Actress Sreeleela: ಬಾಲಯ್ಯನ ಜೊತೆ ಸಿನೆಮಾದಲ್ಲಿ ಭರಾಟೆ ಬೆಡಗಿ - ಈ ಪಾತ್ರ ಸ್ಪೆಷಲ್ ಅಂತೆ
New Tollywood Film: ಭರಾಟೆ ಬೆಡಗಿ ಶ್ರೀಲೀಲಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಈ ನಟಿಯ ಕೈಯಲ್ಲಿ ದೊಡ್ಡ ದೊಡ್ಡ ಸಿನಿಮಾಗಳಿವೆ. ಇದೀಗ ಶ್ರೀಲೀಲಾ ಬಗ್ಗೆ ಟಾಲಿವುಡ್ನಲ್ಲಿ ಮತ್ತೊಂದು ಸುದ್ದಿ ಹರಿದಾಡುತ್ತಿದ್ದು, ಅದೇನು ಎಂಬುದು ಇಲ್ಲಿದೆ.
ಕನ್ನಡದಲ್ಲಿ ‘ಕಿಸ್’ ಚಿತ್ರದ ಮೂಲಕ ಸ್ಯಾಂಡಲ್ವುಡ್ ಪ್ರವೇಶಿಸಿದ ಸುಂದರಿ ಶ್ರೀಲೀಲಾ, ನಂತರ ‘ಭರಾಟೆ’ ಸಿನಿಮಾದಲ್ಲಿ ಶ್ರೀಮುರುಳಿ ಎದುರಿಗೆ ನಟಿಸಿ ಸೈ ಎನಿಸಿಕೊಂಡಿದ್ದರು.
2/ 8
ಶ್ರೀಲೀಲಾ ಟಾಲಿವುಡ್ ಚಿತ್ರಗಳಲ್ಲಿ ಅಭಿನಯಿಸುತ್ತಿರುವುದು ಹೊಸದೇನಲ್ಲ. ಸಾಲು ಸಾಲು ಚಿತ್ರಗಳ ಆಫರ್ ಅವರನ್ನು ಹುಡುಕಿಕೊಂಡು ಬರುತ್ತಿದೆ. ಇದೀಗ ಟಾಲಿವುಡ್ನ ಮತ್ತೊಬ್ಬ ಸೂಪರ್ ಸ್ಟಾರ್ ಜೊತೆ ಅಭಿನಯಿಸುವ ಅವಕಾಶ ಬಂದಿದೆ.
3/ 8
ಪೆಳ್ಳಿ ಸಂದಡಿ’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಈ ನಟಿ, ಚಿತ್ರ ಹೆಚ್ಚು ಕಲೆಕ್ಷನ್ ಮಾಡದಿದ್ದರೂ ಸಹ, ಅಲ್ಲಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದು, ಇದೀಗ ನಂದಮೂರಿ ಬಾಲಕೃಷ್ಣ ಜೊತೆ ನಟಿಸುವ ಆಫರ್ ಪಡೆದಿದ್ದಾರೆ.
4/ 8
ಹೌದು, ನಂದಮೂರಿ ಬಾಲಕೃಷ್ಣ ನಟನೆಯ ಹೊಸ ಚಿತ್ರದಲ್ಲಿ ಶ್ರೀಲೀಲಾ ಅವಕಾಶ ಗಿಟ್ಟಿಸಿಕೊಂಡಿದ್ದು, ಈ ಪಾತ್ರ ಅವರಿಗೆ ತುಂಬಾ ಸ್ಪೆಷಲ್ ಅಂತೆ.
5/ 8
ಸರಿಲೇರು ನೀಕೆವ್ವರು ಖ್ಯಾತಿಯ ಅನಿಲ್ ರವಿಪುಡಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಇದರಲ್ಲಿ ಹಿರಿಯ ವ್ಯಕ್ತಿಯಾಗಿ ಬಾಲಯ್ಯ ಹೊಸ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
6/ 8
ಈ ಚಿತ್ರದಲ್ಲಿ ಶ್ರೀಲೀಲಾ ಬಾಲಯ್ಯನ ತಂಗಿಯ ಮಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಬಹಳ ವಿಭಿನ್ನವಾದ ಪಾತ್ರ ಎನ್ನಲಾಗುತ್ತಿದೆ.
7/ 8
ಇನ್ನು ಕನ್ನಡದಲ್ಲಿ ಇತ್ತೀಚೆಗೆ ತೆರೆಕಂಡ ಬೈಟುಲವ್ ಚಿತ್ರದಲ್ಲಿ ಸಹ ಶ್ರೀಲೀಲಾ ಕಾಣಿಸಿಕೊಂಡಿದ್ದು, ಇನ್ನು ಹಲವಾರು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.
8/ 8
ಇನ್ನು ಟಾಲಿವುಡ್ನಲ್ಲಿ ಮಹೇಶ್ ಬಾಬು ಜೊತೆ ಸಹ ಎರಡನೇ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ಒಟ್ಟಾರೆಯಾಗಿ ಟಾಲಿವುಡ್ನಲ್ಲಿ ಶ್ರೀಲೀಲಾ ಹವಾ ಭರ್ಜರಿಯಾಗಿದೆ.