ನಮ್ಮೂರ ಮಂದಾರ ಹೂವೆ ಖ್ಯಾತಿಯ ನಟಿ ಪ್ರೇಮಾ ಕನ್ನಡ ಸೇರಿದಂತೆ ತೆಲುಗಿನಲ್ಲೂ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಟಾಲಿವುಡ್ನಲ್ಲೂ ಸ್ಟಾರ್ ನಟಿಯಾಗಿ ಮಿಂಚಿದ್ದ ಪ್ರೇಮಾ ಸಾಕಷ್ಟು ಕಮರ್ಷಿಯಲ್ ಹಾಗೂ ವಿಭಿನ್ನ ಜಾನರ್ನ ಚಿತ್ರಗಳ ಮೂಲಕ ರಂಜಿಸಿದ್ದಾರೆ. ನಂತರದಲ್ಲಿ ತೆಲುಗಿನ ಜತೆಗೆ ಮಲಯಾಳಂನಲ್ಲೂ ಅಭಿನಯಿಸಿದರು. ವಿಷ್ಣುವರ್ಧನ್ ಅವರ ಜತೆ ಯಜಮಾನ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.