ವೈಷ್ಣವಿ ಗೌಡ ಬಿಗ್ ಬಾಸ್ ಸೀಸನ್ 08 ಸ್ಪರ್ಧಿ ಆಗಿದ್ದರು. ಟಾಪ್ 05 ತನಕ ವೈಷ್ಣವಿ ಅವರು ಬಂದಿದ್ದರು. ಬಿಗ್ ಬಾಸ್ ಮೂಲಕ ಮತ್ತೆ ವೈಷ್ಣವಿ ಜನರಿಗೆ ಇಷ್ಟ ಆಗಿದ್ದರು. ಇನ್ನು ಮುಂದೆ ವೈಷ್ಣವಿ ಅವರು ಜೀ ಕನ್ನಡದಲ್ಲಿ ಪ್ರಸಾರವಾಗಲಿರುವ ಸೀತಾರಾಮ ಎನ್ನುವ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಬಾರಿ ವೈಷ್ಣವಿ ಅವರು ತಾಯಿ ಪಾತ್ರ ನಿರ್ವಹಿಸಲು ಸಜ್ಜಾಗಿದ್ದಾರೆ.