Akanksha Dubey: ನಟಿ ಆಕಾಂಕ್ಷಾ ದುಬೆ ಸಾವಿನ ಹಿಂದೆ ಅನುಮಾನದ ಹುತ್ತ; ಹೋಟೆಲ್ ರೂಮ್​ನಲ್ಲಿ ಅಸಲಿಗೆ ನಡೆದಿದ್ದು ಏನು?

actress akanksha dubey: ಭೋಜ್​ಪುರಿ ನಟಿ ಆಕಾಂಕ್ಷಾ ದುಬೆ ಆತ್ಮಹತ್ಯೆ ಕೇಸ್ ಸುತ್ತ ಅನುಮಾನ ಹೆಚ್ಚಾಗಿದೆ. ಭೋಜ್​ಪುರಿ ನಟಿ ಆಕಾಂಕ್ಷಾ ದುಬೆ ಬನಾರಸ್​ನ ಸಾರನಾಥ್​ನಲ್ಲಿರುವ ಹೋಟೆಲ್​ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ.

First published:

  • 18

    Akanksha Dubey: ನಟಿ ಆಕಾಂಕ್ಷಾ ದುಬೆ ಸಾವಿನ ಹಿಂದೆ ಅನುಮಾನದ ಹುತ್ತ; ಹೋಟೆಲ್ ರೂಮ್​ನಲ್ಲಿ ಅಸಲಿಗೆ ನಡೆದಿದ್ದು ಏನು?

    ಸಾರನಾಥ ಪೊಲೀಸ್ ಠಾಣೆ ವ್ಯಾಪ್ತಿಯ ಸೋಮೇಂದ್ರ ಹೋಟೆಲ್​ನಲ್ಲಿ ಮಾಡೆಲ್ ಹಾಗೂ ನಟಿ ಆಕಾಂಕ್ಷಾ ದುಬೆ ಮೃತದೇಹ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆ ಆಗಿದೆ. ಆಕೆ ಮೂಲತಃ ಭದೋಹಿ ಜಿಲ್ಲೆಯ ಚೌರಿ ಪೊಲೀಸ್ ಠಾಣೆ ವ್ಯಾಪ್ತಿಯ ಪಾರ್ಸಿಪುರದ ನಿವಾಸಿಯಾಗಿದ್ದಾರೆ.

    MORE
    GALLERIES

  • 28

    Akanksha Dubey: ನಟಿ ಆಕಾಂಕ್ಷಾ ದುಬೆ ಸಾವಿನ ಹಿಂದೆ ಅನುಮಾನದ ಹುತ್ತ; ಹೋಟೆಲ್ ರೂಮ್​ನಲ್ಲಿ ಅಸಲಿಗೆ ನಡೆದಿದ್ದು ಏನು?

    ಕಳೆದ ಒಂದು ತಿಂಗಳಿಂದ ಸಾರಾನಾಥನ ಹೋಟೆಲ್​ನಲ್ಲಿ ತಂಗಿದ್ದ ನಟಿ ಭೋಜ್​ಪುರಿ ಚಿತ್ರದ ಶೂಟಿಂಗ್ ಸೆಟ್​ಗೆ ಹೋಗಿ ಶೂಟಿಂಗ್ ಮುಗಿದ ಬಳಿಕ ಹೋಟೆಲ್​ನಲ್ಲಿ ರೆಸ್ಟ್ ಮಾಡುತ್ತಿದ್ರು.

    MORE
    GALLERIES

  • 38

    Akanksha Dubey: ನಟಿ ಆಕಾಂಕ್ಷಾ ದುಬೆ ಸಾವಿನ ಹಿಂದೆ ಅನುಮಾನದ ಹುತ್ತ; ಹೋಟೆಲ್ ರೂಮ್​ನಲ್ಲಿ ಅಸಲಿಗೆ ನಡೆದಿದ್ದು ಏನು?

    ಭೋಜ್ಪುರಿ ನಟಿ ಆಕಾಂಕ್ಷಾ ದುಬೆ ಸಿನಿಮಾ ಹಾಡೊಂದು ಇಂದು (ಮಾರ್ಚ್ 26) ಬಿಡುಗಡೆಯಾಗಬೇಕಿತ್ತು. ಆಕಾಂಕ್ಷಾ ದುಬೆ ನಿನ್ನೆ (ಮಾರ್ಚ್ 27) ಶನಿವಾರ ಸ್ನೇಹಿತೆಯ ಹುಟ್ಟುಹಬ್ಬಕ್ಕೆಂದು ಹೋಗಿದ್ದರು. ಪಾರ್ಟಿ ಮುಗಿಸಿ ರೂಮ್ ಸೇರಿದ್ದಾರೆ.

    MORE
    GALLERIES

  • 48

    Akanksha Dubey: ನಟಿ ಆಕಾಂಕ್ಷಾ ದುಬೆ ಸಾವಿನ ಹಿಂದೆ ಅನುಮಾನದ ಹುತ್ತ; ಹೋಟೆಲ್ ರೂಮ್​ನಲ್ಲಿ ಅಸಲಿಗೆ ನಡೆದಿದ್ದು ಏನು?

    ಭಾನುವಾರ ಬೆಳಗ್ಗೆ ಆಕಾಂಕ್ಷಾ ದುಬೆ ಅವರ ಸಹಾಯಕಿ ಕೊಠಡಿ ತೆರೆಯಲು ಹೋದಾಗ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಬಳಿಕ ಆಕೆ ಹೋಟೆಲ್ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಹೋಟೆಲ್ ಮಾಲೀಕರು ಹಾಗೂ ಪೋಲೀಸರು ಸಾರನಾಥ್ ಹೋಟೆಲ್ಗೆ ಆಗಮಿಸಿದ್ರು. ಹೋಟೆಲ್ ಬಾಗಿಲು ತೆರೆದಾಗ ನಟಿ ಆಕಾಂಕ್ಷಾ ದುಬೆ ನೇಣು ಬಿಗಿದುಕೊಂಡು ಸ್ಥಿತಿಯಲ್ಲಿದ್ರು.

    MORE
    GALLERIES

  • 58

    Akanksha Dubey: ನಟಿ ಆಕಾಂಕ್ಷಾ ದುಬೆ ಸಾವಿನ ಹಿಂದೆ ಅನುಮಾನದ ಹುತ್ತ; ಹೋಟೆಲ್ ರೂಮ್​ನಲ್ಲಿ ಅಸಲಿಗೆ ನಡೆದಿದ್ದು ಏನು?

    ಇನ್ಸ್ಟಾಗ್ರಾಂನಲ್ಲಿ ತಮ್ಮ ಡ್ಯಾನ್ಸ್ ವಿಡಿಯೋ ಅಪ್ಲೋಡ್ ಮಾಡಿದ ಕೆಲವೇ ಗಂಟೆಗಳ ಬಳಿಕ ಅವರು ನಿಧನ ಹೊಂದಿದ್ದಾರೆ. ಕೇವಲ 19 ಗಂಟೆಗಳ ಹಿಂದೆ ತಮ್ಮ ವಿಡಿಯೋ ಹಂಚಿಕೊಂಡಿದ್ದ ಆಕಾಂಕ್ಷಾ ವಿಡಿಯೋನಲ್ಲಿ ಖುಷಿಯಾಗಿ ನೃತ್ಯ ಮಾಡಿದ್ದರು.

    MORE
    GALLERIES

  • 68

    Akanksha Dubey: ನಟಿ ಆಕಾಂಕ್ಷಾ ದುಬೆ ಸಾವಿನ ಹಿಂದೆ ಅನುಮಾನದ ಹುತ್ತ; ಹೋಟೆಲ್ ರೂಮ್​ನಲ್ಲಿ ಅಸಲಿಗೆ ನಡೆದಿದ್ದು ಏನು?

    ಸಹನಟ ಸಮರ್ ಸಿಂಗ್ ಅವರನ್ನು ಆಕಾಂಕ್ಷಾ ದುಬೆ ಪ್ರೀತಿಸುತ್ತಿದ್ದರು. ಪ್ರೇಮಿಗಳ ದಿನದಂದು ಸಮೀರ್ ಸಿಂಗ್ ಜೊತೆಗೆ ಕಳೆದ ಆತ್ಮೀಯ ಕ್ಷಣಗಳ ಫೋಟೊಗಳನ್ನು ಆಕಾಂಕ್ಷಾ ಹಂಚಿಕೊಂಡಿದ್ದರು. ಇವರ ಸಾವಿಗೆ ಲವ್ ಸ್ಟೋರಿ ಕಾರಣ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 78

    Akanksha Dubey: ನಟಿ ಆಕಾಂಕ್ಷಾ ದುಬೆ ಸಾವಿನ ಹಿಂದೆ ಅನುಮಾನದ ಹುತ್ತ; ಹೋಟೆಲ್ ರೂಮ್​ನಲ್ಲಿ ಅಸಲಿಗೆ ನಡೆದಿದ್ದು ಏನು?

    ಎಸಿಪಿ ಕ್ಯಾಂಟ್ ಜೊತೆ ಪೊಲೀಸ್ ತಂಡ ಸ್ಥಳ ಪರಿಶೀಲನೆ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದು, ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುತ್ತಿದ್ದಾರೆ. ಮತ್ತೊಂದೆಡೆ ವಿಧಿವಿಜ್ಞಾನ ತಂಡವೂ ಸ್ಥಳದಿಂದ ಸಾಕ್ಷ್ಯ ಸಂಗ್ರಹಿಸುತ್ತಿದೆ.

    MORE
    GALLERIES

  • 88

    Akanksha Dubey: ನಟಿ ಆಕಾಂಕ್ಷಾ ದುಬೆ ಸಾವಿನ ಹಿಂದೆ ಅನುಮಾನದ ಹುತ್ತ; ಹೋಟೆಲ್ ರೂಮ್​ನಲ್ಲಿ ಅಸಲಿಗೆ ನಡೆದಿದ್ದು ಏನು?

    ಭೋಜ್​ಪುರಿ ನಟಿ ಆಕಾಂಕ್ಷಾ ದುಬೆ ಡ್ಯಾನ್ಸ್ ನಿಂದ ಹೆಚ್ಚು ಜನಪ್ರಿಯರಾಗಿದ್ರು. ನಟನೆಯ ಜೊತೆಗೆ ಮಾಡೆಲಿಂಗ್ ಕೆಲಸವನ್ನೂ ಮಾಡುತ್ತಿದ್ದ ಅವರು ಚಿತ್ರದ ಶೂಟಿಂಗ್​ಗೆ ಸಂಬಂಧಿಸಿದಂತೆ ಆಗಾಗ ವಾರಣಾಸಿಗೆ ಹೋಗುತ್ತಿದ್ದರು.

    MORE
    GALLERIES