ನಿರ್ದೇಶಕನಾಗಿ ತನ್ನ ಮೊದಲ ಡಿಬಟ್ ಸಿನಿಮಾ ಘೋಷಿಸಿದ ಶಾರುಖ್ ಖಾನ್ ಮಗ ಆರ್ಯನ್ ಖಾನ್ ಈಗ ಮತ್ತೊಂದು ಬಿಗ್ ಅನೌನ್ಸ್ಮೆಂಟ್ ಮಾಡಿದ್ದಾರೆ. ಆರ್ಯನ್ ಖಾನ್ ಈಗ ಬ್ಯುಸಿನೆಸ್ ಜಗತ್ತಿಗೂ ಕಾಲಿಡುತ್ತಿದ್ದಾರೆ.
2/ 7
ಶಾರುಖ್ ಖಾನ್ ಹಾಗೂ ಗೌರಿ ಖಾನ್ ಅವರ 25 ವರ್ಷದ ಪುತ್ರ ತನ್ನ ಪಾರ್ಟ್ನರ್ಸ್ ಜೊತೆ ಭಾರತದಲ್ಲಿ ಪ್ರೀಮಿಯಂ ವೋಡ್ಕಾ ಬ್ರ್ಯಾಂಡ್ ಲಾಂಚ್ ಮಾಡುವ ಸಿದ್ಧತೆಯಲ್ಲಿದ್ದಾರೆ. ಇದಕ್ಕಾಗಿ ಆರ್ಯನ್ ಹಾಗೂ ಅವರ ಪಾಲುದಾರರು ಜಗತ್ತಿನ ಅತ್ಯಂತ ದೊಡ್ಡ ಮದ್ಯದ ಕಂಪೆನಿ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ.
3/ 7
ಇತ್ತೀಚೆಗಷ್ಟೇ ಆರ್ಯನ್ ಖಾನ್ ಇನ್ಸ್ಟಾಗ್ರಾಮ್ನಲ್ಲಿ ನಿರ್ದೇಶಕನಾಗಿ ಡಿಬಟ್ ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ಎಲ್ಲರೂ ಆರ್ಯನ್ಗೆ ಶುಭಾಶಯ ತಿಳಿಸಿದ್ದರು. ನನಗೆ ತಂದೆಯಂತೆ ನಟನೆಯಲ್ಲಿ ಆಸಕ್ತಿ ಇಲ್ಲ ಎಂದು ಆರ್ಯನ್ ಈ ಹಿಂದೆಯೇ ಹೇಳಿದ್ದರು. ಈಗ ಆರ್ಯನ್ ನಿರ್ದೇಶಕನದ ಜೊತೆ ಹಲವು ಕ್ಷೇತ್ರದಲ್ಲಿ ತೊಡಗಿಸಿಕೊಳ್ಳೋ ಸಿದ್ಧತೆಯಲ್ಲಿದ್ದಾರೆ.
4/ 7
ಮಿಂಟ್ ವರದಿಯ ಪ್ರಕಾರ ಆರ್ಯನ್ ಅವರು ಬಂಟಿ ಸಿಂಗ್ ಹಾಗೂ ಲೇಟಿ ಬ್ಲಗೋವಾ ಜೊತೆ ಪ್ರೀಮಿಯಂ ವೋಡ್ಕಾ ಬ್ರ್ಯಾಂಡ್ ಲಾಂಚ್ ಮಾಡಲಿದ್ದು ನಂತರ ಬ್ರೌನ್ ಸ್ಪಿರಿಟ್ ಉದ್ಯಮದಲ್ಲಿಯೂ ತೊಡಗಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
5/ 7
ಇದಕ್ಕಾಗಿ ಸ್ಲ್ಯಾಬ್ ವೆಂಚರ್ಸ್ ಎಂಬ ಕಂಪೆನಿ ಆರಂಭಿಸಿದ್ದು ಜಗತ್ತಿನ ಅತ್ಯಂತ ದೊಡ್ಡ ಮದ್ಯದ ಕಂಪೆನಿ ಎಬಿ ಇನ್ಬ್ಯೂ ಜೊತೆ ಒಪ್ಪಂದ ಮಾಡಿದ್ದಾರೆ.
6/ 7
ವರದಿಯ ಪ್ರಕಾರ, ಸ್ಲ್ಯಾಬ್ ವೆಂಚರ್ಸ್ ದೇಶದ ಹೆಚ್ಚು ಶ್ರೀಮಂತ ಗ್ರಾಹಕರನ್ನು ಗುರಿಯಾಗಿಸಿಕೊಂಡಿದೆ. ಆಲ್ಕೊಹಾಲ್ಯುಕ್ತ ಮತ್ತು ಆಲ್ಕೊಹಾಲ್ಯುಕ್ತವಲ್ಲದ ಪಾನೀಯಗಳು, ಉಡುಪುಗಳು ಮತ್ತು ಪರಿಕರಗಳು ಸೇರಿದಂತೆ ಇತರ ಪ್ರೀಮಿಯಂ ಗ್ರಾಹಕ ವಿಭಾಗಗಳೊಂದಿಗೆ ಮತ್ತಷ್ಟು ವೈವಿಧ್ಯಗಳನ್ನು ಮಾರಾಟ ಮಾಡಲು ಯೋಜಿಸಿದೆ.
7/ 7
ಆರ್ಯನ್ ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರ ಹಿರಿಯ ಮಗ. ಅವರ ಸಹೋದರಿ ಸುಹಾನಾ ಖಾನ್, ಜೋಯಾ ಅಖ್ತರ್ ಅವರ ದಿ ಆರ್ಚೀಸ್ನೊಂದಿಗೆ ಬಾಲಿವುಡ್ಗೆ ಡಿಬಟ್ಗೆ ಸಜ್ಜಾಗುತ್ತಿದ್ದಾರೆ.