ಕನ್ನಡದ ಪ್ರೇಕ್ಷಕರಿಗೆ ಸನ್ನಿಧಿಯಂತಲೇ ಪರಿಚಯವಿರುವ ವೈಷ್ಣವಿ ಗೌಡ ಅವರು ಕಿರುತೆರೆಲೋಕದ ಜನಪ್ರಿಯ ನಟಿ. ವೈಷ್ಣವಿ ಅವರು ಫೆಬ್ರವರಿ 20, 1992ರಲ್ಲಿ ಜನಿಸಿದ್ದಾರೆ. ಇಂದು ತಮ್ಮ 31ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
2/ 8
ತಮ್ಮ ತಾಯಿಯೊಂದಿಗೆ ವೈಷ್ಣವಿ ಗೌಡ ಅವರು ದೇವಸ್ಥಾನಕ್ಕೆ ಹೋಗಿದ್ದಾಗ, ಸಹಾಯಕ ನಿರ್ದೇಶಕರೊಬ್ಬರು ನೋಡಿ ತಮ್ಮ ಸೀರಿಯಲ್‍ನಲ್ಲಿ ನಟಿಸಲು ಆಫರ್ ನೀಡಿದ್ದರು.
3/ 8
ಜೀ ಕನ್ನಡದ `ದೇವಿ' ಸೀರಿಯಲ್‍ನಿಂದ ವೈಷ್ಣವಿ ಗೌಡ ಅವರ ಕಿರುತೆರೆ ಪಯಣ ಆರಂಭವಾಯಿತು. ನಂತರ `ಪುನರ್‌ವಿವಾಹ'ದಲ್ಲಿ ನಟಿಸಿ ಜನರ ಮನಸ್ಸು ಗೆದ್ದರು.
4/ 8
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಈಗಲೂ ಸನ್ನಿಧಿ ಪಾತ್ರವನ್ನು ಜನ ಮರೆತಿಲ್ಲ.
5/ 8
ವೈಷ್ಣವಿ ಅವರು ಭರತನಾಟ್ಯಂ, ಕುಚಿಪುಡಿ ಮತ್ತು ಬೆಲ್ಲಿ ಡ್ಯಾನ್ಸ್ ನಲ್ಲಿ ಪರಿಣಿತಿ ಹೊಂದಿದ್ದಾರೆ. `ಗಿರಿಗಿಟ್ಲೆ' ಮೂಲಕ ನಾಯಕಿಯಾಗಿ ಚಂದನವನ ಪ್ರವೇಶಿಸಿದ್ದಾರೆ. ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸುವ ಆಸೆ ಹೊಂದಿದ್ದಾರೆ.
6/ 8
ವೈಷ್ಣವಿ ಗೌಡ ಅವರು `ಭರ್ಜರಿ ಕಾಮಿಡಿ' ಎಂಬ ರಿಯಾಲಿಟಿ ಶೋ ಅನ್ನು ನಿರೂಪಣೆ ಮಾಡಿದ್ದರು. `ಕುಣಿಯೋಣ ಬಾರ' ಡ್ಯಾನ್ಸ್ ರಿಯಾಲಿಟಿ ಶೋದಲ್ಲಿ ಕೂಡ ಭಾಗವಹಿಸಿದ್ದರು.
7/ 8
ವೈಷ್ಣವಿ ಗೌಡ ಬಿಗ್ ಬಾಸ್ ಸೀಸನ್ 08 ಸ್ಪರ್ಧಿ ಆಗಿದ್ದರು. ಟಾಪ್ 05 ತನಕ ವೈಷ್ಣವಿ ಅವರು ಬಂದಿದ್ದರು. ಬಿಗ್ ಬಾಸ್ ಮೂಲಕ ಮತ್ತೆ ವೈಷ್ಣವಿ ಜನರಿಗೆ ಇಷ್ಟ ಆಗಿದ್ದರು.
8/ 8
ಇನ್ನು ಮುಂದೆ ವೈಷ್ಣವಿ ಅವರು ಜೀ ಕನ್ನಡದಲ್ಲಿ ಪ್ರಸಾರವಾಗಲಿರುವ ಸೀತಾರಾಮ ಎನ್ನುವ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಬಾರಿ ವೈಷ್ಣವಿ ಅವರು ತಾಯಿ ಪಾತ್ರ ನಿರ್ವಹಿಸಲು ಸಜ್ಜಾಗಿದ್ದಾರೆ.