Akshay Kumar: ತಮ್ಮ ಮಕ್ಕಳಿಗೆ ಈ ಸಿನಿಮಾ ತೋರಿಸಲ್ವಂತೆ ಅಕ್ಷಯ್ ಕುಮಾರ್, ಇದೇನಪ್ಪಾ ಹಿಂಗಂದ್ರು?
Akshay Kumar: ಬಾಲಿವುಡ್ ನಟ ಅಕ್ಷಯ್ ಕುಮಾರ್, ಎಲ್ಲಾ ನಟರಿಗಿಂತ ವಿಭಿನ್ನ. ಅದನ್ನು ಅವರು ಹಲವಾರು ಬಾರಿ ಸಾಬೀತು ಮಾಡಿದ್ದಾರೆ. ಸಾಲು ಸಾಲು ಸಿನಿಮಾ ಮಾಡುವ ಮೂಲಕ ಸುದ್ದಿಯಲ್ಲಿರುವ ನಟ ಈ ಬಾರಿ ಮಕ್ಕಳ ಬಗ್ಗೆ ಮಾತನಾಡಿದ್ದಾರೆ. ಏನು ಅಂತೀರಾ? ಈ ಸ್ಟೋರಿ ಓದಿ.
1991 ತೆರೆಕಂಡ ಸೌಗಂಧ್ ಸಿನಿಮಾದಿಂದ ಬಾಲಿವುಡ್ ಎಂಟ್ರಿ ಪಡೆದ ಅಕ್ಷಯ್ ಕುಮಾರ್, ಇಂದು ಅತ್ಯಂತ ಬ್ಯುಸಿ ಇರುವ ನಟ. ಸಾಲು ಸಾಲು ಸಿನಿಮಾಗಳಲ್ಲಿ ಮಾಡಿ, ಯಶಸ್ಸುಗಳಿಸಿರುವ ನಟ ಎನ್ನಬಹುದು.
2/ 8
ಮೊದಲ ಸಿನಿಮಾ ಸುದ್ದಿ ಮಾಡಲಿಲ್ಲ, ನಂತರ ರಿಲೀಸ್ ಆಗ ಕಿಲಾಡಿ ಸೂಪರ್ ಹಿಟ್ ಆಯಿತು. ನಂತರ ಅಕ್ಷಯ್ ಕುಮಾರ್ ಮತ್ತೆ ಹಿಂದೆ ತಿರುಗಿ ನೋಡಲೇ ಇಲ್ಲ. ಎಲ್ಲಾ ಸಿನಿಮಾಗಳು ಸೂಪರ್ ಹಿಟ್.
3/ 8
ಈ ವರ್ಷ 2022ರಲ್ಲಿ ಅಕ್ಷಯ್ ಕುಮಾರ ಅವರ 7 ಸಿನಿಮಾಗಳು ತೆರೆಗೆ ಬರಲಿವೆ ಎಂಬ ಸುದ್ದಿ ಇದೆ. ಈಗಾಗಲೇ ಅವರ ನಟನೆಯ ಪೃಥ್ವಿರಾಜ್ ಬಂದಿದೆ, ಅದಕ್ಕೂ ಮುನ್ನ ಬಚ್ಚನ್ ಪಾಂಡೆ. ಆದರೆ ಈ ಸಿನಿಮಾಗಳು ನಿರೀಕ್ಷೆ ತಲುಪಲಿಲ್ಲ. ಕನರ ಮನ ಗೆಲ್ಲುವಲ್ಲಿ ಫೇಲ್ ಆಗಿವೆ.
4/ 8
ಮೂಲಗಳ ಪ್ರಕಾರ ಅವರ ಅಭಿನಯದ ರಕ್ಷಾ ಬಂಧನ್, ಓ ಮೈ ಗಾಡ್ 2, ರಾಮ್ ಸೇತು ಶೂಟಿಂಗ್ ಮುಕ್ತಾಯದ ಹಂತದಲ್ಲಿದ್ದು, ಬಿಡುಗಡೆಗೆ ಸಿದ್ದವಾಗಿದೆ.
5/ 8
ವರ್ಷದಲ್ಲಿ ಹಲವಾರು ಸಿನಿಮಾಗಳ ಮಾಡುವ ಈ ನಟ ಒಬ್ಬ ಅದ್ಭುತ ತಂದೆ ಕೂಡ ಹೌದು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಆರವ್ ಮತ್ತು ನಿತಾರಾ ಎನ್ನುವ ಮಕ್ಕಳಿದ್ದಾರೆ. ಮಕ್ಕಳ ವಿಚಾರದಲ್ಲಿ ಅಕ್ಷಯ್ ಬಹಳ ಎಚ್ಚರ ವಹಿಸುತ್ತಾರೆ.
6/ 8
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅಕ್ಷಯ್ ತಾನೂ ತನ್ನ ಅಭಿನಯದ ಗರಂ ಮಸಾಲಾ ಸಿನಿಮಾವನ್ನು ಮಕ್ಕಳಿಗೆ ತೋರಿಸುವುದಿಲ್ಲ ಎಂದಿದ್ದಾರೆ. ಇದಕ್ಕೆ ಅಭಿಮಾನಿಗಳು ಸಹ ಯಾಕೆ ಎಂದು ಪ್ರಶ್ನಿಸಿದ್ದಾರೆ. ಆದರೆ ಅಕ್ಷಯ್ ಈ ಬಗ್ಗೆ ಉತ್ತರಿಸಿಲ್ಲ.
7/ 8
2005ರಲ್ಲಿ ಬಿಡುಗಡೆಯಾದ ಗರಂ ಮಸಾಲಾ ಸಿನಿಮಾ ಸೂಪರ್ ಡೂಪ್ ಹಿಟ್ ಆಗಿತ್ತು. ಜಾನ್ ಅಬ್ರಾಹಂ, ರಿಮಿ ಸೇನ್, ನೇಹಾ ಧೂಫಿಯಾ ಸೇರಿದಂತೆ ಹಲವಾರು ಕಲಾವಿದರ ಬಳಗ ಇದರಲ್ಲಿತ್ತು.
8/ 8
ಕಲೆಕ್ಷನ್ ವಿಚಾರದಲ್ಲೂ ಅದ್ಭುತ ಪ್ರತಿಕ್ರಿಯೆ ಪಡೆದಿದ್ದ ಸಿನಿಮಾವನ್ನು ಅಕ್ಷಯ್ ಯಾಕೆ ತನ್ನ ಮಕ್ಕಳಿಗೆ ತೋರಿಸಲ್ಲ ಎಂಬುದು ಈಗ ಪ್ರಶ್ನೆಯಾಗಿ ಉಳಿದಿದೆ.