ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ಅದ್ಧೂರಿಯಾಗಿ ನಡೆದಿದೆ. ಹಾವೇರಿಯ ಹೊರವಲಯದ ಅಜ್ಜಯ್ಯ ಗುಡಿಯ ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಿ ಕನ್ನಡ ಹಬ್ಬವನ್ನು ಆಚರಿಸಲಾಗಿದೆ.
2/ 8
ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆಯನ್ನು ಜರ್ಮನ್ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿತ್ತು. ಪುಸ್ತಕ ಮಳಿಗೆ ಸೇರಿದಂತೆ ವಸ್ತು ಪ್ರದರ್ಶನಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದ್ರೆ ಸಾಹಿತ್ಯ ಸಮ್ಮೇಳನದಲ್ಲಿ ಸುಧಾನರಸಿಂಹರಾಜು ಅವರಿಗೆ ಅವಮಾನ ಆಗಿದೆ.
3/ 8
ಹಾನಗಲ್ ಕುಮಾರ ಶಿವಯೋಗಿಗಳ ವೇದಿಕೆಯಲ್ಲಿ ಶತಮಾನ ಪುರುಷರು ಗೋಷ್ಠಿಗೆ ತಮ್ಮ ತಂದೆ ನರಸಿಂಹರಾಜು ಅವರ ಬಗ್ಗೆ ಮಾತನಾಡಲು ಹೋದ ಸುಧಾ ನರಸಿಂಹರಾಜು ಅವರುನ್ನು ಪೊಲೀಸರು ತಡೆದಿದ್ದರು.
4/ 8
ಪೊಲೀಸರು ಎಷ್ಟು ಹೇಳಿದ್ರೂ ಕೇಳಲಿಲ್ಲ. 1 ತಾಸು ನನ್ನ ನಿಲ್ಲಿಸಿದ್ರು. ಸಂಘಟಕರ ಮೊಬೈಲ್ ಗೆ ಕಾಲ್ ಮಾಡಿದಾಗ ಯಾರು ಸ್ವೀಕರಿಸಲಿಲ್ಲ. ಆಗ ನನಗೆ ಬೇಸರ ಆಯ್ತು ಎಂದು ಸುಧಾ ಅವರು ಹೇಳಿದ್ದಾರೆ.
5/ 8
ಸಂಘಟಕರು ವಾಪಸ್ ನನಗೆ ಕಾಲ್ ಮಾಡಿ, ಮತ್ತೆ ನನ್ನ ಕರೆದುಕೊಂಡು ಹೋದರು. ಮಧ್ಯಾಹ್ನ 2 ಗಂಟೆಗೆ ಇದ್ದ ಗೋಷ್ಠಿಗೆ ಸಂಜೆ 4.10ಕ್ಕೆ ಮಾತನಾಡಲು ಅವಕಾಶ ಸಿಕ್ಕಿತು ಎಂದು ಸುಧಾ ನರಸಿಂಹರಾಜು ಅವರು ಹೇಳಿದ್ದಾರೆ.
6/ 8
ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಮುಗಿದಿದ್ದು, ಮುಂದಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ ಸಕ್ಕರೆ ನಾಡು ಮಂಡ್ಯಕ್ಕೆ ಸಿಕ್ಕಿದೆ.
7/ 8
ಒಟ್ಟು ಒಂಬತ್ತು ಜಿಲ್ಲೆಯವರು ತಮ್ಮ ಜಿಲ್ಲೆಯಲ್ಲಿ ಮುಂದಿನ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವಂತೆ ಮನವಿ ಮಾಡಿದ್ದರು.ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಬಹುತೇಕರು ಮತ ಹಾಕಿದ್ದು ಸಕ್ಕರೆ ನಾಡು ಮಂಡ್ಯಕ್ಕೆ. ಮಂಡ್ಯಕ್ಕೆ ಒಟ್ಟು 17 ಮತಗಳು ಲಭಿಸಿವೆ. ಮಂಡ್ಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.
8/ 8
ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡ ಸಾಹಿತ್ಯ ಪರಿಷತ್ತಿನಿಂದ 1915ರಿಂದ ನಡೆಸಿಕೊಂಡು ಬರುತ್ತಿರುವ ದೊಡ್ಡ ಪ್ರಮಾಣದ ಕನ್ನಡ ಸಮ್ಮೇಳನ.