Shriya Saran enjoying with Daughter: ಶ್ರಿಯಾ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಸಿನಿಮಾದಲ್ಲಿ ನಟಿಸಿದ್ದಾರೆ. ತೆರೆ ಮೇಲೆ ಅಜಯ್ ದೇವಗನ್ ಅವರ ಪತ್ನಿ ಪಾತ್ರದಲ್ಲಿ ನಟಿಸಿದ್ದಾರೆ. ಇದೊಂದು ಸಿನಿಮಾಗೆ ತಿರುವು ತಂದುಕೊಡುವ ಪಾತ್ರ ಎಂದು ಹೇಳಲಾಗುತ್ತಿದೆ.
ಖ್ಯಾತ ನಟಿ ಶ್ರೀಯಾ ಶರಣ್ ಅವರು ಗುಟ್ಟಾಗಿ ಮುಗು ಮಾಡಿಕೊಂಡರು. ತಾವು ಪ್ರೆಗ್ನೆಂಟ್ ಆಗಿರುವ ವಿಚಾರವನ್ನು ಅವರು ಮುಚ್ಚಿಟ್ಟಿದ್ದರು. ಹೆಣ್ಣು ಮಗು ಜನಿಸಿ ಒಂದೂವರೆ ವರ್ಷ ಆಗುವವರೆಗೂ ಅವರು ಈ ರಹಸ್ಯವನ್ನು ಕಾಯ್ದುಕೊಂಡಿದ್ದರು.
2/ 7
ಇತ್ತೀಚೆಗಷ್ಟೇ ವಿಷಯ ಬಹಿರಂಗ ಆಯಿತು. ವಿಶೇಷ ಏನೆಂದರೆ ತಮ್ಮ ಮಗುವಿಗೆ ರಾಧಾ ಶರಣ್ ಕೊಸ್ವೀವ್ ಎಂದು ನಾಮಕರಣ ಮಾಡಿದ್ದರು. ಹೀಗೆ ಹೆಸರು ಇಡಲು ಕಾರಣ ಏನು ಎಂಬುದನ್ನು ಕೂಡ ಅವರು ವಿವರಿಸಿದ್ದರು. ರಾಧಾ ಎಂಬ ಹೆಸರಿಗೆ ರಷ್ಯಾದ ಕನೆಕ್ಷನ್ ಸಹ ಇದೆ.
3/ 7
ಶ್ರಿಯಾ ಶರಣ್ ಮದುವೆ ಆಗಿರುವುದು ರಷ್ಯಾದ ಟೆನಿಸ್ ಆಟಗಾರ ಆಂಡ್ರೀ ಕೊಸ್ಚೀವ್ ಅವರನ್ನು. ‘ನಮಗೆ ಹೆಣ್ಣು ಮಗು ಜನಿಸಿದೆ ಎಂಬ ವಿಷಯ ನಮ್ಮ ತಾಯಿಗೆ ಗೊತ್ತಾದ ತಕ್ಷಣ ರಾಧಾ ರಾಣಿ ಬರುತ್ತಿದ್ದಾಳೆ ಎಂದು ಅವರು ಹೇಳಿದ್ದರಂತೆ.
4/ 7
ಆಗ ನನ್ನ ಪತಿ ಆಂಡ್ರೀಗೆ ಅಚ್ಚರಿ ಆಯಿತು. ನಿಮ್ಮ ತಾಯಿ ಯಾಕೆ ರಷ್ಯಾದ ಹೆಸರನ್ನು ಹೇಳುತ್ತಿದ್ದಾರೆ ಅಂತ ಅವರು ನನ್ನನ್ನು ಕೇಳಿದರು. ರಾಧಾ ಎಂದರೆ ರಷ್ಯಾದ ಹೆಸರಲ್ಲ ಅಂತ ನಾನು ಹೇಳಿದೆ. ರಾಧಾ ಎಂದರೆ ರಷ್ಯನ್ ಭಾಷೆಯಲ್ಲಿ ಖುಷಿ ಎಂದರ್ಥ ಎಂದು ಅವರು ಹೇಳಿದ್ದರಂತೆ
5/ 7
ಹಾಗಾಗಿ ನಾವು ಅದೇ ಹೆಸರನ್ನು ಮಗಳಿಗೆ ಇಡಲು ನಿರ್ಧರಿಸಿದೆವು. ರಾಧಾ ಶರಣ್ ಕೊಸ್ಚೀವ್ ಎಂಬುದು ನಮ್ಮ ಮಗಳ ಪೂರ್ಣ ಹೆಸರು’ ಎಂದು ಶ್ರೀಯಾ ಶರಣ್ ಹೇಳಿದ್ದಾರೆ.
6/ 7
ಶ್ರಿಯಾ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಸಿನಿಮಾದಲ್ಲಿ ನಟಿಸಿದ್ದಾರೆ. ತೆರೆ ಮೇಲೆ ಅಜಯ್ ದೇವಗನ್ ಅವರ ಪತ್ನಿ ಪಾತ್ರದಲ್ಲಿ ನಟಿಸಿದ್ದಾರೆ. ಇದೊಂದು ಸಿನಿಮಾಗೆ ತಿರುವು ತಂದುಕೊಡುವ ಪಾತ್ರ ಎಂದು ಹೇಳಲಾಗುತ್ತಿದೆ
7/ 7
ಶ್ರಿಯಾ ತೆಲುಗು, ಹಿಂದಿ, ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಶ್ರಿಯಾ ‘ಅರಸು’ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಂತರ ರೂಪಾ ಅಯ್ಯರ್ ನಿರ್ದೇಶನದ ‘ಚಂದ್ರ’ ಸಿನಿಮಾದಲ್ಲಿ ನಟಿಸಿದ್ದರು.