲವೇ? ಎಂದು ಕೇಳುತ್ತಾರೆ.

    MORE
    GALLERIES

  • 38

    Alia Bhatt: ತಾಯಿ ಆದಾಗ ಅದರ ಅನುಭವವೇ ಡಿಫ್ರೆಂಟ್​, ತಾಯ್ತನದ ಬಗ್ಗೆ ನಟಿ ಆಲಿಯಾ ಭಟ್ ಹೇಳಿದ್ದು ಹೀಗೆ!

    ಈ ನಿರ್ಧಾರದಿಂದ ಇಂದು ನೀವು ಸಂತೋಷವಾಗಿದ್ದೀರಾ? ಎಂದು ಕೇಳುತ್ತಾರೆ. ಆದರೆ ಇದೇ ಪ್ರಶ್ನೆಯನ್ನು ಒಬ್ಬ ನಾಯಕನಟನಿಗೆ ಕೇಳುವುದಿಲ್ಲ. ಏಕೆಂದರೆ ಅವನು ತಂದೆಯಾದ ನಂತರವೂ ತನ್ನ ವೃತ್ತಿಜೀವನವನ್ನು ಯಾವುದೇ ಅಡೆತಡೆಯಿಲ್ಲದೇ ಮುಂದುವರೆಸಬಹುದು. ಆದರೆ ಒಬ್ಬ ನಟಿಗೆ ಇದು ಸಾಧ್ಯವಿಲ್ಲ ಎಂಬುದು ಅವರ ಅಭಿಪ್ರಾಯವಾಗಿದೆ. ಮದುವೆಯಾದ ಮೇಲೆ ನಟಿಯ ಭವಿಷ್ಯ ಮುಗಿತೆಂದೇ ಅವರ ಲೆಕ್ಕ. ಎಂದು ಬಾಲಿವುಡ್ ಖ್ಯಾತ ನಟಿ ಅಲಿಯಾ ಭಟ್ ಹೇಳುತ್ತಾರೆ.

    MORE
    GALLERIES

  • 48

    Alia Bhatt: ತಾಯಿ ಆದಾಗ ಅದರ ಅನುಭವವೇ ಡಿಫ್ರೆಂಟ್​, ತಾಯ್ತನದ ಬಗ್ಗೆ ನಟಿ ಆಲಿಯಾ ಭಟ್ ಹೇಳಿದ್ದು ಹೀಗೆ!

    ನಾನು ಹತ್ತು ವರ್ಷಕಾಲ ಬಾಲಿವುಡ್‍ನಲ್ಲಿ ನಾಯಕನಟಿಯಾಗಿ ಕಾರ್ಯ ನಿರ್ವಹಿಸಿದ್ದೇನೆ. ಹಲವು ಹಿಟ್ ಚಲನಚಿತ್ರಗಳನ್ನು ನೀಡಿದ್ದೇನೆ. ನನಗೆ ನಾನು ನಡೆದು ಬಂದ ಹಾದಿಯ ಬಗ್ಗೆ ತೃಪ್ತಿ ಇದೆ. ನಾನು ಹತ್ತು ವರ್ಷಗಳ ಕಾಲ ನಿರಂತರವಾಗಿ ಕೆಲಸ ಮಾಡಿದೆ. ನಂತರ ನನಗೆ ಮದುವೆಯಾಗಿ ಮಕ್ಕಳನ್ನು ಪಡೆಯಲು ಇದು ಸರಿಯಾದ ಸಮಯ ಎನಿಸಿತು. ನಾನು ನನಗೆ ಸರಿ ಎನಿಸಿದ್ದನ್ನು ಮಾಡಿದೆ.

    MORE
    GALLERIES

  • 58

    Alia Bhatt: ತಾಯಿ ಆದಾಗ ಅದರ ಅನುಭವವೇ ಡಿಫ್ರೆಂಟ್​, ತಾಯ್ತನದ ಬಗ್ಗೆ ನಟಿ ಆಲಿಯಾ ಭಟ್ ಹೇಳಿದ್ದು ಹೀಗೆ!

    ರಣಬೀರ್ ಮೇಲೆ ನನಗೆ ತುಂಬಾ ಪ್ರೀತಿ ಇದೆ. ನಾವಿಬ್ಬರೂ ಈಗ ನಮ್ಮ ಮಗಳೊಂದಿಗೆ ತುಂಬಾ ಸಂತೋಷದಿಂದ ಇದ್ದೇವೆ ಎಂದು ಬಾಲಿವುಡ್ ಖ್ಯಾತ ನಟಿ ಅಲಿಯಾ ಭಟ್ ಸಂದರ್ಶನದಲ್ಲಿ ಹೇಳುತ್ತಾರೆ. ನಾನು ಯಾವಾಗಲೂ ಪ್ರೀತಿಯಿಂದ ಕೆಲಸ ಮಾಡುವ ವ್ಯಕ್ತಿಯಾಗಿದ್ದೇನೆ. ನಾನು ಯಾವುದೇ ನಿರ್ಧಾರ ತೆಗೆದುಕೊಂಡರೂ, ಅದು ಸರಿಯೆನಿಸಿದರೆ ನಾನು ಅದನ್ನು ಮಾಡುತ್ತೇನೆ.

    MORE
    GALLERIES

  • 68

    Alia Bhatt: ತಾಯಿ ಆದಾಗ ಅದರ ಅನುಭವವೇ ಡಿಫ್ರೆಂಟ್​, ತಾಯ್ತನದ ಬಗ್ಗೆ ನಟಿ ಆಲಿಯಾ ಭಟ್ ಹೇಳಿದ್ದು ಹೀಗೆ!

    ಆದರೆ ಅದು ಸರಿಯಾಗಿಲ್ಲದಿದ್ದರೆ, ನಾನು ನನ್ನ ನಿರ್ಧಾರದಿಂದ ಹಿಂದಕ್ಕೆ ಬಂದುಬಿಡುತ್ತೇನೆ. ನಾನು ಮಾಡುವ ಚಿತ್ರ ಎಷ್ಟೇ ಬಜೆಟ್‍ದಾಗಿರಲಿ, ಅದು ಎಷ್ಟೇ ದೊಡ್ಡ ತಂಡವಾಗಿರಲಿ, ನನಗೆ ಸರಿ ಎನಿಸದಿದ್ದರೆ ನಾನು ಹೊರಗಡೆ ಬಂದು ಬಿಡುತ್ತೇನೆ. ನನಗೆ ಸರಿ ಎನಿಸಿದ್ದನ್ನು ಮಾತ್ರ ಮಾಡುತ್ತೇನೆ.

    MORE
    GALLERIES

  • 78

    Alia Bhatt: ತಾಯಿ ಆದಾಗ ಅದರ ಅನುಭವವೇ ಡಿಫ್ರೆಂಟ್​, ತಾಯ್ತನದ ಬಗ್ಗೆ ನಟಿ ಆಲಿಯಾ ಭಟ್ ಹೇಳಿದ್ದು ಹೀಗೆ!

    ಸಂಭಾಷಣೆಯ ಸಮಯದಲ್ಲಿ, ಆಲಿಯಾ ಭಟ್ ಈ ವಾರ ತನಗೆ ಸಂಭವಿಸಿದ ಅತ್ಯುತ್ತಮ ವಿಷಯವನ್ನು ಬಹಿರಂಗಪಡಿಸಿದರು. ಮಗಳು ರಾಹಾ ಅವರ ಮುಖವನ್ನು ಸ್ಪರ್ಶಿಸುವುದು ಅವರ ವಾರದ ಪ್ರಮುಖ ಅಂಶವಾಗಿದೆ. ಈ ಘಟನೆಯು ಅವರ ಇಡೀ ಜೀವನದ ಪ್ರಮುಖ ಅಂಶವಾಗಿದೆ ಎಂದು ಅವರು ಹೇಳಿದರು. ಇದು ಅವರಿಬ್ಬರ ನಡುವಿನ ರೋಮ್ಯಾಂಟಿಕ್ ಕ್ಷಣವಂತೆ. ಮತ್ತು ಇದು ಅಕ್ಷರಶಃ ಅವರ ಜೀವನದಲ್ಲಿ ಸಂಭವಿಸಿದ ಅತ್ಯುತ್ತಮ ವಿಷಯವಾಗಿದೆ ಎಂದು ಅವರು ಸಂಭ್ರಮದಿಂದ ಹೇಳುತ್ತಾರೆ.

    MORE
    GALLERIES

  • 88

    Alia Bhatt: ತಾಯಿ ಆದಾಗ ಅದರ ಅನುಭವವೇ ಡಿಫ್ರೆಂಟ್​, ತಾಯ್ತನದ ಬಗ್ಗೆ ನಟಿ ಆಲಿಯಾ ಭಟ್ ಹೇಳಿದ್ದು ಹೀಗೆ!

    ಈಗ ರಣವೀರ್ ಸಿಂಗ್ ಅವರೊಂದಿಗೆ ಕರಣ್ ಜೋಹರ್ ನಿರ್ದೇಶನದ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಬಿಡುಗಡೆಗಾಗಿ ಆಲಿಯಾ ಎದುರು ನೋಡುತ್ತಿದ್ದಾರೆ. ಆಕೆಯ ಚೊಚ್ಚಲ ಹಾಲಿವುಡ್ ಚಿತ್ರ ಹಾರ್ಟ್ ಆಫ್ ಸ್ಟೋನ್ ಕೂಡ ಬಿಡುಗಡೆಗೆ ಸಿದ್ಧವಾಗಿದೆ. ಈಗ ಅಲಿಯಾ ಭಟ್ ತಾಯ್ತನದ ಸಂಭ್ರಮದಲ್ಲಿದ್ದಾರೆ. ತಮ್ಮ ತಾಯ್ತನವನ್ನು ಅನುಭವಿಸುತ್ತಿದ್ದಾರೆ. ಅವರ ಕೈಯಲ್ಲಿ ಸಾಲು ಸಾಲು ಚಿತ್ರಗಳಿವೆ. ಮಗಳು ರಾಹಾ ಭಟ್ ಅವರಿಗೆ ಅದೃಷ್ಟ ದೇವತೆಯೇ ಸರಿ.

    MORE
    GALLERIES