ನಟಿ ಅದಿತಿ ಪ್ರಭುದೇವ (Aditi Prabhudeva) ಅವರು ಯಶಸ್ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. (ನವೆಂಬರ್ 28) ಬೆಂಗಳೂರಿನ (Bangalore) ಪ್ಯಾಲೇಸ್ ಗ್ರೌಂಡ್ಸ್ನ ಗಾಯತ್ರಿ ವಿಹಾರ ಗ್ರ್ಯಾಂಡ್ನಲ್ಲಿ ಈ ಜೋಡಿ ಮದುವೆ ಆಗಿದೆ.
2/ 8
ಹಲವು ಸೆಲೆಬ್ರಿಟಿಗಳು, ಕುಟುಂಬದವರು, ಗೆಳೆಯರ ಸಮ್ಮುಖದಲ್ಲಿ ಈ ವಿವಾಹ ಕಾರ್ಯ ನೆರವೇರಿದೆ. ಅದಿತಿ ಪ್ರಭುದೇವ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಶುಭಾಶಯ ತಿಳಿಸುತ್ತಿದ್ದಾರೆ.
3/ 8
ನವೆಂಬರ್ 26ರಂದು ಅರಿಶಿಣ ಶಾಸ್ತ್ರಗಳು ನಡೆದವು. ನವೆಂಬರ್ 27ರಂದು ಪ್ಯಾಲೇಸ್ಗ್ರೌಂಡ್ನಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆದಿದೆ.
4/ 8
ಯಶ್, ರಾಧಿಕಾ ಪಂಡಿತ್, ಶ್ರೀನಗರ ಕಿಟ್ಟಿ, ಮೇಘಾ ಶೆಟ್ಟಿ, ರಂಜನಿ ರಾಘವನ್ ಸೇರಿ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ನವದಂಪತಿಗೆ ಶುಭಾಶಯ ಕೋರಿದರು.
5/ 8
ಅದಿತಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದ್ದೂರಿ ಸಮಾರಂಭದಲ್ಲಿ ಯಶಸ್ ಅವರನ್ನು ಅದಿತಿ ವರಿಸಿದ್ದಾರೆ. ಆದರೆ ಮದುವೆ ಆದ 2 ದಿನದಲ್ಲಿ ಯಶಸ್ ಅವರಿಗೆ ಶಾಕ್ ಎದುರಾಗಿದೆ.
6/ 8
ಯಶಸ್ ಅವರ ಇನ್ಸ್ಟಾಗ್ರಾಂ ಖಾತೆಯನ್ನು ಹ್ಯಾಕ್ ಮಾಡಿದ್ದಾರೆ. ಈ ಬಗ್ಗೆ ಸ್ವತಃ ಯಶಸ್ ಪೋಸ್ಟ್ ಹಾಕಿದ್ದಾರೆ.
7/ 8
ನನ್ನ ಅಕೌಂಟ್ನಿಂದ ಮೆಸೇಜ್ ಬಂದಿದ್ದರೆ ರಿಪ್ಲೈ ಮಾಡಬೇಡಿ. ಈಗಾಗಲೇ ಪೊಲೀಸರಿಗೆ ದೂರು ನೀಡಿದ್ದೇನೆ. ಎಂದು ಯಶಸ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
8/ 8
‘ಚಾಂಪಿಯನ್’, ‘ಅಂದೊಂದಿತ್ತು ಕಾಲ’, ‘ಮಾಫಿಯಾ’, 'ಒನ್ಸ್ ಅಪೋನ್ ಅ ಟೈಮ್ ಇನ್ ಜಮಾಲಿಗುಡ್ಡ' ಮುಂತಾದ ಅದಿತಿ ನಟನೆಯ ಸಿನಿಮಾಗಳು ರಿಲೀಸ್ ಆಗಬೇಕಿವೆ.