ಶ್ವೇತಾ ಚಂಗಪ್ಪಾ ಟಿವಿ ಹಾಗೂ ಚಿತ್ರರಂಗಕ್ಕೆ ಕಾಲಿಟ್ಟು 20 ವರ್ಷ ಕಳೆದಿದೆ. 2 ದಶಕಗಳಿಂದಲೂ ನಟಿ ಶ್ವೇತಾ ತನ್ನ ಅಭಿನಯದಿಂದ ಜನರ ಮನಸ್ಸು ಕದ್ದಿದ್ದಾರೆ. ಅನೇಕ ಸೀರಿಯಲ್ ಹಾಗೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 2006ರಲ್ಲಿ ತೆರೆಕಂಡ ‘ತಂಗಿಗಾಗಿ’ ಸಿನಿಮಾದಲ್ಲಿ ಕೊನೆಯದಾಗಿ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಂಡಿದ್ದ ಶ್ವೇತಾ, ಇತ್ತೀಚಿಗೆ ಶಿವಣ್ಣ ಅಭಿನಯದ ವೇದ ಸಿನಿಮಾದಲ್ಲಿ ನಟಿಸಿದ್ದರು.