Dogs Death: ನಾಯಿಗಳ ಮಾರಣಹೋಮ: ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ ಐಂದ್ರಿತಾ ರೇ-ರಕ್ಷಿತ್ ಶೆಟ್ಟಿ

150ಕ್ಕೂ ಹೆಚ್ಚು ಬೀದಿ ನಾಯಿಗಳನ್ನು ಹಿಡಿದು ಜೀವಂತವಾಗಿ ಹೂತು ಹಾಕಿರುವ ಅಮಾನವೀಯ ಘಟನೆ ಭದ್ರಾವತಿಯ ತಮ್ಮಡಿ ಹಳ್ಳಿಯ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಪ್ರಾಣಿ ಪ್ರಿಯರು ಹಾಗೂ ಸೆಲೆಬ್ರಿಟಿಗಳು ಆಗ್ರಹಿಸುತ್ತಿದ್ದಾರೆ.

First published:

  • 16

    Dogs Death: ನಾಯಿಗಳ ಮಾರಣಹೋಮ: ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ ಐಂದ್ರಿತಾ ರೇ-ರಕ್ಷಿತ್ ಶೆಟ್ಟಿ

    ಐಂದ್ರಿತಾ ರೇ ಪ್ರಾಣಿ ಪ್ರಿಯೆ ಅನ್ನೋದು ಗೊತ್ತೇ ಇದೆ. ತಮ್ಮ ಮನೆಯಲ್ಲಿ ನಾಯಿಗಳನ್ನು ಸಾಕುವುದರ ಜೊತೆಗೆ ಹೊರಗೆ ನಾಯಿಗಳಿಗೆ ಆಹಾರ ನೀಡುವ ಕೆಲಸ ಮಾಡುತ್ತಿರುವ ಐಂದ್ರಿತಾ ರೇ ಎಲ್ಲೇ ಪ್ರಾಣಿ-ಪಕ್ಷಿಗಳಿಗೆ ಸಮಸ್ಯೆಯಾದರೂ ಅದನ್ನು ವಿರೋಧಿಸುತ್ತಾರೆ. ಈಗಲೂ ಸಹ ಈ ನಟಿ ಭದ್ರಾವತಿಯಲ್ಲಿ ನಡೆದಿರುವ ಅಮಾನವೀಯ ಘಟನೆಯ ವಿರುದ್ಧ ದನಿ ಎತ್ತಿದ್ದಾರೆ.

    MORE
    GALLERIES

  • 26

    Dogs Death: ನಾಯಿಗಳ ಮಾರಣಹೋಮ: ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ ಐಂದ್ರಿತಾ ರೇ-ರಕ್ಷಿತ್ ಶೆಟ್ಟಿ

    150ಕ್ಕೂ ಹೆಚ್ಚು ಬೀದಿ ನಾಯಿಗಳನ್ನು ಹಿಡಿದು ಜೀವಂತವಾಗಿ ಹೂತು ಹಾಕಿರುವ ಅಮಾನವೀಯ ಘಟನೆ ಭದ್ರಾವತಿಯ ತಮ್ಮಡಿ ಹಳ್ಳಿಯ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕೆಂದು ನಟ ರಕ್ಷಿತ್ ಶೆಟ್ಟಿ ಸಹ ಆಗ್ರಹಿಸಿದ್ದಾರೆ.

    MORE
    GALLERIES

  • 36

    Dogs Death: ನಾಯಿಗಳ ಮಾರಣಹೋಮ: ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ ಐಂದ್ರಿತಾ ರೇ-ರಕ್ಷಿತ್ ಶೆಟ್ಟಿ

    ನಾಯಿಗಳನ್ನು ಜೀವಂತವಾಗಿ ಹೂತು ಹಾಕಿರುವ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಸಾಕಷ್ಟು ಮಂದಿ ಆರೋಪಿಗಳನ್ನು ಬಂಧಿಸಿ, ಶಿಕ್ಷಿಸುವಂತೆ ಆಗ್ರಹಿಸುತ್ತಿದ್ದಾರೆ. ಅಂತೆಯೇ ಐಂದ್ರಿತಾ ರೇ ಸಹ ಟ್ವೀಟ್​ ಮಾಡುವ ಮೂಲಕ ಆರೋಪಿಗಳನ್ನು ಶಿಕ್ಷಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 46

    Dogs Death: ನಾಯಿಗಳ ಮಾರಣಹೋಮ: ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ ಐಂದ್ರಿತಾ ರೇ-ರಕ್ಷಿತ್ ಶೆಟ್ಟಿ

    ಐಂದ್ರಿತಾ ರೇ ಟ್ವೀಟ್​ ಮಾಡಿದ್ದು, ಅದರಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುವಂಯೆ ಒಂದು ಅರ್ಜಿಯನ್ನು ಸಹಿ ಮಾಡುವಂತೆಯೂ ಮನವಿ ಮಾಡಿದ್ದಾರೆ. ಜೊತೆಗೆ ನಟರಾದ ರಕ್ಷಿತ್​ ಶೆಟ್ಟಿ, ಜಗ್ಗೇಶ್​, ದಿಗಂತ್​ ಸೇರಿದಂತೆ ಸಾಕಷ್ಟು ಮಂದಿಯನ್ನು ಟ್ಯಾಗ್​ ಮಾಡಿದ್ದಾರೆ.

    MORE
    GALLERIES

  • 56

    Dogs Death: ನಾಯಿಗಳ ಮಾರಣಹೋಮ: ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ ಐಂದ್ರಿತಾ ರೇ-ರಕ್ಷಿತ್ ಶೆಟ್ಟಿ

    ಐಂದ್ರಿತಾ ರೇ ಟ್ಯಾಗ್ ಮಾಡಿದ ನಂತರ ರಕ್ಷಿತ್ ಶೆಟ್ಟಿ ಸಹ ಮೂಕ ಪ್ರಾಣಿಗಳ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸುವಂತೆ ಟ್ವೀಟ್​ ಮಾಡುವ ಮೂಲಕ ಒತ್ತಾಯಿಸಿದ್ದಾರೆ. ಜೊತೆಗೆ ಇಂತಹ ಘಟನೆಗಳು ಮರುಳಿಸದಂತೆ ನೋಡಿಕೊಳ್ಳಬೇಕೆಂದೂ ಹೇಳಿದ್ದಾರೆ. 

    MORE
    GALLERIES

  • 66

    Dogs Death: ನಾಯಿಗಳ ಮಾರಣಹೋಮ: ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ ಐಂದ್ರಿತಾ ರೇ-ರಕ್ಷಿತ್ ಶೆಟ್ಟಿ

    ಐಂದ್ರಿತಾ ರೇ ಹಾಗೂ ದಿಗಂತ್​ ಇಬ್ಬರೂ ಪ್ರಾಣಿ ಪ್ರಿಯರು. ಈ ಜೋಡಿ ಈಗಾಗಲೇ ಒಂದು ಸ್ಥಳೀಯ ತಳಿಯ ನಾಯಿಯನ್ನು ದತ್ತು ಪಡೆದು ಸಾಕುತ್ತಿದ್ದಾರೆ. ಅಲ್ಲದೆ ಪ್ರಾಣಿ ಪಕ್ಷಿಗಳಿಗೆ ಆಹಾರ ಹಾಗೂ ನೀಡಿರುವ ಕೆಲಸ ಸಹ ಮಾಡುತ್ತಿದ್ದಾರೆ. ಇನ್ನು ರಕ್ಷಿಸಿದ ನಾಯಿಗಳ ದತ್ತು ಪಡೆಯುವಂತೆ ಆಗಾಗ ಪೋಸ್ಟ್​ಗಳನ್ನೂ ಮಾಡುತ್ತಿರುತ್ತಾರೆ.

    MORE
    GALLERIES