ವಿಚ್ಛೇದನದ ನಂತರ ಫೋಟೋಶೂಟ್ಗೆ ಪೋಸ್ ಕೊಟ್ಟ Samantha: ಇದರಲ್ಲಿ ಮಿಸ್ ಆಗಿದ್ದೇನು ಗಮನಿಸಿ..?
ನಟಿ ಸಮಂತಾ ಅವರು ತಮ್ಮ ವೈವಾಹಿಕ ಜೀವನದಲ್ಲಿ ಎದ್ದಿರುವ ಬಿರುಗಾಳಿಯ ಕುರಿತಾಗಿ ಬಹಿರಂಗವಾಗಿ ಹೇಳಿಕೆ ನೀಡಿದಾಗಿನಿಂದ ತುಂಬಾ ನೋವಿನಲ್ಲಿದ್ದಾರೆ. ಅವರ ನೋವು ಫೋಟೋಶೂಟ್ಗಳಲ್ಲಿನ ಫೋಟೋಗಳಲ್ಲೂ ಕಾಣಿಸುತ್ತಿದೆ. ಇಲ್ಲಿವೆ ನಟಿಯ ಲೆಟೆಸ್ಟ್ ಫೋಟೋಶೂಟ್ನ ಚಿತ್ರಗಳು. (ಚಿತ್ರಗಳು ಕೃಪೆ: ಸಮಂತಾ ಇನ್ಸ್ಟಾಗ್ರಾಂ ಖಾತೆ)
ಸಮಂತಾ ಅವರು ತಮ್ಮ ವಿಚ್ಛೇದನದ ವಿಷಯದ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ನಂತರ ಇದೇ ಮೊದಲು ಫೋಟೋಶೂಟ್ ಒಂದಕ್ಕೆ ಪೋಸ್ ಕೊಟ್ಟಿದ್ದಾರೆ. ಅವರ ಈ ಲೆಟೆಸ್ಟ್ ಫೋಟೋಶೂಟ್ನ ಚಿತ್ರಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
2/ 6
ಫೋಟೋಶೂಟ್ಗಳಲ್ಲಿ ಸದಾ ನಗು ಮುಖದಿಂದ ಪೋಸ್ ಕೊಡುತ್ತಿದ್ದ ಸಮಂತಾ ಅವರು, ಈ ಸಲ ತುಂಬಾ ಬೇರಸದಲ್ಲಿರುವಂತೆ ಕಾಣುತ್ತಿದೆ. ಅವರ ಮುಖದಲ್ಲಿ ಸಂತೋಷಕ್ಕಿಂತ ನೋವು ಕಾಣಿಸುತ್ತಿದೆ.
3/ 6
ನಟಿಯ ಮುಖದಲ್ಲಿರುತ್ತಿದ್ದ ನಗು ಈಗ ಮಾಯವಾಗಿದೆ. ಅಲ್ಲದೆ ಇತ್ತೀಚೆಗೆ ಹೈದರಾಬಾದಿನ ಕಾಲೇಜೊಂದರಲ್ಲಿ ನಡೆಯುತ್ತಿದ್ದ ಜಾಹೀರಾತಿನ ಚಿತ್ರೀಕರಣದಲ್ಲಿ ಸಮಂತಾ ಇದ್ದಕ್ಕಿದ್ದಂತೆ ಕಣ್ಣೀರಿಟ್ಟಿದ್ದಾರೆ.
4/ 6
ಈ ವಿಷಯವನ್ನು ಅವರ ಜತೆ ಶೂಟಿಂಗ್ ಸೆಟ್ನಲ್ಲಿದ್ದವರೇ ಬಹಿರಂಗಪಡಿಸಿದ್ದರು. ಅಲ್ಲದೆ ಸಮಂತಾ ಅವರನ್ನು ಪತಿಯಿಂದ ದೂರಾಗಿರುವ ನೋವು ಕಾಡುತ್ತಿದೆ. ವಿಚ್ಛೇದನ ಅನ್ನೋದು ಒಂದು ನೋವಿನಿಂದ ಕೂಡಿದ ಪ್ರಕ್ರಿಯೆ ಅಂತ ಸಮಂತಾ ಹೇಳಿಕೊಂಡಿದ್ದಾರೆ.
5/ 6
ಸಮಂತಾ ಅವರಿಗೆ ಅಫೇರ್ಸ್ ಇವೆ, ಅವರಿಗೆ ಮಕ್ಕಳು ಮಾಡಿಕೊಳ್ಳುವ ಮನಸ್ಸಿರಲಿಲ್ಲ, ಅಲ್ಲದೆ ಅಬಾರ್ಷನ್ ಮಾಡಿಸಿಕೊಂಡಿದ್ದಾರೆ ಅನ್ನೋ ವದಂತಿಗಳೂ ಸದ್ಯ ಹರಿದಾಡುತ್ತಿವೆ. ಇದರಿಂದಲೂ ಸಮಂತಾ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ.
6/ 6
ಇನ್ನು ತಮ್ಮ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿರುವವರ ವಿರುದ್ಧ ಸಮಂತಾ ಅವರು ಎಚ್ಚರಿಕೆ ಸಹ ಕೊಟ್ಟಿದ್ದಾರೆ. ಹುರಳಿಲ್ಲದ ವದಂತಿಗಳನ್ನು ಹಬ್ಬಿಸಿ, ನನ್ನನ್ನು ನೀವು ಒಳಗಿನಿಂದ ಮುರಿಯುವ ಪ್ರಯತ್ನ ಮಾಡಬಹುದು. ಆದರೆ ಅದು ನಿಮ್ಮಿಂದ ಸಾಧ್ಯವಿಲ್ಲ ಎಂದಿದ್ದಾರೆ.