Vikrant Rona ನಂತರ ದಕ್ಷಿಣ ಭಾರತದ ಸಿನಿಮಾಗಳತ್ತ ಮುಖ ಮಾಡಿದ ನಟಿ Jacqueline Fernandez
ಶ್ರೀಲಂಕಾದ ಸುಂದರಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಕನ್ನಡದ ವಿಕ್ರಾಂತ್ ರೋಣ (Vikrant Rona) ಸಿನಿಮಾದಲ್ಲಿ ನಟಿಸಿರುವ ವಿಷಯ ಗೊತ್ತೇ ಇದೆ. ಇದಾದ ನಂತರ ಜಾಕ್ವೆಲಿನ್ ಈಗ ದಕ್ಷಿಣ ಭಾರತದ ಸಿನಿಮಾಗಳತ್ತ ಗಮನ ಹರಿಸಿದ್ದಾರೆ. ಈಗಾಗಲೇ ಎರಡು ಸಿನಿಮಾಗಳಿಗೆ ಓಕೆ ಮಾಡಿದ್ದಾರಂತೆ. (ಚಿತ್ರಗಳು ಕೃಪೆ: ಜಾಕ್ವೆಲಿನ್ ಫರ್ನಾಂಡಿಸ್ ಇನ್ಸ್ಟಾಗ್ರಾಂ ಖಾತೆ)
ದಕ್ಷಿಣ ಭಾರತದ ಸಿನಿಮಾಗಳತ್ತ ಬಾಲಿವುಡ್ ಬ್ಯೂಟೀಸ್ ಮುಖ ಮಾಡುವುದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಸಾಕಷ್ಟು ಮಂದಿ, ಹಿಂದಿ ಸಿನಿಮಾಗಳಿಗಿಂತ ದಕ್ಷಿಣ ಭಾರತದ ಚಿತ್ರಗಳಲ್ಲೇ ಹೆಸರು ಮಾಡಿದ್ದಾರೆ. ಈಗ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸಹ ಇದೇ ಹಾದಿ ಹಿಡಿದಿದ್ದಾರೆ.
2/ 6
ಕೆಲ ಸಮಯ ಹಿಂದೆ ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣ ಸಿನಿಮಾದ ಹಾಡೊಂದಕ್ಕೆ ಹೆಜ್ಜೆ ಹಾಕಲು ಬಂದಿದ್ದ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು, ಆ ಸಿನಿಮಾದಲ್ಲಿ ಪಾತ್ರವೊಂದರಲ್ಲಿ ನಟಿಸಿ ಹೋದರು.
3/ 6
ಜಾಕ್ವೆಲಿನ ಫರ್ನಾಂಡಿಸ್ ಅವರ ಪಾತ್ರದ ಫಸ್ಟ್ಲುಕ್ ಪೋಸ್ಟರ್ ಸಹ ಈಗಾಗಲೇ ರಿಲೀಸ್ ಆಗಲಿದೆ. ಹೀಗಿರುವಾಗಲೇ ಜಾಕ್ವೆಲಿನ್ ಈಗ ಎರಡು ದಕ್ಷಿಣ ಭಾರತದ ಚಿತ್ರಗಳಲ್ಲಿ ನಟಿಸೋಕೆ ಒಪ್ಪಿಗೆ ನೀಡಿದ್ದಾರಂತೆ.
4/ 6
ಪವನ್ ಕಲ್ಯಾಣ್ ಜತೆಗೆ ಹರಿಹರ ವೀರ ಮಲ್ಲು ಸಿನಿಮಾದಲ್ಲಿ ಜಾಕ್ವೆಲಿನ್ ನಟಿಸುತ್ತಿದ್ದಾರಂತೆ. ಈ ವಿಷಯ ಈಗ ಅಧಿಕೃತವಾಗಿದೆ. ಇದರ ಜೊತೆಗೆ ಮತ್ತೊಂದು ತೆಲುಗು ಚಿತ್ರದಲ್ಲಿ ಈ ಶ್ರೀಲಂಕನ್ ಸುಂದರಿ ನಟಿಸೋಕೆ ಸಜ್ಜಾಗುತ್ತಿದ್ದಾರೆ.
5/ 6
ಅಕ್ಕಿನೇನಿ ನಾಗಾರ್ಜುನ ಅವರ ಅಭಿನಯದ ಹೊಸ ಸಿನಿಮಾದಲ್ಲಿ ಜಾಕಿ ನಾಯಕಿಯಾಗಲಿದ್ದಾರಂತೆ. ದ ಘೋಸ್ಟ್ ಸಿನಿಮಾದಲ್ಲಿ ಈ ಹಿಂದೆ ಕಾಜಲ್ ಅಗರ್ವಾಲ್ ನಾಯಕಿ ಎನ್ನಲಾಗಿತ್ತು. ಆದರೆ, ಈಗ ಕಾಜಲ್ ಜಾಗಕ್ಕೆ ಜಾಕ್ವೆಲಿನ್ ಫರ್ನಾಂಡಿಸ್ ಬಂದಿದ್ದಾರಂತೆ.
6/ 6
ದ ಘೋಸ್ಟ್ ಸಿನಿಮಾದಲ್ಲಿ ಆಗಿರುವ ಈ ಬದಲಾವಣೆಗೆ ಕಾರಣ ಕಾಜಲ್ ಅಗರ್ವಾಲ್ ಗರ್ಭಿಣಿ ಅನ್ನೋ ವಿಷಯವಂತೆ. ಕಾರಣ ಏನೇ ಆಗಲಿ ಜಾಕ್ವೆಲಿನ್ ಮಾತ್ರ ದಕ್ಷಿಣ ಭಾರತದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿರೋದಂತೂ ಸತ್ಯ.