ಪ್ರಾರಂಭದಲ್ಲಿ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತು ಶಾರುಖ್ ಖಾನ್ ಅನೇಕ ಸಿನಿಮಾಗಳಲ್ಲಿ ಜೋಡಿಯಾಗಿ ನಟಿಸಿದ್ದರು. ಅದರಲ್ಲಿ ಜನಪ್ರಿಯತೆ ಗಳಿಸಿದ ದೇವದಾಸ್, ಜೋಶ್ ಮತ್ತು ಮೊಹಬ್ಬತೀನ್ ಸಿನಿಮಾದಲ್ಲಿ ಈ ಜೋಡಿಗಳ ಕೆಮೆಸ್ಟ್ರಿ ಸಖತ್ತಾಗಿ ವರ್ಕ್ ಆಗಿತ್ತಲ್ಲದೆ. ಅಭಿಮಾನಿಗಳ ಮನಗೆದ್ದಿದ್ದರು. ಆದರೆ ಆ ಬಳಿಕ ಶಾರುಖ್ ಮತ್ತು ಐಶ್ವರ್ಯಾ ರೈ ಅವರು ಒಟ್ಟಾಗಿ ನಟಿಸಿದ್ದು ಕಡಿಮೆ. ಅದರಲ್ಲೂ ಶಾರುಖ್ ನಟನೆಯ ಕೆಲ ಸಿನಿಮಾಗಳಿಗೆ ನಾಯಕಿಯಾಗಿ ಆಯ್ಕೆಯಾದ ಐಶ್ವರ್ಯ ಅವರನ್ನು ಬದಲಾಯಿಸಿದ್ದರಂತೆ. ಈ ವಿಚಾರವಾಗಿ ಐಶ್ವರ್ಯಾ ಹೇಳಿಕೊಂಡಿದ್ದರು.