ಒಂದರ ಹಿಂದೆ ಒಂದರಂತೆ ಯಶಸ್ವಿ ಚಿತ್ರಗಳ ಮೂಲಕ ಬಾಲಿವುಡ್ನಲ್ಲಿ ಯಶಸ್ಸಿನ ಮೆಟ್ಟಿಲನ್ನು ಏರಿದ್ದಾರೆ. ಆದ್ರೆ ನಟಿ ಕಾಜೋಲ್ ಕಪ್ಪು ಮೈ ಬಣ್ಣದಿಂದ ಟೀಕೆಗೆ ಗುರಿಯಾಗುವುದು ತಪ್ಪಿಲ್ಲ. ಆಕೆಯ ಸಿನಿ ಕೆರಿಯರ್ ಆರಂಭದಿಂದ ಇಂದಿನವರೆಗೂ, ಜನರು ಅವಳ ಚರ್ಮದ ಟೋನ್ ಬಗ್ಗೆ ಮಾತಾಡುತ್ತಾರೆ. ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಕಾಜೋಲ್ ಫೇರ್ ಆಗಿದ್ದಾರೆ ಎನ್ನುವ ಮಾತು ಕೇಳಿಬಂದಿದೆ. ಫೋಟೋ ಕ್ರೆಡಿಟ್: @kajol/Instagram
ಕಾಜೋಲ್ ಫೇರ್ ಆಗಿರುವ ಗುಟ್ಟನ್ನೂ ಹೇಳಿದ್ದಾರೆ. ಕಾಜೋಲ್ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದನ್ನು ನಿರಾಕರಿಸಿದ್ದಾರೆ. ಈಗ ಬಿಸಿಲಿನಲ್ಲಿ ಓಡಾಡುವುದನ್ನು ಕಡಿಮೆ ಮಾಡಿದ್ದೇನೆ ಎಂದು ಹೇಳಿ ಕಾಜೋಲ್ ನಕ್ಕಿದ್ದಾರೆ. ಸಿನಿ ಕೆರಿಯರ್ನ ಮೊದಲ 10 ವರ್ಷ ಬಿಸಿಲಿನಲ್ಲಿ ಹೆಚ್ಚು ಕೆಲಸ ಮಾಡಿದೆ. ಈ ಕಾರಣದಿಂದಲೇ ತ್ವಚೆ ಕಪ್ಪು ಬಣ್ಣಕ್ಕೆ ತಿರುಗಿತು. ಹಲವು ದಿನಗಳಿಂದ ನಾನು ಬಿಸಿಲಿನಲ್ಲಿ ಕೆಲಸ ಮಾಡಿಲ್ಲ. ಹೀಗಾಗಿ ಫೇರ್ ಆಗಿ ಕಾಣ್ತಿದ್ದೇನೆ ಎಂದು ಕಾಜೋಲ್ ಹೇಳಿದ್ದಾರೆ. ಫೋಟೋ ಕ್ರೆಡಿಟ್: @kajol/Instagram