ನಟಿ ಅದಿತಿ ಪ್ರಭುದೇವ ಅವರು ಪತಿ ಯಶಸ್ ಜೊತೆಗೆ ಕ್ಲಿಕ್ ಮಾಡಿಕೊಂಡು ಚಂದದ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಕೇಸರಿ ಅಂಚಿನ ಹಸಿರು ಸೀರೆಯನ್ನು ಉಟ್ಟಿದ್ದ ಅದಿತಿ ಪ್ರಭುದೇವ ಗ್ರ್ಯಾಂಡ್ ಆಭರಣಗಳನ್ನು ಧರಿಸಿ ಕೈತುಂಬಾ ಬಳೆಗಳನ್ನು ಧರಿಸಿದ್ದರು. ಫುಲ್ ಸ್ಮೈಲ್ನಲ್ಲಿ ಪತಿಯನ್ನು ಎತ್ತಿಕೊಂಡಿರುವ ನಟಿಯ ಫೋಟೋ ವೈರಲ್ ಆಗಿದೆ. ಯಶಸ್ ಅವರು ಕೂಡಾ ನಗುವುದನ್ನು ಈ ಫೋಟೋದಲ್ಲಿ ಕಾಣಬಹುದು. ಅದಿತಿ ಪ್ರಭುದೇವ ಅವರು ಪತಿಯ ಪಕ್ಕ ಕುಳಿತು ಕೆನ್ನೆಗೆ ಮುತ್ತಿಡುತ್ತಿರುವ ಇನ್ನೊಂದು ಫೋಟೋ ಕೂಡಾ ವೈರಲ್ ಆಗಿದೆ. ಇದರಲ್ಲಿ ನಟಿಯ ಆಭರಣ, ಬಳೆ, ಉಡುಗೆ ಹೈಲೈಟ್ ಆಗಿದೆ. ನಟಿಯ ಅಭಿಮಾನಿಗಳು ಫೋಟೋಗಳನ್ನು ಈಗ ವ್ಯಾಪಕವಾಗಿ ಶೇರ್ ಮಾಡುತ್ತಿದ್ದಾರೆ. ಅದೇ ರೀತಿ ಹೊಸ ಜೋಡಿ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಮದುವೆಯಾಗಿ ಒಂದೇ ದಿನಕ್ಕೆ ಅದಿತಿ ಅವರ ಪತಿ ಯಶಸ್ ಅವರ ಇನ್ಸ್ಟಾಗ್ರಾಮ್ ಅಕೌಂಟ್ ಹ್ಯಾಕ್ ಆಗಿ ಸುದ್ದಿಯಾಗಿತ್ತು. ಶಾನೆ ಟಾಪ್ ಖ್ಯಾತಿಯ ನಟಿ ಅದಿತಿ ಪ್ರಭುದೇವ ಅವರು ಅರಶಿನ ಶಾಸ್ತ್ರದ ಫೋಟೊ ಹಾಗೂ ವಿಡಿಯೋವನ್ನು ಹಂಚಿಕೊಂಡಿದ್ದರು.