ಸ್ಯಾಂಡಲ್ವುಡ್ ನಟಿ ಶ್ರೀಲೀಲಾ ಟಾಲಿವುಡ್ ನಲ್ಲಿ ಬ್ಯುಸಿ ಆಗಿದ್ದಾರೆ. ಸದ್ಯ ಧಮಾಕಾ ಪ್ರಚಾರದಲ್ಲಿ ತೊಡಗಿದ್ದಾರೆ. ಧಮಾಕಾ ಪ್ರಚಾರ ಎಂದು ನಟಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿದ್ದಾರೆ.
2/ 8
ಧಮಾಕಾ 2022 ರ, ತೆಲುಗು ಭಾಷೆಯ ಸಾಹಸಮಯ ಚಲನಚಿತ್ರವಾಗಿದ್ದು, ತ್ರಿನಾಥ ರಾವ್ ನಕ್ಕಿನಾ ಬರೆದು ನಿರ್ದೇಶಿಸಿದ್ದಾರೆ ಮತ್ತು ಪೀಪಲ್ ಮೀಡಿಯಾ ಫ್ಯಾಕ್ಟರಿ ಮತ್ತು ಅಭಿಷೇಕ್ ಅಗರ್ವಾಲ್ ಆಟ್ರ್ಸ್ ಬ್ಯಾನರ್ಗಳ ಅಡಿಯಲ್ಲಿ ಅಭಿಷೇಕ್ ಅಗರ್ವಾಲ್ ಮತ್ತು ಟಿ ಜಿ ವಿಶ್ವ ಪ್ರಸಾದ್ ನಿರ್ಮಿಸಿದ್ದಾರೆ.
3/ 8
ಚಿತ್ರಕ್ಕೆ ಕಾರ್ತಿಕ್ ಘಟ್ಟಮನೇನಿ ಛಾಯಾಗ್ರಹಣ ಮಾಡಿದ್ದಾರೆ. ಚಿತ್ರದಲ್ಲಿ ರವಿತೇಜ ಮತ್ತು ಶ್ರೀ ಲೀಲಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಜಯರಾಮ್, ರಾವ್ ರಮೇಶ್, ಸಚಿನ್ ಖೇಡೇಕರ್ ಮತ್ತು ತಣಿಕೆಲ್ಲ ಭರಣಿ ಇತರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
4/ 8
ನಟಿ ಶ್ರೀಲೀಲಾ, ಕನ್ನಡದಲ್ಲಿ ಭರಾಟೆ ಮತ್ತು ಕಿಸ್ ಸಿನಿಮಾ ಮಾಡಿದ್ದಾರೆ. ಈಗ ಟಾಲಿವುಡ್ ನಲ್ಲಿ ಅವಕಾಶ ಗಿಟ್ಟಿಸಿಕೊಂಡು, ಟಾಲಿವುಡ್ ಚಿತ್ರರಂಗದಲ್ಲಿ ಅತ್ಯಂತ ಬ್ಯುಸಿ ಆಗಿರುವ ನಟಿ ಆಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
5/ 8
ಪೆಳ್ಳಿ ಸಂದಡಿ ಸಿನಿಮಾದದಲ್ಲಿ ನಟ ಶ್ರೀಕಾಂತ್ ಪುತ್ರ ರೋಷನ್ ಜೊತೆ ನಟಿಸುವ ಮೂಲಕ ನಟಿ ಶ್ರೀಲೀಲಾ, ತೆಲುಗು ಪ್ರೇಕ್ಷಕರ ಮನ ಗೆದ್ದಿದ್ದಾರೆ. ಮತ್ತಷ್ಟು ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
6/ 8
ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಶ್ರೀಲೀಲಾ ಅವರಿಗೆ ಕನ್ನಡ ಅಂದ್ರೆ ತುಂಬಾ ಪ್ರೀತಿ. ಕನ್ನಡದ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದಾರೆ.
7/ 8
ಧಮಾಕಾ ಸಿನಿಮಾ ಪ್ರಚಾರದಲ್ಲಿ ತೊಡಗಿರುವ ನಟಿ ಶ್ರೀಲೀಲಾಗೆ ಕಾಂತಾರ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ನಟಿ ಶ್ರೀಲೀಲಾ, ಕನ್ನಡ ಸಿನಿಮಾಗಳ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದರು.
8/ 8
ದೇಶಾದ್ಯಂತ ನಮ್ಮ ಕನ್ನಡ ಸಿನಿಮಾಗಳು ಕಾಣಿಸಿಕೊಳ್ಳುತ್ತಿರುವುದು ಹಾಗೂ ಭರ್ಜರಿ ಸದ್ದು ಮಾಡುತ್ತಿರುವುದು ತುಂಬ ಖುಷಿ ತಂದು ಕೊಡುವ ವಿಚಾರವಾಗಿದೆ. ಇದು ನನಗೆ ಖುಷಿ ಕೊಟ್ಟಿದೆ ಎಂದು ಶ್ರೀಲೀಲಾ ಹೇಳಿದ್ದರು.