Divya Uruduga-Aravind KP: ಬಿಗ್ಬಾಸ್ ಜೋಡಿ ದಿವ್ಯಾ ಉರುಡುಗ-ಅರವಿಂದ್ ಏಜ್ ಗ್ಯಾಪ್ ಇಷ್ಟಿದೆ
ಬಿಗ್ಬಾಸ್ ಮನೆಯಲ್ಲಿ ಪ್ರೀತಿಯಲ್ಲಿ ಬಿದ್ದ ದಿವ್ಯಾ ಹಾಗೂ ಅರವಿಂದ್ ಅವರ ವಯಸ್ಸಿನ ಅಂತರ ಎಷ್ಟು ಗೊತ್ತಾ? ಅರವಿಂದ್ಗಿಂತ ದೊಡ್ಡೋರಾ ದಿವ್ಯಾ?
1/ 10
ಬಿಗ್ಬಾಸ್ ಕನ್ನಡ ಸೀಸನ್ 8ರಲ್ಲಿ ಅತ್ಯಂತ ಪ್ರೀತಿಗೆ ಪಾತ್ರರಾದ ಜೋಡಿಯಲ್ಲಿ ಅರವಿಂದ್ ಕೆಪಿ ಹಾಗೂ ದಿವ್ಯಾ ಉರುಡುಗ ಅವರು ಟಾಪ್ನಲ್ಲಿದ್ದಾರೆ.
2/ 10
ಮನೋರಂಜನಾ ಹಿನ್ನೆಲೆಯಿಂದ ಬಂದಂತಹ ದಿವ್ಯಾ ಉರುಡುಗ ಅವರು ಹಾಗೂ ರೇಸಿಂಗ್ ಸ್ಟಾರ್ ಅರವಿಂದ್ ಕೆಪಿ ಮಧ್ಯೆ ಸೀಸನ್ ಆರಂಭದಿಂದಲೂ ಚಂದದ್ದೊಂದು ಕೆಮೆಸ್ಟ್ರಿ ಶುರುವಾಗಿತ್ತು.
3/ 10
ಈ ಜೋಡಿಯ ಬಾಂಡಿಂಗ್ ಈಗಲೂ ತುಂಬಾ ಚೆನ್ನಾಗಿದೆ. ಎಲ್ಲರ ಮೆಚ್ಚುಗೆ ಗಳಿಸಿದ ಈ ಜೋಡಿ ಬಿಗ್ಬಾಸ್ ಮನೆಯಿಂದ ಹೊರಬಂದ ಮೇಲೂ ತಮ್ಮ ರಿಲೇಷನ್ಶಿಪ್ ಹಸಿರಾಗಿಟ್ಟುಕೊಂಡಿದ್ದಾರೆ.
4/ 10
ಎಲ್ಲರನ್ನೂ ಮೆಚ್ಚಿಸಿದ ಈ ಜೋಡಿಯ ವಯಸ್ಸಿನ ಅಂತರ ನಿಮಗೆ ಗೊತ್ತೇ? ದಿವ್ಯಾ ಉರುಡುಗ ಅವರಿಗಿಂತ ಅರವಿಂದ್ ಎಷ್ಟು ವರ್ಷ ದೊಡ್ಡವರು?
5/ 10
ನಟಿ ದಿವ್ಯಾ ಉರುಡುಗ ಅವರು ಜನವರಿ 16 1990ರಲ್ಲಿ ಹುಟ್ಟಿದ್ದು ಅವರ ವಯಸ್ಸು 32 ವರ್ಷ. ಅರವಿಂದ್ ಕೆಪಿ ಡಿಸೆಂಬರ್ 8 1985ರಲ್ಲಿ ಹುಟ್ಟಿದ್ದು ಅವರ ವಯಸ್ಸು ಈಗ 37 ವರ್ಷ.
6/ 10
ಈ ಜೋಡಿಯ ಮಧ್ಯೆ 5 ವರ್ಷ ವಯಸ್ಸಿನ ಅಂತರವಿದೆ. ಆದರೆ ಇವರ ನಡುವಿನ ಕೆಮೆಸ್ಟ್ರಿ ಮಾತ್ರ ಹದಿ ಹರೆಯದ ಚಾಕೊಲೇಟ್ ಲವರ್ಸ್ಗಿಂತ ಕಮ್ಮಿ ಇಲ್ಲ.
7/ 10
ಈ ಜೋಡಿ ಈ ವರ್ಷ ಮದುವೆ ಸುದ್ದಿ ಕೊಡಬಹುದಾ? ಹೀಗೊಂದು ನಿರೀಕ್ಷೆಯಲ್ಲಿದ್ದಾರೆ ಅಭಿಮಾನಿಗಳು. ಆದರೆ ಇನ್ನೂ ಮದುವೆಯ ಬಗ್ಗೆ ಈ ಜೋಡಿ ಮಾತನಾಡಿಲ್ಲ.
8/ 10
ಅರವಿಂದ್ ಕೆಪಿ ಬೈಕ್ ರೇಸರ್ ಆಗಿದ್ದು ಬಿಗ್ಬಾಸ್ ಮನೆಯೊಳಗೆ ಸಂಪೂರ್ಣ ಭಿನ್ನ ವ್ಯಕ್ತಿಯಾಗಿದ್ದರು. ಅವರಿಗೆ ಮನರಂಜನೆ ಲೋಕದ ಸಂಪರ್ಕವೇ ಇರಲಿಲ್ಲ.
9/ 10
ಈ ಜೋಡಿ ಮೊದಲು ಭೇಟಿ ಮಾಡಿದ್ದು ಬಿಗ್ಬಾಸ್ ಮನೆಯಲ್ಲಿ. ನಂತರ ದಿವ್ಯಾ ಅವರು ಅರವಿಂದ್ ಜೊತೆ ಬಹಳಷ್ಟು ರೇಸ್ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು.
10/ 10
ಈ ನಡುವೆ ದಿವ್ಯಾ ಅವರ ಮಾಜಿ ಗೆಳೆಯ ಕೂಡಾ ಸ್ವಲ್ಪ ಸುದ್ದಿ ಮಾಡಿದ್ದರು. ಆದರೆ ನಂತರ ಆ ವಿಚಾರ ತಣ್ಣಗಾಯಿತು. ಈಗ ಈ ಜೋಡಿ ಮದುವೆ ಆಗೋದೊಂದೇ ಬಾಕಿ.
First published: