Sonam Kapoor: ಲಂಡನ್ನಲ್ಲಿ ಕ್ವಾರಂಟೈನ್ ಮುಗಿಸಿ ಹೊರ ಬಂದ ಖುಷಿಯಲ್ಲಿ ಸೋನಮ್ ಕಪೂರ್..!
ಕೊರೋನಾ ಭೀತಿಯ ನಡುವೆಯೇ ಇತ್ತೀಚೆಗಷ್ಟೆ ಸೋನಮ್ ಕಪೂರ್ ತನ್ನ ಗಂಡ ಆನಂದ್ ಜೊತೆ ಲಂಡನ್ಗೆ ಹಾರಿದ್ದರು. ಆ ಖುಷಿಯನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಅಲ್ಲದೆ ಕ್ವಾರಂಟೈನ್ ಮುಗಿಯುವ ಮುನ್ನವೇ ಪಾರ್ಕ್ಗೆ ಬಂದು ವ್ಯಾಯಾಮಾ ಮಾಡುವ ವಿಡಿಯೋ ಹಂಚಿಕೊಂಡಿದ್ದ ಈ ನಟಿ ಟ್ರೋಲ್ ಆಗಿದ್ದರು. (ಚಿತ್ರಗಳು ಕೃಪೆ: ಸೋನಮ್ ಕಪೂರ್ ಹಾಗೂ ಆನಂದ್ ಆಹುಜಾ ಇನ್ಸ್ಟಾಗ್ರಾಂ ಖಾತೆ)
ಎಲ್ಲರೂ ಕೊರೋನಾ ಭೀತಿಯಿಂದಾಗಿ ತಮ್ಮ ತಾಯ್ನಾಡಿಗೆ ಹಿಂತಿರುಗುತ್ತಿದ್ದರೆ, ಕೆಲ ಸೆಲೆಬ್ರಿಟಿಗಳು ಮಾತ್ರ ವಿದೇಶಕ್ಕೆ ಹಾರಿದ್ದಾರೆ. ಕೆ.ಜಿ.ಎಫ್. ಬೆಡಗಿ ಮೌನಿ ರಾಯ್ ಹಾಗೂ ಸೋನಮ್ ಕಪೂರ್ ಸದ್ಯ ವಿದೇಶದಲ್ಲಿದ್ದಾರೆ.