ನಟಿ ಅದಿತಿ ಪ್ರಭುದೇವ ಅವರು ಡಾಲಿ ಧನಂಜಯ್ ಜೊತೆ ಜಮಾಲಿಗುಡ್ಡ ಸಿನಿಮಾ ಮಾಡುತ್ತಿರುವುದು ಎಲ್ಲರಿಗೂ ಗೊತ್ತು. ಆದರೆ ಈ ಸಿನಿಮಾದಲ್ಲಿ ಒಂದು ವಿಶೇಷತೆ ಇದೆ, ಅದು ಏನು ಗೊತ್ತಾ?
2/ 7
ನಟಿ ಅದಿತಿ ಪ್ರಭುದೇವ ಅವರು ಈ ಸಿನಿಮಾದಲ್ಲಿ ಡಾಲಿ ಕೈಯಿಂದ ಸಿಗರೇಟ್ ಕಿತ್ತುಕೊಂಡುಬಿಟ್ಟಿದ್ದಾರೆ. ಹೌದು ಡಾಲಿ ಕೈಯಲ್ಲಿ ಈಗ ಸಿಗರೇಟ್ ಇಲ್ಲ.
3/ 7
ಬಹುತೇಕ ಎಲ್ಲ ಸಿನಿಮಾಗಳಲ್ಲಿ ಡಾಲಿ ಧನಂಜಯ್ ಅವರಿಗೆ ಬಿಯರ್ ಬಾಟಲ್, ಸಿಗರೇಟ್ ಸಿಗ್ನೇಚರ್ ಆಗಿ ಒಂದಷ್ಟು ವಸ್ತುಗಳು ಅವರ ಕೈಯಲ್ಲಿ ಇರುತ್ತವೆ. ಆದರೆ ಈ ಸಿನಿಮಾದಲ್ಲಿ ಅದಿಲ್ಲ.
4/ 7
ಹೌದು. ಜಮಾಲಿಗುಡ್ಡ ಸಿನಿಮಾದಲ್ಲಿ ಡಾಲಿ ಕೈಯಲ್ಲಿ ಸಿಗರೇಟೂ ಇಲ್ಲ, ಬಿಯರ್ ಬಾಟಲ್ ಕೂಡಾ ಇಲ್ಲ. ಹಾಗಾಗಿ ಇದರಲ್ಲಿ ಡಿಫರೆಂಟ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
5/ 7
ಸಾಕಷ್ಟು ಕುತೂಹಲ ಸೃಷ್ಟಿಸಿರೋ ಈ ಸಿನಿಮಾದಲ್ಲಿ ಅದ್ಭುತ ಪ್ರಕೃತಿ ರಮ್ಯ ದೃಶ್ಯಗಳು ಪ್ರೇಕ್ಷಕರಿಗೆ ಸಿಗಲಿವೆ ಎನ್ನುವುದು ಪ್ಲಸ್ ಪಾಯಿಂಟ್.
6/ 7
ನಟಿ ಅದಿತಿ ಪ್ರಭುದೇವ ಕೂಡಾ ತುಂಬಾ ಸಿಂಪಲ್ ಆಗಿರುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರೇ ಹೇಳಿದಂತೆ ಹಳ್ಳಿ ಹುಡುಗಿಯ ಬ್ಯೂಟಿಫುಲ್ ಪಾತ್ರವಂತೆ ಅದು.
7/ 7
ಸಿನಿಮಾದಲ್ಲಿ ಅದಿತಿ ಸುಂದರವಾದ ಹಳ್ಳಿ ಚೆಲುವೆಯಾಗಿ ಕಾಣಿಸಿದ್ದು ಅದು ಹಾಟ್ ಅಲ್ಲ ಬ್ಯೂಟಿಫುಲ್ ಎಂದಿದ್ದಾರೆ ನಟಿ. ಅಂತೂ ಜಮಾಲಿಗುಡ್ಡ ರಿಲೀಸ್ಗೂ ಮುನ್ನ ಸಾಕಷ್ಟು ಕುತೂಹಲ ಸೃಷ್ಟಿಸಿದೆ.