Tamannaah Bhatia: ಹೀರೋಗಳು ರೊಮ್ಯಾಂಟಿಕ್ ಸೀನ್ಗಳನ್ನು ಎಂಜಾಯ್ ಮಾಡ್ತಾರಾ? ಸ್ಟಾರ್ ನಟರ ಬಗ್ಗೆ ತಮನ್ನಾ ಹೇಳಿದ್ದೇನು?
ಟಾಲಿವುಡ್, ಕಾಲಿವುಡ್ಗಳಲ್ಲಿ ಸ್ಟಾರ್ ಹೀರೋಗಳ ಜೊತೆ ನಟಿಸಿ ಸೂಪರ್ ಹಿಟ್ ಮೂವಿಗಳನ್ನು ನೀಡಿದ ಮಿಲ್ಕಿ ಬ್ಯೂಟಿ ತಮನ್ನಾ, ಇದೀಗ ಸಿನಿಮಾಗಳ ಶೂಟಿಂಗ್ ವೇಳೆ ರೊಮ್ಯಾಂಟಿಕ್ ಸೀನ್ ಗಳಲ್ಲಿ ನಟರು ಹೇಗೆ ನಟಿಸ್ತಾರೆ ಎನ್ನುವ ಬಗ್ಗೆ ಮಾತಾಡಿದ್ದಾರೆ.
ತಮನ್ನಾ ಇಂಡಸ್ಟ್ರಿಗೆ ಬಂದು 15 ವರ್ಷಗಳಾಗಿವೆ. ಅವರು ವರ್ಷಗಳಲ್ಲಿ 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ತಮನ್ನಾ ತೆಲುಗು ಮಾತ್ರವಲ್ಲದೆ ತಮಿಳು, ಹಿಂದಿಯಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.
2/ 8
ಸಂದರ್ಶನವೊಂದರಲ್ಲಿ ಮಾತಾಡಿದ ನಟಿ ತಮನ್ನಾ, ಸಿನಿಮಾಗಳಲ್ಲಿ ನಟರು ರೊಮ್ಯಾಂಟಿಕ್ ಸೀನ್ ಗಳಲ್ಲಿ ನಟಿಸುವಾಗ ಹೇಗಿರ್ತಾರೆ ಎಂಬ ವಿಚಾರದ ಬಗ್ಗೆ ಮಾತಾಡಿದ್ದಾರೆ. ಬಹುತೇಕ ಸ್ಟಾರ್ ಹೀರೋಗಳ ಜೊತೆಯೇ ನಟಿ ತಮನ್ನಾ ನಟಿಸಿದ್ದಾರೆ.
3/ 8
ರೊಮ್ಯಾಂಟಿಕ್ ಸೀನ್ ಗಳನ್ನು ನಟರು ಎಂಜಾಯ್ ಮಾಡ್ತಾರೆ? ಈ ಪ್ರಶ್ನೆಗೆ ಉತ್ತರಿಸಿದ ತಮನ್ನಾ, ರೊಮ್ಯಾಂಟಿಕ್, ಕಿಸ್ಸಿಂಗ್ ಸೀನ್, ಇಂಟಿಮೇಟ್ ಸೀನ್ ಗಳಲ್ಲಿ ನಟಿಸೋದು ನಟಿಯರಿಗೆ ಕಷ್ಟ ಅನಿಸುತ್ತದೆ. ಹಾಗೇ ನಟರು ಕೂಡ ಹತ್ತಾರು ಜನರ ನಡುವೆ ರೊಮ್ಯಾಂಟಿಕ್ ಸೀನ್ ಮಾಡೋದು ಕೂಡ ಕಷ್ಟವೇ ಎಂದ್ರು.
4/ 8
ಕೆಲವೊಮ್ಮೆ ಸಾಕಷ್ಟು ಟೇಕ್ಗಳನ್ನು ಕೂಡ ತೆಗೆದುಕೊಂಡ ಉದಾಹರಣೆ ಇದೆ. ಹೀಗಾಗಿ ಇದು ನಿಜಕ್ಕೂ ಅಷ್ಟು ಸುಲಭದ ಕೆಲಸವಲ್ಲ ಎಂದು ಹೇಳಿದ್ದಾರೆ.
5/ 8
ರೊಮ್ಯಾಂಟಿಕ್ ಸೀನ್ನಲ್ಲಿ ನಟಿಸುವಾಗ ಅವರ ಪರಿಸ್ಥಿತಿ ಹೇಗಿರುತ್ತದೆ ಎನ್ನುವುದನ್ನು ನಟಿ ತಮನ್ನಾ ಈಗ ರಿವೀಲ್ ಮಾಡಿದ್ದಾರೆ.
6/ 8
ನಟರು ರೊಮ್ಯಾಂಟಿಕ್ ಸೀನ್ ಗಳಲ್ಲಿ ನಟಿಸಲು ಇಷ್ಟಪಡಲ್ಲ ರೊಮ್ಯಾಂಟಿಕ್ ಸೀನ್ ಗಳಲ್ಲಿ ನಟಿಸುವುದನ್ನು ನಟರು ಎಂಜಾಯ್ ಮಾಡುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ಅದು ನಿಜ ಅಲ್ಲ ಎಂದು ತಮನ್ನಾ ಹೇಳಿದ್ದಾರೆ.
7/ 8
ಹೀರೊಯಿನ್ ಜೊತೆ ರೊಮ್ಯಾನ್ಸ್ ಮಾಡಲು ಕೆಲ ನಟರು ತುಂಬಾ ಕಸಿವಿಸಿ ಅನುಭವಿಸುತ್ತಾರೆ. ಸಾಮಾನ್ಯವಾಗಿ ಸಾಕಷ್ಟು ನಟರು ರೊಮ್ಯಾನ್ಸ್, ಇಂಟಿಮೇಟ್ ಸೀನ್ಗಳಲ್ಲಿ ನಟಿಸಲು ಇಷ್ಟಪಡುವುದೇ ಇಲ್ಲ ಎಂದು ಹೇಳಿದ್ದಾರೆ.
8/ 8
ಶೂಟಿಂಗ್ ವೇಳೆ ನಟಿಯರು ಏನು ಅಂದುಕೊಳ್ತಾರೋ ಎನ್ನುವ ಚಿಂತೆಯಲ್ಲೇ ಇರ್ತಾರೆ ಎಂದು ತಮನ್ನಾ ಹೇಳಿದ್ದಾರೆ. ಸ್ಟಾರ್ ನಟರು ಅಂತಹ ಸನ್ನಿವೇಶಗಳಲ್ಲಿ ಮಾತನಾಡಲು ಕೂಡ ಹಿಂಜರಿಯುತ್ತಾರೆ. ಇಡೀ ಸಿನಿಮಾ ಶೂಟಿಂಗ್ನಲ್ಲಿ ನಾಯಕ ನಟರು ಭಯಪಡುವುದು ಇಂತಹ ಸನ್ನಿವೇಶದಲ್ಲಿ ನಟಿಸುವುದಕ್ಕೆ ಮಾತ್ರ. ಕೆಲವರು ಇಂತಹ ಸೀನ್ ಬೇಡವೇ ಬೇಡ ಎನ್ನುತ್ತಾರೆ ಎಂದು ತಮನ್ನಾ ಹೇಳಿದ್ದಾರೆ.