Shriya Saran: ಹೆಣ್ಣು ಮಗುವಿನ ತಾಯಿಯಾದ ಶ್ರಿಯಾ; ಎರಡು ವರ್ಷ ಈ ವಿಚಾರ ಮುಚ್ಚಿಟ್ಟಿದ್ದು ಯಾಕೆ?
ದಕ್ಷಿಣ ಭಾರತದ ಖ್ಯಾತ ನಟಿ ಶ್ರಿಯಾ ಹೆಣ್ಣು ಮಗುವಿನ ತಾಯಿಯಾಗಿದ್ದಾರೆ. ರಷ್ಯಾದ ಗೆಳೆಯ ಆಂಡ್ರೆ ಕೊಶ್ಚೆವ್ ಜೊತೆ 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ನಟಿ ಶ್ರಿಯಾ 2020ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ, ಈ ವಿಚಾರವನ್ನು ಅವರು ಅಭಿಮಾನಿಗಳಿಗೆ ಇಂದು ಬಹಿರಂಗಪಡಿಸಿದ್ದಾರೆ.
ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯಾಗಿರುವ ಶ್ರಿಯಾ 2020ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ, ಈ ವಿಷಯವನ್ನು ಉದ್ದೇಶಪೂರ್ವಕವಾಗಿ ಅಭಿಮಾನಿಗಳಿಂದ ಮುಚ್ಚಿಟ್ಟಿದ್ದಾರೆ
2/ 5
ಇದಕ್ಕೆ ಕಾರಣ 2020ರಲ್ಲಿ ಇಡೀ ಜಗತ್ತು ಕೋವಿಡ್ನಿಂದ ಬಳಲುತ್ತಿತ್ತು. ಇಂತಹ ಸಂದರ್ಭದಲ್ಲಿ ತಮ್ಮ ಕುಟುಂಬಕ್ಕೆ ಹೊಸ ಅತಿಥಿಯ ಆಗಮನದ ಖುಷಿಯಲ್ಲಿದ್ದೇವು. ಈ ಸಮಯದಲ್ಲಿ ಈ ವಿಷಯ ಬಹಿರಂಗ ಪಡಿಸುವುದು ಸೂಕ್ತವಲ್ಲ ಎಂದು ಅಭಿಮಾನಿಗಳಿಂದ ಮುಚ್ಚಿಟ್ಟಿದ್ದಾಗಿ ತಿಳಿಸಿದ್ದಾರೆ
3/ 5
ಕೋವಿಡ್ ಲಾಕ್ಡೌನ್ ಸಮಯದಲ್ಲಿ ಹೊಸ ಪ್ರಪಂಚವೊಂದು ನಮ್ಮ ಕುಟುಂಬಕ್ಕೆ ಬಂದಿತು. ಆದರೆ, ಈ ಸಮಯದಲ್ಲಿ ಈ ವಿಷಯವನ್ನು ಹೇಳುವುದು ಸರಿಯಲ್ಲ ಎಂದುಈ ಬಗ್ಗೆ ತಿಳಿಸದಕ್ಕೆ ಕಾರಣ ಹೇಳಿದ್ದಾರೆ
4/ 5
2018ರಲ್ಲಿ ರಷ್ಯಾನ್ ಗೆಳೆಯ ಆಂಡ್ರೆ ಕೊಶ್ಚೆವ್ ಜೊತೆ ನಟಿ ಶ್ರಿಯಾ ಸಪ್ತಪದಿ ತುಳಿದಿದ್ದರು. ಇದಾದ ಬಳಿಕವೂ ಅವರ ಜನಪ್ರಿಯತೆ ಕಡಿಮೆಯಾಗಿರಲಿಲ್ಲ. ಮದುವೆಯಾದ ಬಳಿಕವೂ ಅನೇಕ ಸಿನಿಮಾಗಳಲ್ಲಿ ನಟಿ ನಟಿಸಿದ್ದಾರೆ
5/ 5
ಸದ್ಯ ಮಗುವಿನ ಪಾಲನೆಯ ವಿಡಿಯೋವನ್ನು ಹಂಚಿಕೊಂಡಿರುವ ನಟಿಗೆ ಶುಭಾಯಶಯಗಳ ಮಹಾಪೂರವೇ ಹರಿದು ಬಂದಿದೆ.