ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ತನ್ನ ಮಗುವಿಗೆ ರಾಹಾ ಎಂದು ಹೆಸರಿಟ್ಟಿದ್ದಾರೆ. ಆಲಿಯಾ ಸಿನಿಮಾ ಕೆಲಸಕ್ಕೆ ಬ್ರೇಕ್ ಕೊಟ್ಟಿದ್ದು, ತಾಯ್ತನದ ಪ್ರತಿ ಕ್ಷಣವನ್ನು ಅನುಭವಿಸುತ್ತಿದ್ದಾರೆ. ಇತ್ತೀಚೆಗೆ ಆಲಿಯಾ ತನ್ನ ಮಗಳಿಗೆ ಹಾಲುಣಿಸುವ ಚಿತ್ರವೊಂದು ವೈರಲ್ ಆಗಿತ್ತು. ಕೆಂಪು ಸೀರೆಯುಟ್ಟು ಮಗುವಿಗೆ ಹಾಲುಣಿಸೋ ವೇಳೆ ನಟಿ ನಗುತ್ತಿದ್ದ ಫೋಟೋದಲ್ಲಿ ಆಕೆಯ ತಾಯ್ತನದ ಆನಂದ ಎದ್ದು ಕಾಣುತ್ತಿತ್ತು.
ತಾಯ್ತನವು ಮಹಿಳೆಯನ್ನು ದೈಹಿಕವಾಗಿ ಮಾತ್ರವಲ್ಲದೆ ಭಾವನಾತ್ಮಕವಾಗಿಯೂ ಹೇಗೆಲ್ಲಾ ಬದಲಾಯಿಸುತ್ತದೆ ಎಂಬ ಬಗ್ಗೆ ನಟಿ ಮಾತಾಡಿದ್ದಾರೆ. ಪೋಸ್ಟ್ನಲ್ಲಿ ತಾಯ್ತನ ತನ್ನನ್ನು ಹೇಗೆಲ್ಲಾ ಬದಲಾಯಿಸಿತು. ಇದು ನನ್ನ ದೇಹ, ನನ್ನ ಕೂದಲು, ನನ್ನ ಸ್ತನ, ನನ್ನ ಚರ್ಮ, ನನ್ನ ಆದ್ಯತೆಗಳು ಮತ್ತು ನನ್ನ ಭಯವನ್ನು ಬದಲಾಯಿಸಿತು. ಜೊತೆಗೆ ನನ್ನ ಹೃದಯವನ್ನು ಸಹ ಬಹಳ ವಿಸ್ತಾರಗೊಳಿಸಿದೆ ಎಂದು ನಟಿ ಬರೆದುಕೊಂಡಿದ್ದಾರೆ.