Sugar Factory: ಮುಹೂರ್ತ ನೆರವೇರಿಸಿ ಚಿತ್ರೀಕರಣ ಆರಂಭಿಸಿದ ಶುಗರ್ ಫ್ಯಾಕ್ಟರಿ ಚಿತ್ರತಂಡ..!
ಅಮೂಲ್ಯ ಅವರ ಸೋದರ ದೀಪಕ್ ಅರಸ್ ನಿರ್ದೇಶಿಸುತ್ತಿರುವ ಶುಗರ್ ಫ್ಯಾಕ್ಟರಿ ಚಿತ್ರದ ಮುಹೂರ್ತ ನಂದಿನಿ ಬಡಾವಣೆಯಲ್ಲಿರುವ ಪಂಚಮುಖಿ ದೇವಾಲಯದಲ್ಲಿ ಇಂದು ಬೆಳಿಗ್ಗೆ ನೆರವೇರಿದೆ. ಲವ್ ಮಾಕ್ಟೇಲ್ ಖ್ಯಾತಿಯ ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸುತ್ತಿರುವ ಈ ಸಿನಿಮಾದಲ್ಲಿ ಮೂರು ಮಂದಿ ನಾಯಕಿಯರಿದ್ದಾರೆ. (ಚಿತ್ರಗಳು ಕೃಪೆ: ಅದ್ವಿತಿ ಶೆಟ್ಟಿ ಇನ್ಸ್ಟಾಗ್ರಾಂ ಖಾತೆ)
ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸುತ್ತಿರುವ ಹೊಸ ಸಿನಿಮಾ ಶುಗರ್ ಫ್ಯಾಕ್ಟರಿ. ಈ ಚಿತ್ರದ ಮುಹೂರ್ತ ಇಂದು ನೆರೆವೇರಿದೆ.
2/ 7
ನಂದಿನಿ ಬಡಾವಣೆಯಲ್ಲಿರುವ ಪಂಚಮುಖಿ ದೇವಾಲಯದಲ್ಲಿ ಇಂದು ಬೆಳಿಗ್ಗೆ ಮುಹೂರ್ತ ಕಾರ್ಯಕ್ರಮ ನಡೆಯಿತು.
3/ 7
ರಾಬರ್ಟ್ ಸಿನಿಮಾದ ನಿರ್ದೇಶಕ ತರುಣ್ ಸುಧೀರ್ ಕ್ಲ್ಯಾಪ್ ಮಾಡುವ ಮೂಲಕ ಶೂಟಿಂಗ್ಗೆ ಚಾಲನೆ ನೀಡಿದರು.
4/ 7
ಈ ಚಿತ್ರದಲ್ಲಿ ಮೂವರು ನಾಯಕಿಯರು ಅಭಿನಯಿಸುತ್ತಿದ್ದು, ಬೆಡಗಿ ಸೊನಾಲ್ ಮಾಂಟೆರೊ ಹಾಗೂ ಚೆಲುವೆ ಅದ್ವಿತಿ ಶೆಟ್ಟಿ ಹಾಗೂ ಶಿಲ್ಪಾ ಶೆಟ್ಟಿ ನಾಯಕಿಯರಾಗಿ ಆಯ್ಕೆಯಾಗಿದ್ದಾರೆ.
5/ 7
ಬಾಲಮಣಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಗಿರೀಶ್. ಆರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಏಳು ಹಾಡುಗಳಿದ್ದು, ಚೇತನ್ ಕುಮಾರ್ ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ ಮುಂತಾದವರು ಸಾಹಿತ್ಯ ಬರೆಯುತ್ತಿದ್ದಾರೆ.
6/ 7
ಕಬೀರ್ ರಫಿ ಸಂಗೀತ ನೀಡುತ್ತಿರುವ ಶುಗರ್ ಫ್ಯಾಕ್ಟರಿಯನ್ನು ಸಂತೋಷ್ ರೈ ಪಾತಾಜೆ ತಮ್ಮ ಛಾಯಾಗ್ರಹಣದ ಮೂಲಕ ಸೆರೆ ಹಿಡಿಯಲಿದ್ದಾರೆ.
7/ 7
ಅಮೂಲ್ಯ ಅವರ ಸೋದರ ದೀಪಕ್ ಅರಸ್ ಶುಗರ್ ಫ್ಯಾಕ್ಟರ್ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.