Kichcha Sudeep: ವಿಕ್ರಾಂತ್ ರೋಣ ಡಬ್ಬಿಂಗ್ ಮುಗಿಸಿ ಹೊಸ ಅಪ್ಡೇಟ್ ಕೊಟ್ಟ ಕಿಚ್ಚ ಸುದೀಪ್..! Vikrant Rona: ಕಿಚ್ಚ ಸುದೀಪ್ ಲಾಕ್ಡೌನ್ ಹಂತ ಹಂತವಾಗಿ ತೆರವುಗೊಳ್ಳುತ್ತಿದ್ದಂತೆಯೇ ತಮ್ಮ ಸಿನಿಮಾ ಕುರಿತಾದ ಸುದ್ದಿಗಳನ್ನು ಹಂಚಿಕೊಳ್ಳೋಕೆ ಪ್ರಾರಂಭಿಸಿದ್ದಾರೆ. ಇತ್ತೀಚೆಗಷ್ಟೆ ವಿಕ್ರಾಂತ್ ರೋಣ ಸಿನಿಮಾದ ಡಬ್ಬಿಂಗ್ ಮುಗಿಸಿರುವ ಸುದೀಪ್, ಈ ಚಿತ್ರದ ಬಗ್ಗೆ ಹೊಸ ಅಪ್ಡೇಟ್ ಕೊಟ್ಟಿದ್ದಾರೆ. (ಚಿತ್ರಗಳು ಕೃಪೆ: ಇನ್ಸ್ಟಾಗ್ರಾಂ)
1 / 10
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಕಿಚ್ಚ ಸುದೀಪ್ ತಮ್ಮ ಸಿನಿಮಾಗಳ ಬಗ್ಗೆ ಹೊಸ ಹೊಸ ಮಾಹಿತಿ ಹಂಚಿಕೊಳ್ಳೋಕೆ ಆರಂಭಿಸಿದ್ದಾರೆ.
2 / 10
ಸುದೀಪ್ ಅಭಿನಯದ ಸಾಲು ಸಾಲು ಸಿನಿಮಾಗಳು ತೆರೆ ಕಾಣಲು ತುದಿಗಾಲಿನಲ್ಲಿವೆ.
3 / 10
ಸುದೀಪ್ ಅಭಿನಯಿಸಿರುವ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಕೋಡಿಗೊಬ್ಬ 3 ಹಾಗೂ ವಿಕ್ರಾಂತ್ ರೋಣ ಮುಂದಿದೆ.
4 / 10
ಕಿಚ್ಚ ಸುದೀಪ್ ಇತ್ತೀಚೆಗಷ್ಟೆ ವಿಕ್ರಾಂತ್ ರೋಣ ಸಿನಿಮಾದ ಡಬ್ಬಿಂಗ್ ಆರಂಭಿಸಿರುವುದಾಗಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.
5 / 10
ಡಬ್ಬಿಂಗ್ನಲ್ಲಿ ಬಾಗಿಯಾಗಿದ್ದ ಫೋಟೋವನ್ನೂ ಸುದೀಪ್ ಹಾಗೂ ನಿರ್ದೇಶಕ ಅನೂಪ್ ಭಂಡಾರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.
6 / 10
ಈಗ ಇದೇ ಸುದೀಪ್ ಅವರು ಡಬ್ಬಿಂಗ್ ಮುಗಿಸಿದ್ದು, ಸಿನಿಮಾ ಕುರಿತಾದ ಹೊಸ ಅಪ್ಡೇಟ್ ಒಂದನ್ನೂ ಕೊಟ್ಟಿದ್ದಾರೆ.
7 / 10
ವಿಕ್ರಾಂತ್ ರೋಣ ಸಿನಿಮಾದ ಡಬ್ಬಿಂಗ್ ಮುಗಿಸಿದ್ದು, ಹಾಡಿನ ಚಿತ್ರೀಕರಣಕ್ಕಾಗಿ ಎದುರು ನೋಡುತ್ತಿರುವುದಾಗಿ ಸುದೀಪ್ ಖುಷಿಯಿಂದ ಟ್ವೀಟ್ ಮಾಡಿದ್ದಾರೆ.
8 / 10
ವಿಕ್ರಾಂತ್ ರೋಣ ಸಿನಿಮಾದ ಹಾಡಿನ ಚಿತ್ರೀಕರಣ ಬಾಕಿ ಉಳಿದಿದ್ದು, ಅದು ಸದ್ಯದಲ್ಲೇ ಆರಂಭವಾಗಲಿದೆ ಅನ್ನೋ ಸುಳಿವನ್ನು ನೀಡಿದ್ದಾರೆ ಸುದೀಪ್.
9 / 10
ವಿಕ್ರಾಂತ್ ರೋಣನ ಪ್ರಪಂಚ ನೋಡಲು ತುಂಬಾ ಥ್ರಿಲ್ ಆಗಿದೆ. 3ಡಿ ವರ್ಷನ್ನಲ್ಲಿ ಕೆಲವು ದೃಶ್ಯಗಳನ್ನು ವೀಕ್ಷಿಸಿದ್ದು, ಅವು ಸಖತ್ತಾಗಿವೆ ಎಂದಿದ್ದಾರೆ ಸುದೀಪ್.
10 / 10
ಸಿನಿಮಾದ ಬಗ್ಗೆ ಕಿಚ್ಚ ಸುದೀಪ್ ಅವರು ಕೊಟ್ಟ ಅಪ್ಡೇಟ್ ನೋಡಿದ ಮೇಲೆ ಅಭಿಮಾನಿಗಳು ವಿಕ್ರಾಂತ್ ರೋಣನ ಆಗಮನಕ್ಕಾಗಿ ಮತ್ತಷ್ಟು ಕಾತರರಾಗಿದ್ದಾರೆ.
First published: July 01, 2021, 16:16 IST