ನಟಿ ಶಾನ್ವಿ ಶ್ರೀವಾಸ್ತವ ಅವರು 8 ಡಿಸೆಂಬರ್ 1993 ರಂದು ವಾರಣಾಸಿಯಲ್ಲಿ ಜನಿಸಿದರು. ಉತ್ತರ ಪ್ರದೇಶದ ಅಜಂಗಢದ ಚಿಲ್ಡ್ರನ್ ಕಾಲೇಜಿನಲ್ಲಿ ಓದಿದ್ದಾರೆ. ಮುಂಬೈನ ಠಾಕೂರ್ ಕಾಲೇಜ್ ಆಫ್ ಸೈನ್ಸ್ ಅಂಡ್ ಕಾಮರ್ಸ್ನಲ್ಲಿ ಪದವಿ ಪಡೆದಿದ್ದಾರೆ.
2/ 8
ಶಾನ್ವಿ ಶ್ರೀವಾಸ್ತವ ಕಾಲೇಜಿಗೆ ಹೋಗುತ್ತಿರುವಾಗ್ಲೇ 2012 ರಲ್ಲಿ ಬಿ. ಜಯಾ ಅವರ ತೆಲುಗು ಚಿತ್ರ ಲವ್ಲಿಯಲ್ಲಿ ಅಭಿನಯಿಸುವ ಮೂಲಕ ಸಿನಿಮಾ ಲೋಕಕ್ಕೆ ಎಂಟ್ರಿ ಆಗಿದ್ದರು.
3/ 8
ಶಾನ್ವಿ ಅವರ ಎರಡನೇ ಚಿತ್ರವು ಸಹ ತೆಲುಗು ಸಿನಿಮಾನೇ. ಅಡ್ಡಾದಲ್ಲಿ ಅವರು ಫ್ಯಾಷನ್ ಡಿಸೈನಿಂಗ್ ವಿದ್ಯಾರ್ಥಿಯಾಗಿ ಕಾಣಿಸಿಕೊಂಡರು. ಆ ಚಿತ್ರದ ಮೂಲಕ ಸಾನ್ವಿ ಜನರಿಗೆ ಇಷ್ಟವಾದರು.
4/ 8
ಶಾನ್ವಿ 2014 ರಲ್ಲಿ, ಹಾರರ್ ಕಮ್ ಕಾಮಿಡಿ ಚಲನಚಿತ್ರ ಚಂದ್ರಲೇಖಾ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದರು. ಚಂದ್ರಲೇಖಾದ ಅಭಿನಯವು ಕನ್ನಡಿಗರ ಮನಸ್ಸು ಗೆದ್ದಿತು.
5/ 8
2015 ರಲ್ಲಿ, ಶಾನ್ವಿ ಅವರು ದಕ್ಷಿಣ ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದರು. ಮಂಜು ಮಾಂಡವ್ಯ ನಿರ್ದೇಶಿಸಿದ ಮಾಸ್ಟರ್ಪೀಸ್ ಗಾಗಿ ಕನ್ನಡದ ಅತ್ಯುತ್ತಮ ನಟಿಗಾಗಿ ಫಿಲ್ಮ್ ಫೇರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು. ಇದರಲ್ಲಿ ಯಶ್ ಜೊತೆ ಅಭಿನಯಿಸಿದ್ದಾರೆ.
6/ 8
ನಂತರ ತಾರಕ್ ನಲ್ಲಿ ಶಾನ್ವಿ ಅವರು ಅಭಿನಯಿಸಿದ್ದಾರೆ. ಈ ಚಿತ್ರಕ್ಕಾಗಿ ಅವರು ಫಿಲ್ಮ್ ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.
7/ 8
2019 ರಲ್ಲಿ ಶಾನ್ವಿ ಅವರು ಅವನೇ ಶ್ರೀಮನ್ನಾರಾಯಣ ಮತ್ತು ಗೀತಾ ಚಲಚಿತ್ರದಲ್ಲಿ ಅಭಿನಯಿಸಿದ್ದಾರೆ. ರಕ್ಷಿತ್ ಶೆಟ್ಟಿ, ಗಣೇಶ್ ಜೊತೆ ಸಾನ್ವಿ ನಟನೆ ಮಾಡಿದ್ದಾರೆ.
8/ 8
ಶಾನ್ವಿ ಶ್ರೀವಾಸ್ತವ ಅವರು 2018 ರಲ್ಲಿ ಚೀನೀ ಚಿತ್ರ ಯೇ ಟಿಯಾನ್ ಝಿ, ದಿ ಡಾರ್ಕ್ ಲಾರ್ಡ್ ನಲ್ಲಿ ಅಭಿನಯಿಸಿದ್ದಾರೆ. ಅದರ ಪಾತ್ರಕ್ಕಾಗಿ ಚೈನೀಸ್ ಕಲಿತರು.