ಆಲಿಯಾ ಭಟ್ ತನ್ನ ತಂದೆ ಮಹೇಶ್ ಭಟ್ ಅವರ ಪ್ರೀತಿಯ ಮಗಳಾಗಿದ್ದಾರೆ. ತಂದೆ ಜೊತೆ ಹೆಚ್ಚಾಗಿ ಸಿನಿಮಾ ಸೆಟ್ಗೆ ಹೋಗುತ್ತಿದ್ದರು. ಆಲಿಯಾಗೆ ಬಾಲ್ಯದಲ್ಲಿ ಆಲೂಗಡ್ಡೆ ಎಂದರೆ ತುಂಬಾ ಇಷ್ಟವಿತ್ತು. ಹಾಗಾಗಿಯೇ ಎಲ್ಲರೂ ಅವಳನ್ನು ‘ಆಲೂ’ ಎಂದು ಕರೆಯುತ್ತಿದ್ದರು. ಮಹೇಶ್ ಅವರನ್ನು ಪ್ರೀತಿಯಿಂದ ‘ಆಲೂ ಕಾಲು’, ‘ಆಲೂ ಭಾಲು’, ‘ಬಟಾಟ ವಾಡ’ ಎಂಬ ಹೆಸರುಗಳಿಂದ ಕರೆಯುತ್ತಾರೆ.