ಕನ್ನಡತಿ ಧಾರಾವಾಹಿ ಮೂಲಕ ಖ್ಯಾತಿ ಪಡೆದಿರುವ ಸಾರಾ ಅಣ್ಣಯ್ಯ, 'ವರು' ಎಂದೇ ಹೆಸರುವಾಸಿಯಾಗಿದ್ದಾರೆ. ಸೈಕೋ ಪಾತ್ರ ಮಾಡಿ ಕನ್ನಡಿಗರ ಮನಸ್ಸಿನಲ್ಲಿ ಸ್ಥಾನ ಪಡೆದಿದ್ದಾರೆ. ಸಾರಾ ಪಿಂಕ್ ಕಲರ್ ಸೀರೆಯುಟ್ಟು, ಅದಕ್ಕೆ ತಕ್ಕ ರೀತಿ ಮೇಕಪ್ ಮಾಡಿಕೊಂಡು, ಒಡವೆಗಳನ್ನು ಹಾಕಿಕೊಂಡು ಸುಂದರವಾಗಿ ಕಾಣ್ತಾ ಇದ್ದಾರೆ. ಸಾರಾ ಅವರು ದೂರದ ಊರಿಂದ ಹಮ್ಮೀರ ಬಂದ ಹಾಡಿಗೆ ಈ ಸೀರೆಯಲ್ಲಿ ರೀಲ್ಸ್ ಮಾಡಿದ್ದಾರೆ. ಮಲ್ಲಿಗೆ ಹೂವು ಮಾತ್ರ ಮಿಸ್ಸಿಂಗ್ ಎಂದು ಪೋಸ್ಟ್ ಗೆ ಬರೆದುಕೊಂಡಿದ್ದಾರೆ. ಸಾರಾ ಅಣ್ಣಯ್ಯ ಆ ಹಾಡಿಗೆ ರೀಲ್ಸ್ ಮಾಡಿದ್ದರಿಂದ, ಯಾವ ಹಮ್ಮೀರ ನಿಮಗೆ ಸೀರೆ ತಂದು ಕೊಟ್ಟರು ಎಂದು ಅಭಿಮಾನಿಗಳು ಕೇಳಿದ್ದಾರೆ. ಇನ್ನೂ ಕೆಲವರು ಸೂಪರ್ ಎಂದು ಕಾಮೆಂಟ್ ಹಾಕಿದ್ದಾರೆ. ಕನ್ನಡತಿ ಧಾರಾವಾಹಿಯಲ್ಲಿ ಡಿಫರೆಂಟ್ ಪಾತ್ರ ಮಾಡಿದ್ದರು ಇವರು. ತನಗೆ ಬೇಕಾದ್ದನ್ನು ಹೇಗಾದ್ರೂ ಪಡೆಯೋ ಹಠ. ಅದು ಬೇರೆ ಅವರ ಪಾಲಾಗಿದ್ರೂ ಬಿಡದೇ ಅದೇ ಬೇಕು ಎನ್ನುವ ಹುಚ್ಚುತನ. ಕನ್ನಡತಿ ಧಾರಾವಾಹಿ ಮುಕ್ತಾಯವಾಗಿದೆ. ಹರ್ಷನನ್ನು ಇಷ್ಟ ಪಡ್ತಿದ್ದ ವರು, ಲಾಯರ್ ಹರ್ಷಿತ್‍ರನ್ನು ಮದುವೆ ಆಗುವ ಮೂಲಕ ಹ್ಯಾಪಿ ಎಂಡಿಂಗ್ ನೀಡಿದ್ದಾರೆ. ಸಾರಾ ಅಣ್ಣಯ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ತಮ್ಮ ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ. ಜನ ಅವುಗಳನ್ನು ಮೆಚ್ಚಿಕೊಳ್ತಾರೆ. ಸಾರಾ ಅವರು ಹೆಚ್ಚಾಗಿ ಮಾರ್ಡನ್ ಡ್ರೆಸ್ ಹಾಕ್ತಾರೆ. ಆದ್ರೆ ಸೀರೆಯಲ್ಲಿ ತುಂಬಾ ಚೆನ್ನಾಗಿ ಕಾಣ್ತಾರೆ ಎನ್ನುವುದು ಅಭಿಮಾನಿಗಳ ಅಭಿಪ್ರಾಯ.