Happy Birthday Sharan: ಅಣ್ಣನ ಹುಟ್ಟುಹಬ್ಬದಂದು ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದ ನಟಿ ಶ್ರುತಿ
Shruti Krishna: ಸ್ಯಾಂಡಲ್ವುಡ್ ನಟಿ ಶ್ರುತಿ ಇಂದು ತಮ್ಮ ಅಣ್ಣ ಶರಣ್ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ಜೊತೆಗೆ ಅಣ್ಣನ ಜೊತೆ ಬಾಲ್ಯದಲ್ಲಿ ಕಳೆದ ದಿನಗಳನ್ನು ನೆನಪಿಸಿಕೊಳ್ಳುತ್ತಾ ಬಾಲ್ಯದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಶ್ರುತಿ ಇನ್ಸ್ಟಾಗ್ರಾಂ ಖಾತೆ)
ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟ ಶರಣ್ ಅವರಿಗೆ ಅವರ ಸಹೋದರಿ ನಟಿ ಶ್ರುತಿ ಶುಭ ಕೋರಿದ್ದಾರೆ.
2/ 7
ಹುಟ್ಟುಹಬ್ಬದಂದು ಬಾಲ್ಯದ ಕೆಲವು ಚಿತ್ರಗಳನ್ನೂ ಹಂಚಿಕೊಂಡಿದ್ದಾರೆ ಶ್ರುತಿ.
3/ 7
ಬದುಕು ಮತ್ತಷ್ಟು ಬೆಳಗಲಿ. ಮುಂದಿನ ನಿನ್ನ ನಿರ್ಮಾಣದ ಚಿತ್ರ ಗುರು ಶಿಷ್ಯರು ನಿನ್ನೆಲ್ಲ ಸಿನಿಮಾಗಳಿಗಿಂತ ದೊಡ್ಡ ಯಶಸ್ಸನ್ನು ಕಾಣಲಿ. ದೇವರು ನಿನಗೆ ಆಯಸ್ಸು ಆರೋಗ್ಯ ನೆಮ್ಮದಿ ಕೊಟ್ಟು ಕಾಪಾಡಲಿ ಅಣ್ಣ ಎಂದು ಶ್ರುತಿ ಹಾರೈಸಿದ್ದಾರೆ.
4/ 7
ನನ್ನ ಬಾಲ್ಯದ ದಿನಗಳನ್ನು ಅಪ್ಪ-ಅಮ್ಮ ನಿಗಿಂತ ನಿನ್ನೊಂದಿಗೆ ಜಾಸ್ತಿ ಕಳೆದಿದ್ದು ಸುಖವೊ ದುಃಖವೋ ಇಂದಿಗೆ ಅವೆಲ್ಲವೂ ಸುಂದರ ನೆನಪುಗಳು ಎಂದು ಹಳೇ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
5/ 7
ಶರಣ್ ಅವರ ಅಭಿಮಾನಿಗಳಿಗಾಗಿ ಅವರ ಕೆಲವು ಬಾಲ್ಯದ ದಿನಗಳ ಫೋಟೋಗಳನ್ನು ಶ್ರುತಿ ಹಂಚಿಕೊಂಡಿದ್ದಾರೆ.