2005 ರಲ್ಲಿ ತಮ್ಮ ಹದಿನೈದನೇ ವಯಸ್ಸಿನಲ್ಲಿ `ಚಾಂದ್ ಸಾ ರೋಷನ್ ಚೆಹರಾ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದರು. ಈ ಚಿತ್ರ ಯಶಸ್ವಿಯಾಗಲಿಲ್ಲ. ಅದೇ ವರ್ಷ ತೆಲುಗಿನ ಶ್ರೀ ಮತ್ತು ಮುಂದಿನ ವರ್ಷ ತಮಿಳಿನ ಕೇಡಿ ಚಿತ್ರಗಳಲ್ಲಿ ನಟಿಸಿದರು. ಈ ಚಿತ್ರಗಳ ನಟನೆಗೆ ಪ್ರಶಂಸೆ ಪಡೆದರು. ನಂತರ ತೆರೆಕಂಡ ಹ್ಯಾಪಿ ಡೇಸ್, ಕಲ್ಲೂರಿ ಚಿತ್ರಗಳು ತಮನ್ನಾಗೆ ಇನ್ನಷ್ಟು ಖ್ಯಾತಿ ನೀಡಿದವು.