Shruthi: 15 ವರ್ಷಗಳ ನಂತರ ಮೈಸೂರಿನ ಕರೀಘಟ್ಟಕ್ಕೆ ಹೋದ ಶ್ರುತಿಗೆ ಸಿಕ್ಕ ಆತ್ಮೀಯರಿವರು: ಇಲ್ಲಿವೆ ಚಿತ್ರಗಳು..!
ಪ್ರವಾಸೋದ್ಯಮ ನಿಗಮದ ಅಧ್ಯಕ್ಷೆಯಾಗಿರುವ ಶ್ರುತಿ ಕೆಲಸದ ಮೇಲೆ ಮೈಸೂರಿನ ಕರೀಘಟ್ಟಕ್ಕೆ ಹೋಗಿದ್ದರಂತೆ, ಆಗ ಅಲ್ಲಿ 13 ವರ್ಷಗಳಿಂದ ಪರಿಚಯವಿರುವ ಆತ್ಮೀಯರೊಬ್ಬರು ಸಿಕ್ಕಿದ್ದಾರೆ. ಶ್ರುತಿ ಅವರನ್ನು ಕಂಡ ಕೂಡಲೇ ಏನು ಕೂಸೇ ಹೇಗಿದ್ದೀಯಾ ಎಂದು ಆತ್ಮೀಯತೆಯಿಂದ ಮಾತನಾಡಿದ್ದಾರೆ. ಅವರನ್ನು ಭೇಟಿ ಮಾಡಿದ ಅನುಭವವನ್ನು ನಟಿ ಶ್ರುತಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಶ್ರುತಿ ಕೃಷ್ಣನ್ ಇನ್ಸ್ಟಾಗ್ರಾಂ ಖಾತೆ)
ಪ್ರವಾಸೋದ್ಯಮ ನಿಗಮದ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರುತಿ ಜೊತೆಗೆ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಇತ್ತೀಚೆಗೆ ತೆರೆಕಂಡ ಆ್ಯಕ್ಟ್ 1978ನಲ್ಲೂ ನಟಿಸಿದ್ದಾರೆ.
2/ 8
ಪ್ರವಾಸೋದ್ಯಮ ಕೆಲಸದ ಮೇಲೆ ಮೈಸೂರಿನ ಕರೀಘಟ್ಟಕ್ಕೆ ಹೋಗಿದ್ದರಂತೆ ಶ್ರುತಿ. ಈ ಪಯಣದಲ್ಲಿ ಅವರಿಗೆ ಒಂದು ಸರ್ಪ್ರೈಸ್ ಸಿಕ್ಕಿದೆ.
3/ 8
ಆ ಸರ್ಪ್ರೈಸ್ ಮತ್ತಾರೂ ಅಲ್ಲ. ಇವರೇ ಆ ಸರ್ಪ್ರೈಸ್. ಕರೀಘಟ್ಟದ ಕುರಿಗಾಹಿ. ಇವರ ಜೊತೆ ಶ್ರುತಿ ಅವರಿಗೆ 13 ವರ್ಷಗಳ ಪರಿಚಯವಿದೆಯಂತೆ.
4/ 8
ಈ ಜಾಗದಲ್ಲಿ ಶ್ರುತಿ ಅವರ ಸಾಕಷ್ಟು ಸಿನಿಮಾಗಳು ಚಿತ್ರೀಕರಣಗೊಂಡಿವೆಯಂತೆ. ಆಗ ಇವರ ಪರಿಚಯವಾಗಿದ್ದು, ಶ್ರುತಿ ಈ ವ್ಯಕ್ತಿಯ ಮನೆಗೆ ಹೋಗಿ ಊಟ ಸಹ ಮಾಡಿದ್ದಾರಂತೆ. ಈ ಬಗ್ಗೆ ಶ್ರುತಿ ದೀರ್ಘವಾಗಿ ಬರೆದುಕೊಂಡಿದ್ದಾರೆ.
5/ 8
ಶ್ರುತಿ ಅವರನ್ನು ನೋಡಿದ ಕೂಡಲೇ ಏನು ಕೂಸೇ ಹೇಗಿದ್ದೀಯಾ, ಅಮ್ಮ ಹೇಗಿದ್ದಾರೆ ಎಂದು ಪ್ರೀತಿಯಿಂದ ಮಾತನಾಡಿಸಿದ್ದಾರೆ ಇವರು. ಇದನ್ನೇ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ ಶ್ರುತಿ.
6/ 8
ರಾಜ್ಯದ ಜನರು ನನ್ನ ಸಿನಿಮಾ ನಟಿಯಾಗಿ ಮಾತ್ರವಲ್ಲದೆ ಮನೆಯ ಮಗಳಂತೆ ಭಾವಿಸುತ್ತಾರೆ ಎಂದು ಖುಷಿಯಿಂದ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಕುರಿ ಮರಿ ಜೊತೆ ತೆಗೆಸಿಕೊಂಡ ಕೆಲವು ಚಿತ್ರಗಳನ್ನೂ ಹಂಚಿಕೊಂಡಿದ್ದಾರೆ.
7/ 8
ಇತ್ತೀಚೆಗಷ್ಟೆ ಶಶಿ ಕುಮಾರ್ ಅವರೊಂದಿಗೆ ಸಿನಿಮಾ ಚಿತ್ರೀಕರಣದವೊಂದರಲ್ಲಿ ಭಾಗವಹಿಸಿದ್ದರು ಶ್ರುತಿ.
8/ 8
ಚಿತ್ರೀಕರಣದ ವೇಳೆ ಶಶಿ ಕುಮಾರ್, ಶ್ರುತಿ, ತಾರಾ ಹಾಗೂ ಸುಧಾರಾಣಿ ವಿಡಿಯೋ ಕಾಲ್ನಲ್ಲಿ ಮಾತನಾಡಿದ್ದಾರೆ. ಅದರ ಸ್ಕ್ರೀನ್ಶಾಟ್ ಸಹ ಹಂಚಿಕೊಂಡಿದ್ದಾರೆ.