Jennifer lopez: ನಟಿ ಜೆನಿಫರ್ 1997ರಲ್ಲಿ ಓಜಾನಿ ನೋವಾ ಜೊತೆಗೆ ಮೊದಲ ವಿವಾಹ ನಡೆದಿತ್ತು. ಒಂದು ವರ್ಷವು ದಾಂಪತ್ಯ ಜೀವನ ಸರಿಯಾಗಿ ನಡೆಸಿಕೊಂಡು ಹೋಗಲು ಸಾಧ್ಯವಾಗಿರಲಿಲ್ಲ. ಹಾಗಾಗಿ ವಿಚ್ಛೇದನ ನೀಡಿದರು.
ಹಾಲಿವುಡ್ ನಟಿ ಜೆನಿಫರ್ ಲೊಪೆಜ್ ಯಾರಿಗೆ ಗೊತ್ತಿಲ್ಲ ಹೇಳಿ. 50 ವರ್ಷ ತುಂಬಿದರೂ ಸುಂದರವಾಗಿ ಕಾಣುವ ಈಕೆ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಸದಾ ಒಂದಿಲ್ಲೊಂದು ಸಿನಿಮಾದ ಮೂಲಕ ಚರ್ಚೆಗೆ ಬರುವ ಜೆನಿಫರ್ ಕೆಲವೊಮ್ಮೆ ಸಂಬಂಧ, ವಿವಾಹದ ವಿಚಾರದಲ್ಲೂ ಸುದ್ದಿಯಾಗುತ್ತಿದ್ದಾರೆ.
2/ 15
ಇದೀಗ ನೀಳ ಮೈಮಾಟದ ನಟಿ ಜೆನಿಫರ್ ಲೊಪೆಜ್ 5ನೇ ಮದುವೆಯಾಗಲು ಹೊರಟಿದ್ದಾರಂತೆ. ಆ ಕಾರಣಕ್ಕಾಗಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
3/ 15
ಮಾಧ್ಯಮಗಳ ವರದಿ ಪ್ರಕಾರ ನಟಿ ಜೆನಿಫರ್ ಇಲ್ಲಿಯವರೆಗೆ 4 ಮದುವೆಗಳು ಆಗಿದೆಯಂತೆ. ಇದೀಗ 5ನೇ ಬಾರಿ ವಿವಾಹವಾಗಲು ಜೆನಿಫರ್ ಹೊರಟಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
4/ 15
ನಟಿ ಜೆನಿಫರ್ 1997ರಲ್ಲಿ ಓಜಾನಿ ನೋವಾ ಜೊತೆಗೆ ಮೊದಲ ವಿವಾಹ ನಡೆದಿತ್ತು. ಒಂದು ವರ್ಷವು ದಾಂಪತ್ಯ ಜೀವನ ಸರಿಯಾಗಿ ನಡೆಸಿಕೊಂಡು ಹೋಗಲು ಸಾಧ್ಯವಾಗಿರಲಿಲ್ಲ. ಹಾಗಾಗಿ ವಿಚ್ಛೇದನ ನೀಡಿದರು. ನಂತರ 2ನೇ ಮದುವೆಯಾದರು. 1998 ಇವರಿಬ್ಬರು ವಿಚ್ಛೇದನ ಪಡೆದರು.
5/ 15
2001ರಲ್ಲಿ ಅಮೆರಿಕ ನಟ ಕ್ರಿಸ್ ಫಾಡ್ ಜೊತೆ ಜೆನಿಫರ್ ವಿವಾಹ ನಡೆಯಿತು. 2003 ರಲ್ಲಿ ಇವರಿಬ್ಬರ ದಾಂಪತ್ಯಕ್ಕೆ ಜೀವನಕ್ಕೆ ತೆರೆ ಬಿತ್ತು.
6/ 15
2004ರಲ್ಲಿ ಮಾರ್ಕ್ ಆಂಥೋನಿಯನ್ನು ನಟಿ ಜೆನಿಫರ್ ಮದುವೆಯಾದರು. ವೈಯಕ್ತಿಕ ಕಾರಣದಿಂದಾಗಿ 2014ರಲ್ಲಿ ವಿಚ್ಛೇದನ ಪಡೆದರು.
7/ 15
2017ರಿಂದ ಅಲೆಕ್ಸ್ ರೊಡಿಗ್ರಸ್ ಜೊತೆ ಸಂಬಂಧದಲ್ಲಿದ್ದಾರೆ. ಆದರೆ ಅಲೆಕ್ಸ್ ರೋಡಿಗ್ರಸ್ ಜೊತೆ ಯಾವಾಗ ಮದುವೆ ಎಂಬುದು ಗೊತ್ತಿಲ್ಲ. ಮಾಹಿತಿಗಳ ಪ್ರಕಾರ ಶೀಘ್ರದಲ್ಲೇ ಇವರಿಬ್ಬರ ವಿವಾಹ ನಡೆಯಲಿದೆ ಎನ್ನಲಾಗಿದೆ.