Malashree-Shruti: ನೋವಿನಲ್ಲಿರುವ ಗೆಳತಿ ಮಾಲಾಶ್ರೀಗೆ ಭಾವುಕ ಪತ್ರ ಬರೆದ ನಟಿ ಶ್ರುತಿ...!
Koti Ramu Death: ನಟಿ ಶ್ರುತಿ ಹಾಗೂ ಮಾಲಾಶ್ರೀ ಬಹಳ ಸಮಯದ ಗೆಳತಿಯರು. ಕಷ್ಟ ಸುಖವನ್ನು ಹಂಚಿಕೊಳ್ಳುವ ಗೆಳೆತನ ಇವರದ್ದು. ಕೋವಿಡ್ನಿಂದಾಗಿ ಮಾಲಾಶ್ರೀ ಅವರ ಪತಿ ರಾಮು ಕೊನೆಯುಸಿರೆಳೆದಿದ್ದು, ಇಡೀ ಕುಟುಂಬ ನೋವಿನಲ್ಲಿ ಮುಳುಗಿದೆ. ನೋವಿನಲ್ಲಿರುವ ಗೆಳತಿಗೆ ಭಾವುಕರಾಗಿ ಶ್ರುತಿ ಪತ್ರವೊಂದನ್ನು ಬರೆಯುವ ಮೂಲಕ ಧೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ. (ಚಿತ್ರಗಳು ಕೃಪೆ: ಶ್ರುತಿ ಹಾಗೂ ಮಾಲಾಶ್ರೀ ಅವರ ಇನ್ಸ್ಟಾಗ್ರಾಂ ಖಾತೆ)
ಒಂದೇ ಸಿನಿರಂಗದಲ್ಲಿ ಕೆಲಸ ಮಾಡುತ್ತಿರುವ ನಟಿಯರಾದ ಶ್ರುತಿ ಹಾಗೂ ಮಾಲಾಶ್ರೀ ಸಮಕಾಲೀನರು.
2/ 8
ನಿರ್ಮಾಪಕ ಅಕಾಲಿಕ ಮರಣದಿಂದ ಮಾಲಾಶ್ರೀ ಅವರ ಇಡೀ ಕುಟುಂಬ ನೋವಿನಲ್ಲಿ ಮುಳುಗಿದೆ.
3/ 8
ಗಂಡನನ್ನು ಕಳೆದು ಕೊಂಡು ನೋವಿನಲ್ಲಿರುವ ಸ್ನೇಹಿತೆ ಮಾಲಾಶ್ರೀ ಅವರಿಗೆ ಧೈರ್ಯ ತುಂಬುವ ಕೆಲಸಕ್ಕೆ ಮುಂದಾಗಿದ್ದಾರೆ ಶ್ರುತಿ.
4/ 8
ನಿಮ್ಮ ಅಭಿಮಾನಿಯಾಗಿ, ಸಹೋದ್ಯೋಗಿಯಾಗಿ ಹಾಗೂ ಗೆಳತಿಯಾಗಿ ಇಂಥ ದುಖಃದ ಪರಿಸ್ಥಿತಿಯಲ್ಲಿ ನಿಮ್ಮನ್ನು ನೋಡಲು ಸಾಧ್ಯವಾಗದೇ, ನಿಮ್ಮ ಕಣ್ಣೀರನ್ನು ಒರೆಸಲು ಸಾಧ್ಯವಾಗದ ಈ ಕ್ರೂರ ಪರಿಸ್ಥಿತಿಗೆ ನನ್ನೊಂದು ದಿಕ್ಕಾರ ಎಂದು ಮಾಲಾಶ್ರೀ ಅವರಿಗೆ ಶ್ರುತಿ ಸಾಮಾಜಿಕ ಜಾಲತಾಣದ ಮೂಲಕ ಭಾವುಕರಾಗಿ ಪತ್ರ ಬರೆದಿದ್ದಾರೆ.
5/ 8
ನಿಮಗೆ ಆಗಿರುವ ನಷ್ಟವನ್ನು ಯಾರಿಂದಲೂ ತುಂಬಲಾಗುವುದಿಲ್ಲ. ಆದರೆ ಮುಂಬರುವ ದಿನಗಳನ್ನು ಧೈರ್ಯವಾಗಿ ನೀವು ಎದುರಿಸಲೇಬೇಕು. ನೀವು ಹುಟ್ಟು ಹೋರಾಟಗಾರ್ತಿ ಇನ್ನು ಮುಂದೆ ನಿಮ್ಮ ಮುದ್ದು ಮಕ್ಕಳಿಗಾಗಿ ಹಾಗೂ ಅಭಿಮಾನಿಗಳಿಗಾಗಿ ಎದುರಾಗಲಿರುವ ದಿನಗಳನ್ನು ಧೈರ್ಯವಾಗಿ ಎದುರಿಸಬೇಕಾಗಿದೆ ಎಂದು ಧೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ ಶ್ರುತಿ.
6/ 8
ಮಾಲಾಶ್ರೀ ಅವರಿಗೆ ಪತ್ರ ಬರೆದಿರುವ ಶ್ರುತಿ ಅದರ ಜೊತೆಗೆ ಎಲ್ಲರಲ್ಲೂ ಒಂದು ಕಳಕಳಿಯ ಮನವಿ ಮಾಡಿದ್ದಾರೆ.
7/ 8
ಮುಂದೊಂದು ದಿನ ಈ ಕುಟುಂಬದ ಸದಸ್ಯರು ಬದುಕನ್ನು ಕಟ್ಟಿಕೊಳ್ಳಲು ಅವರು ಮಾಡುವ ಪ್ರಯತ್ನಕ್ಕೆ ನಿಮ್ಮೆಲ್ಲರ ಸಹಕಾರ ಇರಲಿ. ಸೆಲೆಬ್ರಿಟಿಗಳ ಬದುಕಿನ ಬಗ್ಗೆ ಸುಲಭವಾಗಿ ಮತ್ತು ಹಗುರವಾಗಿ ಕಮೆಂಟ್ ಮಾಡುವುದರ ಬದಲು ಒಂದು ಒಳ್ಳೆಯ ಕಮಿಟ್ಮೆಂಟ್ ಇರಲಿ. ಏಕೆಂದರೆ ಬದುಕನ್ನು ಕಟ್ಟಿಕೊಳ್ಳುವ ಕೆಲಸ ಸುಲಭವಲ್ಲ ಎಂದು ನೆಟ್ಟಿಗರಲ್ಲಿ ಮನವಿ ಮಾಡಿದ್ದಾರೆ ಶ್ರುತಿ.
8/ 8
ಮಾಲಾಶ್ರೀ, ಜಯಂತಿ, ಸಿತಾರಾ, ಶ್ರುತಿ ಹಾಗೂ ಮಾಲಾಶ್ರೀ ಅವರ ಸಹೋದರಿ ಸಹ ಈ ಫೋಟೋದಲ್ಲಿದ್ದಾರೆ.