ಬಾಲಿವುಡ್ ಸ್ಟಾರ್ಗಳು ತಮ್ಮ ವೃತ್ತಿಪರ ಜೀವನ ಮತ್ತು ವೈಯಕ್ತಿಕ ಜೀವನದಿಂದಾಗಿ ಸುದ್ದಿಯಲ್ಲಿದ್ದಾರೆ. ಅಭಿಮಾನಿಗಳು ಅವರ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಲು ಬಯಸುತ್ತಾರೆ. ಅವರು ಯಾರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ, ಯಾರೊಂದಿಗೆ ಬ್ರೇಕಪ್ ಆಯ್ತು, ಅವರು ಮದುವೆಯಾಗುತ್ತಾರೋ ಇಲ್ಲವೋ ಎಂದು ಅಭಿಮಾನಿಗಳು ತಿಳಿದುಕೊಳ್ಳಲು ಬಯಸುತ್ತಾರೆ. ಬಹಳಷ್ಟು ಸ್ಟಾರ್ಗಳ ಮದುವೆ ನಿಶ್ಚಿತಾರ್ಥ ಆದ ಮೇಲೆ ಮರಿದುಬಿತ್ತು.
ಬಾಲಿವುಡ್‌ನ ಭಾಯಿಜಾನ್ ಇಲ್ಲಿಯವರೆಗೆ ಮದುವೆಯಾಗಿಲ್ಲ. ಆದರೆ ಅವರು ಮದುವೆಯಾಗಲು ಸಿದ್ಧರಾಗಿರುವ ಸಮಯವಿತ್ತು. ಮದುವೆ ಕಾರ್ಡ್‌ಗಳನ್ನು ಕೂಡಾ ಪ್ರಿಂಟ್ ಮಾಡಲಾಗಿತ್ತು. ಸಲ್ಮಾನ್ ಖಾನ್ ತನ್ನ ಮಾಜಿ ಗೆಳತಿ ಸಂಗೀತಾ ಬಿಜಲಾನಿ ಅವರನ್ನು ಮದುವೆಯಾಗಲು ಹೊರಟಿದ್ದರು. ಆದರೆ ಈ ಮದುವೆ ಆಗಲಿಲ್ಲ. ಕರಣ್ ಅವರ ಕಾರ್ಯಕ್ರಮದಲ್ಲಿ ಸ್ವತಃ ಸಲ್ಮಾನ್ ಖಾನ್ ಈ ಬಗ್ಗೆ ಪ್ರಸ್ತಾಪಿಸಿದ್ದರು. ನಮ್ಮಿಬ್ಬರ ಮದುವೆ ಕಾರ್ಡ್ ಕೂಡ ಪ್ರಿಂಟ್ ಆಗಿದ್ದು, ಕೊನೆ ಕ್ಷಣದಲ್ಲಿ ಮದುವೆ ಮುರಿದು ಬಿದ್ದಿದೆ ಎಂದು ಹೇಳಿದ್ದರು.
ಅಕ್ಷಯ್ ಕುಮಾರ್ ಮತ್ತು ರವೀನಾ ಟಂಡನ್ 'ಮೈನ್ ಕಿಲಾಡಿ ತೂ ಅನಾರಿ', 'ಮೊಹ್ರಾ' ಮತ್ತು 'ಖಿಲಾಡಿಯೋಂ ಕಾ ಕಿಲಾಡಿ' ಚಿತ್ರಗಳ ಚಿತ್ರೀಕರಣದ ಸಮಯದಲ್ಲಿ ಪರಸ್ಪರ ಹತ್ತಿರವಾಗಿದ್ದರು. ಇಬ್ಬರೂ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಸ್ವಲ್ಪ ಸಮಯದ ನಂತರ ಇಬ್ಬರೂ ಬ್ರೇಕಪ್ ಆದರು. ಮಾಧ್ಯಮಗಳ ವರದಿಗಳ ಪ್ರಕಾರ, ಅಕ್ಷಯ್ ಮತ್ತು ರವೀನಾ ಬ್ರೇಕಪ್‌ಗೆ ನಟನೇ ಕಾರಣ ಎಂದು ಹೇಳಲಾಗುತ್ತದೆ.